Sexual assault on girl: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಕರಾಟೆ ತರಬೇತುದಾರನಿಗೆ 10 ವರ್ಷ ಜೈಲು ಶಿಕ್ಷೆ

ಉಡುಪಿ: (Sexual assault on girl) ಕರಾಟೆ ಕಲಿಯಲು ತರಬೇತಿ ಕೆಂದ್ರಕ್ಕೆ ಬರುತ್ತಿದ್ದು 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕರಾಟೆ ತರಬೇತುದಾರನಿಗೆ ಪೋಕ್ಸೋ ಕಾಯ್ದೆಯಡಿಯಲ್ಲಿ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಆರೋಪಿ ಕರಾಟೆ ತರಬೇತುದಾರನನ್ನು ಹೆಜಮಾಡಿ ನಿವಾಸಿ ಉಮೇಶ್‌ ಬಂಗೇರ (48 ವರ್ಷ) ಎಂದು ಗುರುತಿಸಲಾಗಿದೆ.

ಪಡುಬಿದ್ರಿಯಲ್ಲಿ ಉಮೇಶ್‌ ಕರಾಟೆ ತರಬೇತಿ ನಡೆಸುತ್ತಿದ್ದು, ಎರಡು ವರ್ಷದ ಹಿಂದೆ ತರಬೇತಿ ಮುಗಿದ ನಂತರ ತರಗತಿಗೆ ಕರಾಟೆ ಕಲಿಯಲು ಬಂದಿದ್ದ 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ, ಯಾರಿಗಾದರು ಹೇಳಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ.

ಇದಾದ ಮೇಲೆ ಬಾಲಕಿ ತರಗತಿಗೆ ಹೋಗುವುದನ್ನು ನಿಲ್ಲಿಸಿದ್ದು, ಆರೋಪಿ ಸಂತ್ರಸ್ತ ಬಾಲಕಿಯ ತಾಯಿಗೆ ಕರೆ ಮಾಡಿ ಮಗಳನ್ನು ಕರಾಟೆ ತರಗತಿಗೆ ಕಳುಹಿಸುವಂತೆ ಹೇಳಿದ್ದಾನೆ. ಇದರಂತೆ ಬಾಲಕಿಯ ತಾಯಿ ಮಗಳನ್ನು ತರಗತಿಗೆ ಹೋಗುವಂತೆ ಹೇಳಿದ್ದಾಳೆ. ಆದರೆ ಬಾಲಕಿ ಈ ವಿಚಾರ ಕೇಳಿ ಕಣ್ಣೀರಿಟ್ಟಿದ್ದು, ಆಕೆಯನ್ನು ವಿಚಾರಿಸಿದಾಗ ಆರೋಪಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಷಯ ತಿಳಿದು ಬಂದಿದೆ. ಇದನ್ನು ತಿಳಿದ ಬಾಲಕಿಯ ತಾಯಿ ಆಘಾತಕ್ಕೊಳಗಾಗಿದ್ದು, ಕರಾಟೆ ತರಬೇತುದಾರನ ವಿರುದ್ದ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಪ್ರಕರಣದ ಕುರಿತು ಕಾಪು ಸಿಐ ಮಹೇಶ್‌ ಪ್ರಸಾದ್‌ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಕುರಿತು ನ್ಯಾಯಾಲಯದಲ್ಲಿ ವಾದ ವಿವಾದಗಳು ನಡೆದಿದ್ದು, ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದಾರೆ. ಲೈಂಗಿಕ ಕಿರುಕುಳದ ಆರೋಪಿಗೆ ಪೋಕ್ಸೋ ಕಾಯ್ದೆಯಡಿ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ಹಾಗೂ ಜೀವ ಬೆದರಿಕೆಯಡಿಯಲ್ಲಿ 2,000 ರೂ ದಂಡ ವಿಧಿಸಲಾಗಿದೆ.

ಇದನ್ನೂ ಓದಿ : Narthaki bar assault case: ನರ್ತಕಿ ಬಾರ್ ಹಲ್ಲೆ ಪ್ರಕರಣ : ವಿಡಿಯೋ ವೈರಲ್, ಇನ್ನಿಬ್ಬರು ಆರೋಪಿಗಳ ವಿರುದ್ದ ದಾಖಲಾಗಿಲ್ಲ ಪ್ರಕರಣ ?

ಅಲ್ಲದೇ ಸಂತ್ರಸ್ತ ಬಾಲಕಿಗೆ 17,000 ರೂ ಹಾಗೂ ಸರಕಾರಕ್ಕೆ 5,000 ರೂ ಪಾವತಿಸುವಂತೆ ನ್ಯಾಯಾಲಯ ಅಪರಾಧಿಗೆ ಆದೇಶ ನೀಡಿದೆ. ಜೊತೆಗೆ ಸಂತ್ರಸ್ತ ಬಾಲಕಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

Sexual assault on girl: Karate trainer sentenced to 10 years in jail for sexual assault on minor girl

Comments are closed.