first covid Patient dies : ಕೋವಿಡ್ ಸೋಂಕಿಗೆ ಕರ್ನಾಟಕದಲ್ಲಿ ಈ ವರ್ಷದ ಮೊದಲ ಬಲಿ

ಬೆಂಗಳೂರು : first covid Patient dies : ಕೋವಿಡ್ ವೈರಸ್ ಸೋಂಕು ಕರ್ನಾಟಕದಲ್ಲಿ ಮೊದಲ ಬಲಿ ಪಡೆದಿದೆ. ಕೊಪ್ಪಳದಲ್ಲಿ 65 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಕೋವಿಡ್ ವೈರಸ್ ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುತ್ತಿದ್ದರೂ ಕೂಡ ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುತ್ತಿಲ್ಲ.

ಕರ್ಕಾಟಕದಲ್ಲಿ ಮಂಗಳವಾರ ಒಟ್ಟು 17 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿಗೆ ತುತ್ತಾಗಿದ್ದ 36 ಮಂದಿ ಗುಣಮುಖರಾಗಿದ್ದಾರೆ. ಆದರೆ ಒಬ್ಬರು ಸಾವನ್ನಪ್ಪಿದ್ದಾರೆ. 2022ರ ಡಿಸೆಂಬರ್‌ 31ರಂದು ಕೊರೊನಾ ಸೋಂಕಿತ ಸಾವು ಪ್ರಕರಣ ದಾಖಲಾಗಿದ್ದು, ಆದರೆ ಆ ಬಳಿಕ ಯಾವುದೇ ಮರಣ ಪ್ರಕರಣ ದಾಖಲಾಗಿರಲಿಲ್ಲ. ನಿನ್ನೆ ರಾಜ್ಯದಲ್ಲಿ ಒಟ್ಟು 7,716 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪಾಸಿಟಿವಿಟಿ ದರ ಶೇ 0.2 ರಷ್ಟಿದೆ. ಕಳೆದ ಎರಡು ದಿನಗಳಿಗೆ ಹೋಲಿಕೆ ಮಾಡಿದ್ರೆ, ನಿನ್ನೆ ಅತೀ ಹೆಚ್ಚು ಸಂಖ್ಯೆಯಲ್ಲಿ ಪರೀಕ್ಷೆ ನಡೆಸಲಾಗಿದೆ. ಹೊಸ ಪ್ರಕರಣಗಳು 7 ಇಳಿಕೆಯಾಗಿವೆ.

ಕಳೆದ ವರ್ಷ (2022) ಡಿಸೆಂಬರ್‌ 31ರಂದು ಸೋಂಕಿತರ ಸಾವು ವರದಿಯಾಗಿತ್ತು. ಜ.15 ರಂದು ಕೊಪ್ಪಳದಲ್ಲಿ ಕೊರೋನಾ ತಗುಲಿದ್ದ ವೃದ್ಧೆ ಸಾವಿಗೀಡಾಗಿದ್ದು, ಜ.17ರಂದು ಆರೋಗ್ಯ ಇಲಾಖೆ ಬುಲಿಟಿನ್‌ನಲ್ಲಿ ವರದಿಯಾಗಿದೆ. ವೃದ್ಧೆಗೆ ಕ್ಷಯ (ಟಿಬಿ) ಕೂಡಾ ಇತ್ತು. ಎರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳದೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಲ್ಲೇ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿವೆ.ರಾಜ್ಯದಲ್ಲಿ ಪ್ರಸ್ತುತ 103 ಸಕ್ರಿಯ ಕೊರೋನಾ ಸೋಂಕಿತರಿದ್ದು, ಈ ಪೈಕಿ 7 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 96 ಮಂದಿ ಮನೆಯಲ್ಲಿ ಆರೈಕೆ ಪಡೆಯುತ್ತಿದ್ದಾರೆ.

ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್ ವೈರಸ್ ಸೋಂಕಿತ ಪ್ರಕರಣ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದಂತೆಯೇ ಕರ್ನಾಟಕದಲ್ಲಿಯೂ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೆ ತರಲಾಗಿದೆ. ಈಗಾಗಲೇ ರಾಜ್ಯ ಸರಕಾರ ಕೋವಿಡ್‌ ಮಾರ್ಗಸೂಚಿಯನ್ನು ಹೊರಡಿಸಿದೆ.

ಇದನ್ನೂ ಓದಿ : ಹೋಟೆಲ್‌ನಲ್ಲಿ ಆಹಾರ ಸೇವನೆ : 68 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : Student hanging in hostel: ಹಾಸ್ಟೆಲ್‌ ಕೊಠಡಿಯಲ್ಲಿ ಕೈ ಕಟ್ಟಿ, ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆ

first covid Patient dies in Karnataka 2023

Comments are closed.