ಸ್ಯಾಂಡಲ್‌ವುಡ್‌ನ ನಟ ರಾಕ್ಷಸ ಎಂದೇ ಪ್ರಖ್ಯಾತಿ ಪಡೆದಿರುವ ಡಾಲಿ ಧನಂಜಯ ಅಭಿನಯದ “ಗುರುದೇವ ಹೊಯ್ಸಳ” ಸಿನಿಮಾದ (Gurudev Hoysala movie) ಟ್ರೈಲರ್ ಡೇಟ್ ಫಿಕ್ಸ್ ಆಗಿದೆ. ಸದ್ಯ ಕನ್ನಡ ಸಿನಿರಂಗದಲ್ಲಿ ನಟ ಧನಂಜಯ್ ಒಂದಾದ ಮೇಲೆ ಒಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು”ರತ್ನನ್ ಪ್ರಪಂಚ” ಸಿನಿಮಾ ನಿರ್ಮಾಪಕ ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ನಟ ಧನಂಜಯ್ ಅಭಿನಯದ 25ನೇ ಸಿನಿಮಾ “ಗುರುದೇವ ಹೊಯ್ಸಳ” ದ ಟ್ರೈಲರ್ ಡೇಟ್ ರಿವೀಲ್ ಮಾಡಿದ್ದಾರೆ.
ಈ ಸಿನಿಮಾದ ಅಧಿಕೃತ ಟ್ವೀಟರ್ ಖಾತೆಯಲ್ಲಿ, “ಗುರುದೇವ ಹೊಯ್ಸಳ ಸಿನಿಮಾದ ಟ್ರೈಲರ್ ಮಾರ್ಚ್ 20 ಭಾನುವಾರದಂದು ಸಂಜೆ 7.29ಕ್ಕೆ ಬಿಡುಗಡೆ” ಮಾಡುವುದಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾದ ಟೈಟಲ್ ಅನ್ನು ಕೂಡ ಸಿನಿತಂಡ ಬದಲಾವಣೆ ಮಾಡಿದ್ದಾರೆ. ಈ ಸಿನಿಮಾದ ಶೀರ್ಷಿಕೆ ವಿರುದ್ಧ ನ್ಯಾಯಲಯದಿಂದ ತಡೆಯಾಜ್ಞೆ ತಂದ ಕಾರಣ ಕೆ ಆರ್ ಜಿ ಸ್ಟುಡಿಯೋಸ್ ಶೀರ್ಷಿಕೆಯನ್ನು ಬದಲಾವಣೆ ಮಾಡಿದ್ದಾರೆ. ಹೌದು ನಟ ಧನಂಜಯ್ ಅಭಿನಯದ “ಹೊಯ್ಸಳ” ಸಿನಿಮಾ “ಗುರುದೇವ ಹೊಯ್ಸಳ” ಎನ್ನುವ ಬದಲಾದ ಶೀರ್ಷಿಕೆಯೊಂದಿಗೆ ಇದೇ ಮಾರ್ಚ್ 30ರಂದು ತೆರೆ ಕಾಣಲಿದೆ.
𝐆𝐮𝐫𝐮𝐝𝐞𝐯 𝐇𝐨𝐲𝐬𝐚𝐥𝐚 𝐑𝐞𝐩𝐨𝐫𝐭𝐬 𝐨𝐧 𝟐𝟎.𝟎𝟑.𝟐𝟑 𝐚𝐭 𝟕:𝟐𝟗𝐏𝐌💥#EeSalaHoysala #GurudevHoysala in theatres on 30th March.#VijayKiragandur @KRG_Studios @amrutha_iyengar @vijaycinephilia @Karthik1423 @yogigraj @AJANEESHB @yes__karthik #GurudevHoysala pic.twitter.com/TaqQ73bnsp
— Gurudev Hoysala (@Dhananjayaka) March 15, 2023
ಇನ್ನು ಈ ಸಿನಿಮಾದಲ್ಲಿ ನಟಿ ಅಮೃತಾ ಅಯ್ಯಂಗಾರ್ ಅವರು ನಟ ಧನಂಜಯ್ ಜೊತೆ ನಾಯಕಿಯಾಗಿ ನಟಿಸಲಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾ ಡಾಲಿ ಹಾಗೂ ಅಮೃತಾ ಅಯ್ಯಂಗಾರ್ ಅಭಿನಯಿಸುತ್ತಿರುವ ಮೂರನೇ ಸಿನಿಮಾವಾಗಿದೆ. ಈ ಸಿನಿಮಾಕ್ಕೆ ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶಕರಾಗಿದ್ದಾರೆ. ಮಾಸ್ತಿ ಅವರ ಉತ್ತಮ ಸಂಭಾಷಣೆಯನ್ನು ಬರೆದಿದ್ದಾರೆ. ನಟ ಧನಂಜಯ್ ಅಭಿನಯದ “ಗುರುದೇವ ಹೊಯ್ಸಳ” ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆ ಕಾಣಲಿದೆ.
ಈ ಸಿನಿಮಾದ ಶೂಟಿಂಗ್‌ನ್ನು ಬಹುತೇಕ ಬೆಳಗಾವಿ ಜಿಲ್ಲೆಯ ಅನೇಕ ಭಾಗಗಳಲ್ಲಿ ಸೆರೆ ಹಿಡಿಯಲಾಗಿದೆ. ಬೆಳಗಾವಿಯಲ್ಲಿ ನಡೆಯುವ ಒಬ್ಬ ದಿಟ್ಟ ಪೊಲೀಸ್ ಅಧಿಕಾರಿಯ ಸುತ್ತ ಹೆಣೆದಿರುವ ಕಥೆ ಆಗಿರುತ್ತದೆ. ಇದರ ಜೊತೆಗೆ ‘Once upon a time in ಜಮಾಲಿಗುಡ್ಡ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಒಟ್ಟಾರೆಯಾಗಿ ಏಕಕಾಲಕ್ಕೆ ನಟ, ಖಳನಾಯಕನಾಗಿ ಧನಂಜಯ ಅವರು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವುದು ಹೆಗ್ಗಳಿಕೆಯಾಗಿದೆ.
ಇದನ್ನೂ ಓದಿ : ಟಿವಿ ಶೋ ‘ನುಕ್ಕಡ್’ ಖ್ಯಾತಿಯ ಹಿರಿಯ ನಟ ಸಮೀರ್ ಖಾಕರ್ ಇನ್ನಿಲ್ಲ
ಇದನ್ನೂ ಓದಿ : “ಕಬ್ಜ” ಫ್ರಿ ರಿಲೀಸ್ ಕಾರ್ಯಕ್ರಮಕ್ಕೆ ಪ್ರಮುಖ ಅತಿಥಿ ಯಾರು ಗೊತ್ತಾ ?
ಇದನ್ನೂ ಓದಿ : ನಟ ಪುನೀತ್ ಅಭಿನಯದ ಕೊನೆಯ ಸಿನಿಮಾ “ಗಂಧದಗುಡಿ” ಓಟಿಟಿ ರಿಲೀಸ್ ಡೇಟ್ ಫಿಕ್ಸ್
‘ರತ್ನನ್ ಪ್ರಪಂಚ’ ಸಿನಿಮಾದಲ್ಲಿ ಧನಂಜಯ ಅವರು ಕಮರ್ಷಿಯಲ್ ಲುಕ್‌ನಿಂದ ಹೊರಬಂದಿರುವ ಸಾಮಾನ್ಯ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡು, ರಂಜಿಸಿದ್ದರು. ನಂತರ ಹೆಡ್‌ಬುಷ್ ಸಿನಿಮಾದಲ್ಲಿ ಭೂಗತಲೋಕದ ಪಾತ್ರದಲ್ಲಿ ಕೂಡ ಅಭಿಮಾನಿಗಳ ಮನಗೆದ್ದಿದ್ದಾರೆ. ಒಟ್ಟಿನಲ್ಲಿ ಸಿನಿಮಾದಿಂದ ಸಿನಿಮಾಕ್ಕೆ ಧನಂಜಯ ಅವರ ಪಾತ್ರಗಳ ಆಯ್ಕೆಯಂತೂ ತುಂಬ ವಿಭಿನ್ನವಾಗಿದೆ.
Gurudev Hoysala movie : Dhananjay starrer “Gurudev Hoysala” trailer date fix