Kicchaverse launch : ಸ್ಯಾಂಡಲ್ವುಡ್ನಲ್ಲಿ ಸದ್ಯ ಸುವರ್ಣಯುಗ ನಡೆಯುತ್ತಿದೆ ಅಂದರೆ ತಪ್ಪಾಗಲಾರದು. ಈ ವರ್ಷ ಸ್ಯಾಂಡಲ್ವುಡ್ನಲ್ಲಿ ತೆರೆ ಕಂಡ ಬಹುತೇಕ ಸಿನಿಮಾಗಳು ನೂರುಕೋಟಿ ಕ್ಲಬ್ ದಾಟುವುದರ ಜೊತೆಯಲ್ಲಿ ಇಡೀ ದೇಶಾದ್ಯಂತ ಸದ್ದು ಮಾಡಿವೆ. ಇದೀಗ ಕಿಚ್ಚ ಸುದೀಪ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಕೂಡ ಕೌಂಟ್ಡೌನ್ ಆರಂಭಗೊಂಡಿದ್ದು ಈ ಸಿನಿಮಾ ಕೂಡ ಕೋಟಿ ಕ್ಲಬ್ ಸೇರಲಿದೆ ಎಂಬ ನಿರೀಕ್ಷೆ ಕನ್ನಡಿಗರದ್ದು. ಈ ಎಲ್ಲದರ ನಡುವೆ ಕಿಚ್ಚನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಅದೇನೆಂದರೆ ವಿಕ್ರಾಂತ್ ರೋಣ ಸಿನಿಮಾ ಮೆಟಾ ವರ್ಸ್ಗೆ ಸೇರಿದ್ದು ಎನ್ಎಫ್ಟಿ ಸಂಸ್ಥೆಯು ಕಿಚ್ಚ ವರ್ಸ್ ಮೂಲಕ ವಿಕ್ರಾಂತ ರೋಣವನ್ನು ಪ್ರಸ್ತುತಗೊಳಿಸಲಿದೆ. ಈ ವಿಚಾರ ಕಿಚ್ಚ ಫ್ಯಾನ್ಸ್ಗೆ ಸಖತ್ ಥ್ರಿಲ್ ನೀಡಿದೆ.

ಕಿಚ್ಚ ವರ್ಸ್ ಮೂಲಕ ಅಭಿಮಾನಿಗಳು ನಟ ಸುದೀಪ್ ಜೊತೆಯಲ್ಲಿ ಹೆಚ್ಚು ಸಮಯ ಕಳೆಯಬಹುದಾಗಿದೆ. ಆದರೆ ಕಿಚ್ಚ ವರ್ಸ್ಗೆ ಪ್ರವೇಶ ಪಡೆಯಲು ಎನ್ಎಫ್ಟಿ ಮೆಂಬರ್ಶಿಪ್ ಕಾರ್ಡನ್ನು ಹೊಂದುವುದು ಕಡ್ಡಾಯವಾಗಿರಲಿದೆ. ಈ ಮೆಂಬರ್ಶಿಪ್ ಕಾರ್ಡ್ ಹೊಂದಿರುವವರು ನಟ ಸುದೀಪ್ ಜೊತೆಯಲ್ಲಿ ಮಾತನಾಡಲು, ಅವರೊಂದಿಗೆ ಕಾಲ ಕಳೆಯಲು ಅವಕಾಶವನ್ನು ಪಡೆಯಲಿದ್ದಾರೆ .

ಕಿಚ್ಚ ಸುದೀಪ್ , ಅವರ ಧರ್ಮ ಪತ್ನಿ ಪ್ರಿಯಾ ಸುದೀಪ್ ಹಾಗೂ ಸಂಪೂರ್ಣ ವಿಕ್ರಾಂತ್ ರೋಣ ಚಿತ್ರತಂಡ ಎನ್ಎಫ್ಟಿ ಸಂಸ್ಥೆಯ ಜೊತೆಯಲ್ಲಿ ಕಿಚ್ಚ ವರ್ಸ್ ಬಗ್ಗೆ ಮಾಹಿತಿ ನೀಡಿದೆ. ಎನ್ಎಫ್ಟಿ ಸಂಸ್ಥೆಯ ಸೃಷ್ಟಿಯಾಗಿರುವ ಈ ಕಿಚ್ಚ ವರ್ಸ್ ಬಗ್ಗೆ ಮೊದ ಮೊದಲು ನಟ ಸುದೀಪ್ಗೂ ಅಷ್ಟೊಂದು ಐಡಿಯಾ ಇರಲಿಲ್ಲವಂತೆ. ಆದರೆ ಇದನ್ನು ಈಗ ನೋಡಿದಾಗ ನನಗೆ ತುಂಬಾನೇ ಖುಷಿಯಾಗ್ತಿದೆ. ಎನ್ಎಫ್ಟಿ ತಂಡ ಮಾಡಿರುವ ಈ ಕಾರ್ಯ ಖಂಡಿತವಾಗಿಯೂ ಪ್ರತಿಯೊಬ್ಬರಿಗೂ ಥ್ರಿಲ್ ನೀಡುತ್ತೆ ಎಂಬ ಭರವಸೆ ನನಗಿದೆ ಎಂದು ನಟ ಸುದೀಪ ಹೇಳಿದ್ರು.

ಎನ್ಎಫ್ಟಿ ಮೆಂಬರ್ಶಿಪ್ ಪಡೆಯಲು ನೀವು ಮಾಡಬೇಕಾದದ್ದೇನು..?
ನಿನ್ನೆಯಿಂದಲೇ ಎನ್ಎಫ್ಟಿ ಮೆಂಬರ್ಶಿಪ್ ಪಡೆಯಲು ಸ್ಪರ್ಧೆ ಆರಂಭವಾಗಿದೆ. ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ. ವಿಕ್ರಾಂತ್ ರೋಣ ಚಿತ್ರದ ಸ್ಕೆಚ್ ಬಿಡಿಸಿ ಅದನ್ನು kichchaverse.ioನಲ್ಲಿ ಅಪ್ಲೋಡ್ ಮಾಡಬೇಕು. ಈ ಕಾಂಪಿಟೇಶನ್ ಅತ್ಯದ್ಭುತ ಸ್ಕೆಚ್ ಬಿಡಿಸುವವರಿಗೆ ಎನ್ಎಫ್ಟಿ ಮೆಂಬರ್ಶಿಪ್ ದೊರೆಯಲಿದೆ. ಈ ಮೆಂಬರ್ಶಿಪ್ ಪಡೆದವರು ಕಿಚ್ಚ ವರ್ಸ್ನ ಹಲವಾರು ಇವೆಂಟ್ಗಳಲ್ಲಿ ಭಾಗಿಯಾಗುವ ಮೂಲಕ ಕಿಚ್ಚ ಸುದೀಪ ಜೊತೆ ಸಮಯ ಕಳೆಯುವ ಅವಕಾಶವನ್ನು ಪಡೆಯಲಿದ್ದಾರೆ .

ಇದರ ಜೊತೆಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ವಿಕ್ರಾಂತ್ ರೋಣ ಸಿನಿಮಾದ ಮೂಲಕ ಹೊರ ದೇಶಗಳಲ್ಲಿ ಕನ್ನಡ ಸಿನಿಮಾ ಪ್ರೀಮಿಯರ್ ಶೋ ಕಾಣಲಿದೆ. ಜುಲೈ 27ರಂದು ದುಬೈನಲ್ಲಿ ವಿಕ್ರಾಂತ್ ರೋಣ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಇದಕ್ಕೆಲ್ಲ ಎನ್ಎಫ್ಟಿ ಮೆಂಬರ್ಶಿಫ್ ಹೊಂದಿರಬೇಕು ಎಂದು ಕಾಫಿ ಅಂಡ್ ಬನ್ ಇನೋವೇಷನ್ಸ್ ಸಂಸ್ಥೆ ಸ್ಥಾಪಕಿ ಪ್ರಿಯಾ ಸುದೀಪ್ ತಿಳಿಸಿದ್ದಾರೆ.
ಇದನ್ನು ಓದಿ : sudeep has gone to delhi : 13 ವರ್ಷಗಳ ಬಳಿಕ ದೆಹಲಿಗೆ ಹಾರಿದ ಕಿಚ್ಚ ಸುದೀಪ : ಪ್ರಹ್ಲಾದ್ ಜೋಶಿ ಜೊತೆ ಮಾತುಕತೆ
ಇದನ್ನೂ ಓದಿ : actress kajal agarwal : ನಾಲ್ಕು ತಿಂಗಳ ಕಂದಮ್ಮನೊಂದಿಗೆ ಗೋವಾ ಬೀಚ್ನಲ್ಲಿ ಕಾಜಲ್ ಅಗರ್ವಾಲ್ ಎಂಜಾಯ್
Good news for Kiccha Sudeepa fans: Kicchaverse launch