ಸೋಮವಾರ, ಏಪ್ರಿಲ್ 28, 2025
HomeCinemaLiger :ಲೈಗರ್ ಅವತಾರದಲ್ಲಿ ಗೀತಗೋವಿಂದಂ ಹೀರೋ : ಟೀಸರ್ ನಲ್ಲಿ ಮಿಂಚಿದ ವಿಜಯ್ ದೇವರಕೊಂಡ

Liger :ಲೈಗರ್ ಅವತಾರದಲ್ಲಿ ಗೀತಗೋವಿಂದಂ ಹೀರೋ : ಟೀಸರ್ ನಲ್ಲಿ ಮಿಂಚಿದ ವಿಜಯ್ ದೇವರಕೊಂಡ

- Advertisement -

ಕೆಲ ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಕ್ರೀಡೆಗೆ ಸಂಬಂಧಿಸಿದ ಕತೆಗಳು ಬಾಕ್ಸಫೀಸಿನಲ್ಲಿ ಮೋಡಿ ಮಾಡುತ್ತಿವೆ . ಹೀಗಾಗಿ ಸಾಲು ಸಾಲು ಸ್ಪೋರ್ಡ್ಸ್ ಸ್ಟೋರಿ ಓರಿಯಂಟೆಡ್ ಮೂವಿಗಳೆ ತೆರೆಗೆ ಬರುತ್ತಿವೆ. ಸುಲ್ತಾನ್, ಪೈಲ್ವಾನ್, 83 ಸೇರಿದಂತೆ ಸಾಲು ಸಾಲು ಮೂವಿಗಳ ಬಳಿಕ ಈಗ ತೆಲುಗಿನಲ್ಲೂ ಕ್ರೀಡೆ ಆಧರಿಸಿದ ಸಿನಿಮಾ ವೊಂದು ಸಖತ್ ಸದ್ದು ಮಾಡುತ್ತಿದ್ದು, ವಿಜಯ್ ದೇವರಕೊಂಡ ಆಭಿನಯದ ಲೈಗರ್ (Liger ) ಸಿನಿಮಾ ಪ್ರೇಕ್ಷಕರ ಮನಗೆಲ್ಲುವ ಭರವಸೆ ಮೂಡಿಸಿದೆ.

ಹೊಸವರ್ಷದ ಕೊಡುಗೆಯಾಗಿ ಲೈಗರ್ ಸಿನಿಮಾದ ಟೀಸರ್ ತೆರೆಗೆ ಬಂದಿದ್ದು, ರಿಲೀಸ್ ಆದ 24 ಗಂಟೆಯಲ್ಲಿ ಟೀಸರ್ 1.6 ಕೋಟಿ ವೀಕ್ಷಣೆ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದೆ. ಬಾಕ್ಸರ್ ಪಟುವಾಗಿ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿರೋ ವಿಜಯ್ ದೇವರಕೊಂಡ ಪರ್ಸನಾಲಿಟಿಗೆ ಪ್ರೇಕ್ಷಕರು ಮನಸೋತಿದ್ದು, ಸಿಕ್ಸ್ ಪ್ಯಾಕ್ ನಲ್ಲಿ ವಿಜಯ್ ಸಖತ್ ಮೋಡಿಮಾಡಿದ್ದಾರೆ. ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಕೂಡಾ ಈ ಸಿನಿಮಾದಲ್ಲಿ ನಟಿಸಿದ್ದು ನಾಯಕಿಯಾಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ಸಿನಿಮಾ ಈ ವರ್ಷದ ಮಧ್ಯ ಭಾಗದಲ್ಲಿ ತೆರೆಗೆ ಬರೋ ಸಾಧ್ಯತೆ ಇದೆ.

ಈ ಸಿನಿಮಾ ಗಾಗಿ ವಿಜಯ್ ದೇವರಕೊಂಡ ಸಖತ್ ವರ್ಕೌಟ್ ಮಾಡಿದ್ದು ಜಿಮ್‌ನಲ್ಲಿ ಗಂಟೆಗಳ ಕಾಲ ದೇಹದಂಡಿಸಿದ್ದಾರೆ. ಬಾಲಿವುಡ್ ನ ಫೇಮಸ್ ಫಿಲ್ಮ್‌ ಮೇಕರ್ ಕರಣ‌ಜೋಹರ್ ಈ ಸಿನಿಮಾಗೆ ಹಣ ಹೂಡಿದ್ದು, ಟೀ ಮಾರಾಟ ಮಾಡುವ ವ್ಯಕ್ತಿಯೊಬ್ಬ ಕಷ್ಟಪಟ್ಟು ಹೋರಾಟ ಮಾಡಿ ಬಾಕ್ಸಿಂಗ್ ಕಲಿತು ಭಾರತವನ್ನು ಪ್ರತಿನಿಧಿಸುವ ದೃಶ್ಯವನ್ನು ಟೀಸರ್ ಒಳಗೊಂಡಿದೆ. ಪೋಕಿರಿ ಖ್ಯಾತಿಯ ಪುರಿ ಜಗನ್ನಾಥ್ ಸಿನಿಮಾ ನಿರ್ದೇಶಿಸಿದ್ದು, ಧರ್ಮ ಪ್ರೊಡಕ್ಷನ್ ಹೌಸ್ ಜೊತೆ ಚಿತ್ರ ನಿರ್ಮಾಣಕ್ಕೆ ಕರಣ ಜೋಹರ್ ಕೈ ಜೋಡಿಸಿದ್ದಾರೆ.

ಅರ್ಜುನ್ ರೆಡ್ಡಿ, ಗೀತಾ ಗೋವಿಂದಂ ಬಳಿಕ ಲೈಗರ್ ಸಿನಿಮಾ ವಿಜಯ್ ದೇವರಕೊಂಡ ಕೆರಿಯರ್ ನ ಬಹುನೀರಿಕ್ಷಿತ ಸಿನಿಮಾವಾಗಿದ್ದು, ಶೂಟಿಂಗ್ ನಲ್ಲಿ ವಿಜಯ್‌ ಬ್ಯುಸಿಯಾಗಿದ್ದಾರೆ. 80.5 ಸಾವಿರ ಫಾಲೋವರ್ಸ್ ಹೊಂದಿರೋ ವಿಜಯ್ ದೇವರ್ ಕೊಂಡ ತಮ್ಮ ಟ್ವೀಟರ್ ಅಕೌಂಟ್ ನಲ್ಲೂ ಟೀಸರ್ ಶೇರ್ ಮಾಡಿದ್ದು ಇದುವರೆಗೂ ಬರೋಬ್ಬರಿ 11 ಸಾವಿರಕ್ಕೂ ಅಧಿಕ ಜನರು ಇಷ್ಟಪಟ್ಟಿದ್ದಾರೆ. ಲೈಗರ್ ಸಿನಿಮಾಕ್ಕಾಗಿ ವಿಜಯ್ ದೇವರ ಕೊಂಡ ತಮ್ಮ ಲುಕ್‌ಕೂಡಾ ಬದಲಾಯಿಸಿಕೊಂಡಿದ್ದು, ಸಿನಿಮಾ 2022 ರ ಅಗಸ್ಟ್ ನಲ್ಲಿ ತೆರೆಗೆ ಬರಲಿದೆ.

ಇದನ್ನೂ ಓದಿ : ಶೇ. 90ರಷ್ಟು ಕನ್ನಡ ಚಿತ್ರಗಳಿಗೆ ಹಾಕಿದ ಹಣ ವಾಪಸ್; ಈವರ್ಷ ಕನ್ನಡ ಸಿನಿಮಾಗಳ ಭವಿಷ್ಯವೇನು?

ಇದನ್ನೂ ಓದಿ : 2022 ರಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಹಬ್ಬ: ತೆರೆಗೆ ಬರಲಿದೆ ಮೂರು ಬಿಗ್ ಬಜೆಟ್ ಚಿತ್ರ

( Geetagovindam Hero in the liger incarnation, Vijay Devokonda in the teaser )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular