ಪ್ರಿಯಾಂಕಾ ಚೋಪ್ರಾ(Priyanka Chopra) ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸುಮಾರು ಮೂರು ವರ್ಷಗಳ ನಂತರ ನಟಿ ಪ್ರಿಯಾಂಕ ಚೋಪ್ರಾ ಭಾರತಕ್ಕೆ ಬರುತ್ತಿದ್ದಾರೆ. ಪ್ರಿಯಾಂಕಾ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ತಮ್ಮ ಬೋರ್ಡಿಂಗ್ ಪಾಸ್‌ನ ಫೋಟೋವನ್ನು ಹಂಚಿಕೊಳ್ಳುವುದರ ಮೂಲಕ ತಮ್ಮ ತವರಿಗೆ ಬರಲಿದ್ದಾರೆ. ಪ್ರಿಯಾಂಕಾ ಚೋಪ್ರಾ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ “ಅಂತಿಮವಾಗಿ ಮನೆಗೆ ಹೋಗುತ್ತಿದ್ದೇನೆ.ಸುಮಾರು 3 ವರ್ಷಗಳ ನಂತರ” ಎಂದು ಬರೆದುಕೊಂಡಿರುತ್ತಾರೆ.
ಕೋವಿಡ್‌ನಂತಹ ಸಾಂಕ್ರಾಮಿಕ ರೋಗದ ನಂತರ ಹಾಗೂ ಕಳೆದ ಜನವರಿಯಲ್ಲಿ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಜನಿಸಿದ ಬಳಿಕ ಪ್ರಿಯಾಂಕಾ ಚೋಪ್ರಾ ಮೊದಲ ಭಾರಿಗೆ ಭಾರತಕ್ಕೆ ಬರಲಿದ್ದಾರೆ. ಇತ್ತೀಚಿಗೆ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಲಾಸ್ ಏಂಜಲೀಸ್‌ನಲ್ಲಿರುವ ತಮ್ಮ ಮನೆಯಲ್ಲಿ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಸೇರಿದಂತೆ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಈ ವರ್ಷ ಪ್ರಿಯಾಂಕಾ ಮಗಳು ಮಾಲ್ತಿ ಮೇರಿಗೆ ಮೊದಲ ದೀಪಾವಳಿ ಆಗಿರುತ್ತದೆ. ಮೂವರು ಬಿಳಿ ಬಣ್ಣದ ಸಾಂಪ್ರದಾಯಿಕ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುವುದರ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸುವ ಪೋಟೋಗಳನ್ನು ಸಹ ನಟಿ ಪ್ರಿಯಾಂಕ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್ನೂ ತಮ್ಮ ಪೋಸ್ಟ್‌ನಲ್ಲಿ “ಎಲ್ಲರಿಗೂ ಪ್ರೀತಿ, ಶಾಂತಿ ಮತ್ತು ಸಮೃದ್ಧಿ. ನಿಜವಾಗಿಯೂ ಕೃತಜ್ಞತೆಯಿಂದ ತುಂಬಿದ ಹೃದಯದಿಂದ, ನಾನು ನಿಮಗೆಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ಕೋರುತ್ತೇನೆ. ಕ್ಷಮಿಸಿ ನಾನು ಸ್ವಲ್ಪ ತಡವಾಗಿ ಬಂದಿದ್ದೇನೆ ಆದರೆ ಸ್ವಲ್ಪ ಸಮಯದವರೆಗೆ ಉಳಿಯಲು ನಿರ್ಧರಿಸಿದೆ. ಮುಂದೆ… ನಮ್ಮಿಂದ ನಿಮ್ಮಗಾಗಿ ಪ್ರೀತಿ ಮತ್ತು ಬೆಳಕು” ಸಾಲುಗಳನ್ನು ಬರೆದುಕೊಂಡಿರುತ್ತಾರೆ.
ಇದನ್ನೂ ಓದಿ : Mansore:ತೆರೆಗೆ ಬರಲು ಸಜ್ಜಾಯ್ತು ಮಂಸೋರೆ ನಿರ್ದೇಶನದ ‘19.20.21’
ಇದನ್ನೂ ಓದಿ : Ashwini Puneeth Rajkumar : ಅಪ್ಪು ಮೊದಲ ವರ್ಷ ಪುಣ್ಯಸ್ಮರಣೆ : ವೈರಲ್ ಆಯ್ತು ಅಶ್ವಿನಿ ಪುನೀತ್ ರಾಜ್ ಕುಮಾರ್ ಪತ್ರ
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಈ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ ಬಾಡಿಗೆ ತಾಯ್ತನದ ತಮ್ಮ ಮಗಳನ್ನು ಪಡೆದಿರುತ್ತಾರೆ. ಪ್ರಿಯಾಂಕಾ ಚೋಪ್ರಾ ತನ್ನ ಕಿಟ್ಟಿಯಲ್ಲಿ ಹಲವಾರು ಯೋಜನೆಗಳನ್ನು ಹೊಂದಿರುತ್ತಾರೆ. ಇದರ ಜೊತೆಯಲಿ ಕೆಲವು ಸಿನಿಮಾಗಳಾದ ಇಟ್ಸ್ ಆಲ್ ಕಮಿಂಗ್ ಬ್ಯಾಕ್ ಟು ಮಿ, ರುಸ್ಸೋ ಬ್ರದರ್ಸ್ ಸಿಟಾಡೆಲ್ ಮತ್ತು ಫರ್ಹಾನ್ ಅಖ್ತರ್ ಅವರ ಜೀ ಲೆ ಜರಾ, ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಅವರೊಂದಿಗೆ ನಟಿಸಲಿದ್ದಾರೆ.
Good news for fans: Priyanka Chopra will come to India after 3 years