ಬೆಂಗಳೂರು : ಇತ್ತೀಚಿಗಷ್ಟೇ ನ್ಯಾಯಾಂಗ ನಿಂದನೆ ಕಾರಣಕ್ಕೆ ಜೈಲಿಗೆ ಹೋಗಿದ್ದ ನಟ ಚೇತನ್ (Actor Chethan) ಮತ್ತೊಮ್ಮೆ ನಗರ ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲೇರಿದ್ದಾರೆ. ತನಗೆ ಜೀವ ಬೆದರಿಕೆ ಇದೆ. ಹೀಗಾಗಿ ಪೊಲೀಸ್ ಭದ್ರತೆ ನೀಡಲಾಗಿತ್ತು. ಆದರೆ ಈಗ ನಾನು ಜೈಲಿಗೆ ಹೋದ ಸಂದರ್ಭದಲ್ಲಿ ನನ್ನ ಗನ್ ಮ್ಯಾನ್ ಸೌಲಭ್ಯವನ್ನು ರದ್ದು ಮಾಡಲಾಗಿದೆ ಎಂದು ನಟ ಚೇತನ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ ನಟ ಚೇತನ್ ತಮ್ಮ ಗನ್ ಮ್ಯಾನ್ ಸೌಲಭ್ಯವನ್ನು ವಾಪಸ್ ನೀಡುವಂತೆ ಮನವಿ ಮಾಡಿದ್ದಾರಂತೆ.
ನಗರ ಪೊಲೀಸ್ ಆಯುಕ್ತ ಕಮಲಪಂಥ್ ರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ನಟ ಚೇತನ್, ಗೌರಿ ಲಂಕೇಶ್ ಹತ್ಯೆ ಬಳಿಕ ನನಗೆ ಗನ್ ಮ್ಯಾನ್ ಸೌಲಭ್ಯ ನೀಡಲಾಗಿತ್ತು. ಇತ್ತೀಚಿಗೆ ಪ್ರಕರಣವೊಂದರಲ್ಲಿ ನನ್ನ ಬಂಧನವಾದ ಬಳಿಕ ಸೌಲಭ್ಯ ವಾಪಸ್ ಪಡೆಯಲಾಗಿದೆ. ಮೊದಲಿನಿಂದಲೂ ನನಗೆ ಜೀವ ಬೆದರಿಕೆ ಇದೆ. ಗನ್ ಮ್ಯಾನ್ ವ್ಯವಸ್ಥೆಯನ್ನು ಮತ್ತೆ ಒದಗಿಸುವಂತೆ ಮನವಿ ಮಾಡಿದ್ದೇನೆ. ಅಲ್ಲದೇ, ಮನೆ ಬಳಿ ಬೀಟ್ ವ್ಯವಸ್ಥೆಯನ್ನು ಹೆಚ್ಚಿಸುವಂತೆಯೂ ಮನವಿ ಮಾಡಿದ್ದೇನೆ ಎಂದಿದ್ದಾರೆ.
ಇನ್ನು ಮಾಧ್ಯಮ ಗಳಲ್ಲಿ ವರದಿಯಾಗಿರುವಂತೆ ನನ್ನ ಭಾರತದ ಸಾಗರೋತ್ತರ ಸಿಟಿಜನ್ ಶಿಪ್ ರದ್ದು ಮಾಡುವ ವಿಚಾರ ಸತ್ಯಕ್ಕೆ ದೂರವಾಗಿದ್ದು.ನಾನು ಭಾರತದ ಪ್ರಜೆ, ಕನ್ನಡಿಗ ನಾನು ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ಚೇತನ್ ಹೇಳಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ನಟ ಚೇತನ್ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಪೋಸ್ಟ್ ಶೇರ್ ಮಾಡಿದ್ದರು. ಇದೇ ಕಾರಣಕ್ಕೆ ಶೇಷಾದ್ರಿಪುರಂ ಪೊಲೀಸರು ಚೇತನ್ ಬಂಧಿಸಿದ್ದರು. ಬಳಿಕ ನ್ಯಾಯಾಧೀಶರು ನಟ ಚೇತನ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರು.
ಇದಾದ ಬಳಿಕ ನಟ ಚೇತನ್ ಬೇಲ್ ಮೇಲೆ ಹೊರಬಂದಿದ್ದು, ಈಗ ಗನ್ ಮ್ಯಾನ್ ಗೆ ಬೇಡಿಕೆ ಇಟ್ಟು ನಗರ ಪೊಲೀಸ್ ಆಯುಕ್ತರ ಮೊರೆ ಹೋಗಿದ್ದಾರೆ. ನನ್ನ ಪತಿಯನ್ನು ಯಾವುದೇ ಮಾಹಿತಿ ನೀಡದೇ ಬಂಧಿಸಲಾಗಿದೆ ಎಂದು ನಟ ಚೇತನ್ ಪತ್ನಿ ಮೇಘಾ ಆರೋಪಿಸಿ ಸೋಷಿಯಲ್ ಮೀಡಿಯಾದಲ್ಲಿ ಆರೋಪಿಸಿದ್ದರು. ಬಳಿಕ ಹಲವು ಸಂಘಟನೆಗಳು ಚೇತನ್ ಪರ ಪೊಲೀಸ್ ಸ್ಟೇಶನ್ ಎದುರು ಪ್ರತಿಭಟನೆ ನಡೆಸಿದ್ದವು.
ಇದನ್ನೂ ಓದಿ : ಮಾನಸಿಕ ಕಿರುಕುಳದ ಆರೋಪ : ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ಸಂಜನಾ
ಇದನ್ನೂ ಓದಿ : Rudra Movie : ಕ್ರೈಂ ಸಿರೀಸ್ ನಲ್ಲಿ ಮಿಂಚಿದ ಬಾಲಿವುಡ್ ನಟ ಅಜಯ್ ದೇವಗನ್
Give me a life threatening gun man facility Demand Actor Chethan