Nandini Milk Price Hike : ನಂದಿನಿ ಹಾಲಿನ ದರ 3 ರೂಪಾಯಿ ಏರಿಕೆ ?

ಬೆಂಗಳೂರು : Nandini Milk Price Hike : ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಕೆ ಕೆಎಂಎಫ್ ಮತ್ತೆ ಬರೆ ಎಳೆಯಲು ಮುಂದಾಗಿದೆ. ನಂದಿನಿ ಹಾಲಿನ ಬೆಲೆ ಶೀಘ್ರದಲ್ಲಿಯೇ ಏರಿಕೆಯಾಗಲಿದೆ. ಪ್ರತೀ ಲೀಟರ್ ಗೆ 3ರೂಪಾಯಿ ಏರಿಕೆ ಮಾಡುವ ಕುರಿತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸೂಚನೆ ನೀಡಿದ್ದಾರೆ.

ರಾಜ್ಯದ 16 ಹಾಲು ಒಕ್ಕೂಟಗಳು ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸಿವೆ. ಸದ್ಯದ ಸ್ಥಿತಿಯಲ್ಲಿ ಬೆಲೆ ಏರಿಕೆ ಅನಿವಾರ್ಯ. ಹೀಗಾಗಿ ಕೆಎಂಎಫ್ ನ ಸಾಮಾನ್ಯ ಸಭೆಯಲ್ಲಿ ಹಾಲಿನ ದರ ಏರಿಕೆಯ ಕುರಿತು ತೀರ್ಮಾನ ಕೈಗೊಳ್ಳುತ್ತೇವೆ. ಸರಕಾರ ಕೂಡ ಹಾಲಿನ ದರ ಏರಿಕೆಗೆ ಅನುಮತಿ ನೀಡಲಿದೆ ಎಂದು ಜಾರಕಿಹೊಳಿ ತಿಳಿಸಿದ್ದಾರೆ. ಇನ್ನು ದರ ಪರಿಷ್ಕರಣೆಯ ಸಂಪೂರ್ಣ ಹಣ ರೈತರಿಗೆ ಸಿಗಲಿದೆ. ರಾಜ್ಯದಲ್ಲಿ ಸದ್ಯ ಹಾಲಿನ ದರದಲ್ಲಿ ರೈತರಿಗೆ ಲೀಟರ್ ಗೆ 28 ರೂಪಾಯಿ ಸಿಗುತ್ತಿದ್ದು, 5 ರೂಪಾಯಿ ಪ್ರೋತ್ಸಾಹ ದನ ಸೇರಿದಂತೆ ಒಟ್ಟು 33 ರೂಪಾಯಿ ನೀಡಲಾಗುತ್ತಿದೆ. ಒಂದೊಮ್ಮೆ ಮೂರು ರೂಪಾಯಿ ದರ ಏರಿಕೆಯಾದ್ರೆ ರೈತರಿಗೆ ಪ್ರತೀ ಲೀಟರ್ ಗೆ 36 ರೂಪಾಯಿ ಸಿಗಲಿದೆ. ಹಾಲಿನ ಮೂಲ ಬೆಲೆಯಲ್ಲಿ ಮೂರು ರೂಪಾಯಿ ಏರಿಕೆಯಾಗಲಿದ್ದು, ಪ್ರೋತ್ಸಾಹ ಧನ ಐದು ರೂಪಾಯಿ ಸಿಗಲಿದೆ.

ನಂದಿನಿ ಮೃದ್ಧಿ ನೇರಳೆ ಬಣ್ಣದ ಪ್ಯಾಕೇಟ್​ ಬೆಲೆ 46 ರೂ., ಶುಭಂ-ಕೇಸರಿ ಪ್ಯಾಕೇಟ್: 43 ರೂಪಾಯಿ, ಆರೆಂಜ್ ಪ್ಯಾಕೇಟ್ (ಹೋಮೋಜಿನೈಜ್ಡ್​ ಕೌ ಮಿಲ್ಕ್) 41 ರೂಪಾಯಿ, ಹಸಿರು ಪ್ಯಾಕೇಟ್ ಹಾಲು (ಹೋಮೋಜಿನೈಸ್ಡ್​ ಟೋನ್ ಮಿಲ್ಕ್) 38 ರೂಪಾಯಿ, ನೀಲಿ ಪ್ಯಾಕೆಟ್ ಹಾಲು (ಟೋನ್ಡ್​ ಮಿಲ್ಕ್): 37 ರೂಪಾಯಿ ಇದೆ.

ಒಂದೊಮ್ಮೆ ಹಾಲಿನ ದರ ಏರಿಕೆಯಾದ್ರೆ ಎಲ್ಲಾ ಮಾದರಿಯ ಹಾಲಿನ ದರದಲ್ಲಿಯೇ ಏರಿಕೆಯಾಗಲಿದೆ. ರಾಜ್ಯ ಸರಕಾರ ಈ ಹಿಂದೆ ದರ ಏರಿಕೆಗೆ ಮನಸ್ಸು ಮಾಡಿರಲಿಲ್ಲ. ಇದೀಗ ಕೆಎಂಎಫ್ ರೈತರ ಹೆಸರಲ್ಲಿ ಹಾಲಿನ ದರ ಏರಿಕೆಗೆ ಮುಂದಾಗಿರುವುದು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಇದನ್ನೂ ಓದಿ : Seat belt is mandatory : ವಾಹನ ಸವಾರರ ಗಮನಕ್ಕೆ : ಇನ್ಮುಂದೆ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಕಡ್ಡಾಯ, ನಾಳೆಯಿಂದಲೇ ಹೊಸ ರೂಲ್ಸ್

ಇದನ್ನೂ ಓದಿ : LPG Gas Cylinder : LPG ಗ್ಯಾಸ್ ಸಿಲಿಂಡರ್ ಹೊಸ ನಿಯಮ :12ಕ್ಕಿಂತ ಅಧಿಕ ಸಿಲಿಂಡರ್ ಬಳಸಿದ್ರೆ ಸಬ್ಸಿಡಿ ಕಟ್

KMF Decide Nandini Milk Price Hike 3 rs in Karnataka

Comments are closed.