ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾ (Ghost movie) ಶೂಟಿಂಗ್ ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಅರ್ಚನಾ ಜೋಯಿಸ್, ಬಾಲಿವುಡ್ ನಟ ಅನುಪಮ್ ಖೇರ್ ಸಿನಿಮಾದಲ್ಲಿ ನಟಿಸೋದು ಪಕ್ಕಾ ಆಗಿತ್ತು. ಶ್ರೀನಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಇತ್ತೀಚೆಗೆ ನಿರ್ಮಾಪಕರ ಸಂದೇಶ್ ನಾಗರಾಜ್ ತಮಿಳು ನಟ ವಿಜಯ್ ಸೇತುಪತಿ ಭೇಟಿ ಮಾಡಿದ್ದರು. ಸಂದೇಶ್ ನಾಗರಾಜ್ ತಮಿಳುನಾಡಿನಲ್ಲಿ ವಿಜಯ್ ಸೇತುಪತಿ ಭೇಟಿ ಮಾಡಿದ್ದ ಫೋಟೊಗಳು ವೈರಲ್ ಆಗಿತ್ತು.
ಇದನ್ನು ನೋಡಿ ಸೇತುಪತಿ ಕನ್ನಡದ ‘ಘೋಸ್ಟ್’ ಸಿನಿಮಾದಲ್ಲಿ ನಟಿಸ್ತಾರಾ? ಎನ್ನುವ ಅನುಮಾನ ಮೂಡಿತ್ತು. ಕಾರಣ ಸಂದೇಶ್ ನಾಗರಾಜ್ ಆ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಕಾಲಿವುಡ್ ಸೆನ್ಸೇಷನಲ್ ನಟ ವಿಜಯ್ ಸೇತುಪತಿ ಕನ್ನಡಕ್ಕೆ ಮತ್ತೆ ಬರ್ತಾರಾ? ಎನ್ನುವ ಚರ್ಚೆ ಶುರುವಾಗಿತ್ತು. ಶಿವಣ್ಣ- ಸೇತುಪತಿ ಸ್ಕ್ರೀನ್ ಶೇರ್ ಮಾಡಿದರೆ ಸಿನಿರಸಿಕರಿಗೆ ಹಬ್ಬವೇ ಸರಿ. ಸದ್ಯ ಸಂದೇಶ್ ನಾಗರಾಜ್ ಹಾಗೂ ವಿಜಯ್ ಸೇತುಪತಿ ಭೇಟಿಯ ಸೀಕ್ರೆಟ್ ರಿವೀಲ್ ಆಗಿದೆ. ಸಿನಿಮಾ ಬಗ್ಗೆಯೇ ಈ ಭೇಟಿ ವೇಳೆ ಚರ್ಚೆ ನಡೆದಿದೆ. ಆದರೆ ಯಾವ ಸಿನಿಮಾ ಎಂದು ನೋಡಬೇಕಿದೆ.
ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ‘ಘೋಸ್ಟ್’ ಸಿನಿಮಾ ಜೊತೆಗೆ ಪ್ರಭುದೇವ ನಟನೆಯ ‘ವೂಲ್ಫ್’ ಸಿನಿಮಾ ಕೂಡ ನಿರ್ಮಾಣ ಆಗುತ್ತಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ‘ವೂಲ್ಫ್’ ಸಿನಿಮಾಕ್ಕಾಗಿ ವಿಜಯ್ ಸೇತುಪತಿ ಹಾಡೊಂದನ್ನು ಹಾಡುತ್ತಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಲು ಸಂದೇಶ್ ನಾಗರಾಜ್ ಚೆನ್ನೈಗೆ ಹೋಗಿ ವಿಜಯ್ ಸೇತುಪತಿ ಬಗ್ಗೆ ಚರ್ಚೆ ನಡೆಸಿ ಬಂದಿದ್ದಾರೆ. ಸೇತುಪತಿ ಹಾಡು ಹಾಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಿನು ವೆಂಕಟೇಶ್ ನಿರ್ದೇಶನದ ಸೈಕಲಾಜಿಕಲ್ ಥ್ರಿಲ್ಲರ್ ‘ವೂಲ್ಫ್’ ಸಿನಿಮಾ ಶೂಟಿಂಗ್ ಬಹುತೇಕ ಮುಕ್ತಾಯವಾಗಿದೆ. ಪಾಂಡಿಚೇರಿ, ಚೆನ್ನೈ, ಬೆಂಗಳೂರು, ಅಂಡಮಾನ್, ನಿಕೋಬಾರ್ ಸೇರಿದಂತೆ ಹಲವು ಕಡೆಗಳಲ್ಲಿ ಈ ಸಿನಿಮಾ ಚಿತ್ರೀಕರಣ ನಡೆದಿದೆ. ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಇತ್ತೀಚೆಗೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿ ಶುಭ ಕೋರಿದ್ದರು.
ವೂಲ್ಫ್’ ಸಿನಿಮಾದಲ್ಲಿ ವಿಜಯ್ ಸೇತುಪತಿ ಹಾಡು ಹಾಡುವದು ಪಕ್ಕಾ ಆಗಿದೆ. ಹಾಗಾದರೆ ‘ಘೋಸ್ಟ್’ ಸಿನಿಮಾದಲ್ಲಿ ಶಿವಣ್ಣನ ಜೊತೆಗೂ ನಟಿಸ್ತಾರಾ? ಎಂದು ಕೇಳಿದ್ರೆ ಸಾಧ್ಯತೆ ಇದೆ ಎಂದು ಸಿನಿಮಾದ ನಿರ್ದೇಶಕ ಶ್ರೀನಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಪ್ರಯತ್ನ ನಡೀತಿದೆ. ವಿಜಯ್ ಸೇತುಪತಿ ‘ಘೋಸ್ಟ್’ ಸಿನಿಮಾದಲ್ಲಿ ನಟಿಸಿದರೂ ಅಚ್ಚರಿಪಡಬೇಕಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮತ್ತೆ ಮರ್ತಿದೆ ಸಾಧಕರ ಕತೆ : ವಿಕೇಂಡ್ ವಿತ್ ರಮೇಶ್ ಸೀಸನ್ 5 ಪ್ರೋಮೋ ರಿಲೀಸ್
ಇದನ್ನೂ ಓದಿ : ನಟ ಯಶ್ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ ಮಗ ಯಥರ್ವ್ ವಿಡಿಯೋ ಸಖತ್ ವೈರಲ್
ಇದನ್ನೂ ಓದಿ : ‘ಹೊಯ್ಸಳ’ ಸಿನಿಮಾದ ಫಸ್ಟ್ ಗ್ಲಿಂಪ್ಸ್ ರಿಲೀಸ್ : ಪೊಲೀಸ್ ಲುಕ್‌ನಲ್ಲಿ ಅಬ್ಬರಿಸಿದ ಡಾಲಿ
ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಆರಂಭದ ದಿನಗಳಲ್ಲಿ ವಿಜಯ್ ಸೇತುಪತಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಹೌದು ‘ಅಖಾಡ’ ಎನ್ನುವ ಸಿನಿಮಾದಲ್ಲಿ ತಮಿಳು ನಟ ಬಣ್ಣ ಹಚ್ಚಿದ್ದರು. ಅದನ್ನು ಅವರು ಇನ್ನು ಮರೆತ್ತಿಲ್ಲ. ಕನ್ನಡ ಕಲಿತು ಸಿನಿಮಾ ಡೈಲಾಗ್‌ಗಳನ್ನು ಹೇಳಲು ಪ್ರಯತ್ನ ಪಟ್ಟಿದ್ದರಂತೆ. ಕನ್ನಡದಿಂದ ಕರಿಯರ್ ಆರಂಭಿಸಿದರೆ ದೊಡ್ಡ ಸಕ್ಸಸ್ ಸಿಗುತ್ತೆ ಎಂದು ಆ ಸಿನಿಮಾದ ಮ್ಯಾನೇಜರ್ ಹೇಳಿದ್ದರಂತೆ. ಈಗ ಅದು ನಿಜವಾಗಿದೆ. ಸೇತುಪತಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.
Ghost movie : Vijay Sethupathi with “Ghost” Shivanna? The secret of that meeting has been revealed!