Monsoon Footwears: ಮಳೆಗಾಲಕ್ಕೆ ಸೂಕ್ತವಾಗಿರುವ ಫೂಟ್‌ವೇರ್‌ಗಳಿವು! ಇವುಗಳನ್ನು ಧರಿಸಿ ನಿಮ್ಮ ಕೋಮಲ ಪಾದಗಳನ್ನು ರಕ್ಷಿಸಿಕೊಳ್ಳಿ!!

ಮಾನ್ಸೂನ್‌(Monsoon) ಪ್ರಾರಂಭವಾಗಿದೆ. ಇದು ಅತ್ಯಂತ ರೊಮ್ಯಾಂಟಿಕ್‌ ಆದ ಋತು ಎಂದೂ ಹೇಳಬಹುದು. ಎಲ್ಲೆಲ್ಲೂ ಹಸಿರು, ಮೈದುಂಬಿ ಹರಿಯುವ ನದಿ, ಜಲಪಾತಗಳು, ಮೋಡ ಕವಿದ ಸೌಮ್ಯ ವಾತಾವರಣ ಮನಸ್ಸಿಗೆ ಸಂತೋಷ ನೀಡುತ್ತದೆ. ಆದರೆ ಈ ಋತುವಿನಲ್ಲಿ ಮಣ್ಣು, ಕೆಸರು ಗುಂಡಿಗಳು, ಕೊಳಕು ಮತ್ತೂ ಅನೇಕ ತೊಂದರೆಗಳು. ಹೊರಗಡೆ ಓಡಾಡುವುದು ಎಂದರೆ ಹೋರಾಟವೇ ಸರಿ(Monsoon Footwears).

ಮಳೆ ನಿಮ್ಮ ಕೂದಲು, ಮೇಕ್ಅಪ್ ಮತ್ತು ಪಾದರಕ್ಷೆಗಳನ್ನು ಹಾಳುಮಾಡುತ್ತದೆ. ನೀವು ಛತ್ರಿಯಿಂದ ಮೇಕಪ್‌ ಮತ್ತು ಕೂದಲನ್ನು ರಕ್ಷಿಸಬಹುದು ಆದರೆ ನಿಮ್ಮ ಪಾದರಕ್ಷೆಗಳಿಗೆ ಏನು ಮಾಡುತ್ತೀರಿ? ಕೆಸರು ಗುಂಡಿಗಳಲ್ಲೇ ನಡೆಯಬೇಕಲ್ಲವೇ? ಆದ್ದರಿಂದ, ಮಳೆಯ ದಿನಗಳಲ್ಲಿ ಸಾಮಾನ್ಯ ಪಾದರಕ್ಷೆಗಳಿಗಿಂತ, ವಿಶೇಷ ಪಾದರಕ್ಷೆಗಳ ಮೊರೆ ಹೋಗುವುದು ಉತ್ತಮ. ಹಾಗಾದರೆ ಮಾನ್ಸೂನ್ ಗೆ ಬೆಸ್ಟ್‌ ಎನಿಸುವ ಪಾದರಕ್ಷೆಗಳನ್ನು ಆಯ್ಕೆ ಮಾಡಿಕೊಳ್ಳಿ. ಅವುಗಳು ನಿಮ್ಮ ಕೋಮಲ ಪಾದಗಳನ್ನು ರಕ್ಷಿಸುವಂತಲೂ ಇರಬೇಕು ಮತ್ತು ನೋಡಲು ಅಂದವಾಗಿರಬೇಕು. ಅಂತಹ ಕೆಲವು ಪಾದರಕ್ಷೆಗಳ ಮಾಹಿತಿ ಇಲ್ಲಿದೆ.

ಫ್ಲಿಪ್-ಫ್ಲಾಪ್‌ ಗಳು :
ಫ್ಲಿಪ್-ಫ್ಲಾಪ್‌ ಗಳು ಅಂದರೆ ದಿನಬಳಕೆಯ ಭಾಷೆಯಲ್ಲಿ ಸ್ಲಿಪ್ಪರ್‌ ಅನ್ನಬಹುದು. ಇವು ದೀರ್ಘಕಾಲದಿಂದ ಸಾಕಷ್ಟು ಜನಪ್ರಿಯವಾಗಿವೆ. ವಿಭಿನ್ನ ರೀತಿಯ ಸೊಗಸಾದ ಚೆಂದ ಚೆಂದದ ಪಾದರಕ್ಷಗಳು ಮಾರುಕಟ್ಟೆಗೆ ಬರುವ ಮೊದಲು ಜನರು ಇವುಗಳನ್ನೇ ಅವಲಂಬಿಸಿದ್ದರು. ಇವು ಪುರುಷರು ಮತ್ತು ಮಹಿಳೆ ಇಬ್ಬರಿಗೂ ಸೂಕ್ತವಾಗಿದೆ. ಇವುಗಳನ್ನು ಧರಿಸಲು ಸುಲಭ ಮತ್ತು ಸ್ವಚ್ಛಗೊಳಿಸಲೂ ಸುಲಭ. ಏಕೆಂದರೆ ಇವುಗಳನ್ನು ರಬ್ಬರ್‌ನಿಂದ ತಯಾರಿಸಲಾಗುತ್ತದೆ, ಹೀಗಾಗಿ ನೀರಿನಿಂದ ಹಾಳಾಗುವುದಿಲ್ಲ ಮತ್ತು ಸಾಕಷ್ಟು ಬಾಳಿಕೆ ಬರುತ್ತವೆ. ಅಲ್ಲದೆ, ಇವು ಬಹು ಬೇಗನೆ ಒಣಗುತ್ತವೆ.

ಗಮ್‌ಬೂಟ್‌ಗಳು :
ನೀರು ನಿರೋಧಕ ಮತ್ತು ಸ್ವಚ್ಛಗೊಳಿಸಲು ತುಂಬಾ ಸುಲಭವಾಗಿರುವ ಗಮ್‌ಬೂಟ್‌ಗಳು ಪರಿಪೂರ್ಣ ಮಾನ್ಸೂನ್ ಪಾದರಕ್ಷೆಗಳಾಗಿವೆ. ಏಕೆಂದರೆ ಮಳೆನೀರು ಹರಿದು ಪಾಚಿಗಟ್ಟಿ ಜಾರುವ ಪ್ರದೇಶದಲ್ಲಿ ನಡೆಯಬೇಕೆಂದರೆ ಪಾದರಕ್ಷೆಗಳಿಗೆ ಗ್ರಿಪ್‌ ಇರಬೇಕು. ಗಮ್‌ಬೂಟ್‌ಗಳು ವಿಶೇಷವಾದ ಗ್ರಿಪ್‌ ಗಳಿಂದ ತಯಾರಿಸಲ್ಪಟ್ಟಿರುತ್ತವೆ. ಅದಕ್ಕಾಗಿಯೇ ಇವುಗಳನ್ನು ಮಾನ್ಸೂನ್‌ ಶೂ ಎಂದೂ ಕರೆಯುತ್ತಾರೆ. ಇಷ್ಟೇ ಅಲ್ಲದೇ ಈ ಬೂಟುಗಳು ನಿಮ್ಮ ಪೂರ್ತಿ ಪಾದಗಳನ್ನು ಆವರಿಸುತ್ತವೆ, ಹೀಗಾಗಿ ಅವುಗಳು ಮಳೆ ನೀರು ಮತ್ತು ಕೆಸರಿನಿಂದ ರಕ್ಷಣೆ ಒದಗಿಸುತ್ತವೆ. ಗಮ್‌ಬೂಟ್‌ಗಳು ಯಾವುದೇ ವಿನ್ಯಾಸದ ಬಟ್ಟೆಗಳೊಂದಿಗೆ ಹೊಂದಿಕೆಯಾಗುತ್ತವೆ.

ಇದನ್ನೂ ಓದಿ : Weight Loss Tips:ವೈಟ್ ಲಾಸ್ ಮಾಡಲು ಪ್ರಯತ್ನಿಸುತ್ತಿದ್ದೀರಾ ! ಆಹಾರದ ಮೂಲಕವೇ ವೈಟ್ ಲಾಸ್ ಮಾಡಲು ಇಲ್ಲಿದೆ ಒಂದಿಷ್ಟು ಟಿಪ್ಸ್

ಕ್ರಾಕ್ಸ್‌ :
ಕಳೆದ ಕೆಲವು ವರ್ಷಗಳಿಂದ ಕ್ರಾಕ್ಸ್‌ಗಳು ಸಾಕಷ್ಟು ಜನಪ್ರಿಯವಾಗಿದೆ. ಚಿಕ್ಕ ಮಗುವಿನಿಂದ ವಯಸ್ಕರವರೆಗೂ ಇದು ಸೂಪರ್-ಕಾಮ್ಫರ್ಟೇಬಲ್‌ ಪಾದರಕ್ಷೆಯಾಗಿದೆ. ಮಳೆಗಾಲಕ್ಕೆ ಮಕ್ಕಳಿಗೆ ಸೂಕ್ತ ಪಾದರಕ್ಷೆಯಾಗಿದೆ. ಇವು ಧರಿಸಲು ಸುಲಭ, ಸ್ವಚ್ಛಗೊಳಿಸಲು ಸುಲಭ ಮತ್ತು ಬಾಳಿಕೆ ಬರುವಂತವುಗಳಾಗಿವೆ. ರಬ್ಬರ್‌ನಿಂದ ತಯಾರಿಸಲ್ಪಡುವ ಈ ಪಾದರಕ್ಷೆಗಳು ನೀರುತಾಗಿ ಹಾನಿಯಾಗದಂತೆ ತಡೆಯುತ್ತವೆ ಮತ್ತು ತ್ವರಿತವಾಗಿ ಒಣಗಿಸಲೂಬಹುದು. ನೀವು ಕ್ರಾಕ್ಸ್‌ಗಳನ್ನು ಯಾವುದೇ ಬಟ್ಟೆಗಳ ಜೊತೆ ಹೊಂದಿಸಿಕೊಳ್ಳಬಹುದು ಮತ್ತು ಪಾದಗಳನ್ನು ಕೆಸರು ಮತ್ತು ನೀರಿನಿಂದಲೂ ರಕ್ಷಿಸಬಹುದು.

ಫ್ಲಾಟ್‌ ಹೀಲ್‌ ಪಾದರಕ್ಷೆಗಳು :
ಕೊನೆಯದಾಗಿ ಫ್ಲಾಟ್‌ ಹೀಲ್‌ ಪಾದರಕ್ಷೆಗಳು. ನೀವು ಎತ್ತರದ ಹಿಮ್ಮಡಿಯ (Heels) ಪಾದರಕ್ಷೆಗಳನ್ನು ಧರಿಸಲು ಇಷ್ಟಪಡುತ್ತಿದ್ದರೆ, ಮಳೆಗಾಲಕ್ಕೆ ಪೆನ್ಸಿಲ್‌ ಹೀಲ್ಸ್‌ನ ಬದಲಿಗೆ ಈ ಪಾದರಕ್ಷೆಗಳನ್ನು ಆಯ್ದುಕೊಳ್ಳುವುದು ಉತ್ತಮ. ಏಕೆಂದರೆ ಮಳೆಗಾಲದ ಕೆಸರಿನಲ್ಲಿ ಪೆನ್ಸಿಲ್‌ ಹೀಲ್ಸ್‌ಗಳು ಜಾರುವ ಸಾಧ್ಯತೆ ಇರುತ್ತದೆ. ಆದರೆ, ಫ್ಲಾಟ್‌ ಹೀಲ್‌ಗಳು ನಿಮ್ಮ ಪಾದಗಳನ್ನು ಕೆಸರಿನಿಂದ ರಕ್ಷಿಸಿ, ಆರಾಮವನ್ನು ನೀಡುತ್ತವೆ ಮತ್ತು ಜಾರುವಿಕೆಯನ್ನೂ ತಪ್ಪಿಸುತ್ತದೆ.

ಇದನ್ನೂ ಓದಿ : Oppo Reno8 Series : 4K ಅಲ್ಟ್ರಾ HDR ಕ್ಯಾಮರಾ ವಿಶೇಷತೆಯೊಂದಿಗೆ ಇಂದು ಬಿಡುಗಡೆಯಾಗಲಿರುವ Oppo Reno8 ಮತ್ತು Reno Pro ಸ್ಮಾರ್ಟ್‌ಫೋನ್‌ಗಳು!

(Monsoon Footwears you should have in this season)

Comments are closed.