Reduction of packet products: ಹಾಲು ಪೂರೈಕೆಯಲ್ಲಿ ಕೊರತೆ : ಪ್ಯಾಕೆಟ್ ಉತ್ಪನ್ನಗಳ ಕಡಿತಕ್ಕೆ ಮುಂದಾದ ಕೆಎಂಎಫ್

ಬೆಂಗಳೂರು: (Reduction of packet products) ಕರ್ನಾಟಕದಲ್ಲಿ ಹಾಲು ಉತ್ಪಾದನೆ ಕುಂಟಿತಗೊಂಡಿದ್ದು, ಹಾಲು ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿದೆ. ದೇಶದ ಹಲವು ಕಡೆಗಳಲ್ಲಿ ಹಾಲಿನ ಕೊರತೆಯುಂಟಾಗಿದ್ದು, ಬೆಲೆ ಏರಿಕೆಯ ಮೂಲಕ ಅದನ್ನು ಸರಿತೂಗಿಸಲು ಪ್ರಯತ್ನಿಸುತ್ತಿದೆ. ಅದರೆ ಕರ್ನಾಟಕದಲ್ಲಿ ಬೆಲೆ ಏರಿಕೆಯ ಬದಲಾಗಿ, ಪ್ಯಾಕೆಟ್ನಲ್ಲಿನ ಉತ್ಪನ್ನಗಳನ್ನು ಕಡಿಮೆಗೊಳಿಸಲು ಕೆಎಂಎಫ್‌ ನಿರ್ಧರಿಸಿದೆ. ರಾಜ್ಯ ಸರ್ಕಾರವು ಸಾಮಾನ್ಯ ಜನರಿಗೆ ನೋವುಂಟಾಗಬಾರದು ಎಂಬ ಕಾರಣಕ್ಕೆ ಈ ಜಾಣ್ಮೆಯ ಮಾರ್ಗವನ್ನು ತೆಗೆದುಕೊಂಡಿದೆ.

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಗರಿಷ್ಠ ಚಿಲ್ಲರೆ ಬೆಲೆಯನ್ನು (ಎಂಆರ್‌ಪಿ) ಹೆಚ್ಚಿಸುವುದರ ಬದಲಾಗಿ ಅದೇ ದರದಲ್ಲಿ ಕಡಿಮೆ ಪ್ರಮಾಣದ ಹಾಲನ್ನು ನೀಡುತ್ತಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ‘ನಂದಿನಿ’ ಬ್ರಾಂಡ್ ಅಡಿಯಲ್ಲಿ ಹಾಲನ್ನು ಮಾರಾಟ ಮಾಡುತ್ತದೆ ಮತ್ತು ಜನರು ಒಂದು ಲೀಟರ್ (1,000 ಮಿಲಿ) ಪೂರ್ಣ ಕೆನೆ ಹಾಲಿಗೆ 50 ರೂ ಮತ್ತು ಅರ್ಧ ಲೀಟರ್ (500 ಮಿಲಿ) 24 ರೂ ಪಾವತಿಸುತ್ತಿದ್ದರು. ಆದರೆ ಇದೀಗ ಅದೇ ಬೆಲೆಗೆ ಆಂದರೆ 50 ರೂ ಗೆ 900 ಮಿಲಿ ಹಾಗೂ 24 ರೂಗೆ 450 ಮಿಲಿಗೆ ಕಡಿಮೆಗೊಳಿಸಲು ನಿರ್ಧರಿಸಿದೆ.

ಕಳೆದ ಕೆಲವು ದಶಕಗಳಲ್ಲಿ ಆಲೂಗೆಡ್ಡೆ ಚಿಪ್ಸ್, ಡಿಟರ್ಜೆಂಟ್‌ ಅಥವಾ ಪ್ಯಾಕೆಟ್‌ಗಳಲ್ಲಿನ ಉತ್ಪನ್ನಗಳ ಪ್ರಮಾಣವನ್ನು ಭಾರತದ ಗ್ರಾಹಕರು ಕಡಿಮೆ ಮಾಡಿದ್ದು, ಅದೇ ಬೆಲೆಗೆ ಕಡಿಮೆ ಕೊಡುಗೆಗಳನ್ನು ನೀಡುವುದು ಗ್ರಾಹಕ ಸರಕುಗಳ ಕಂಪನಿಗಳಲ್ಲಿ ಸಾಮಾನ್ಯ ಅಭ್ಯಾಸವಾಗಿದೆ. ಅದರೆ ಇದು ಡೈರಿ ವಲಯದಲ್ಲಿ ಇದು ಮೊದಲ ಬಾರಿಗೆ ಚಾಲ್ತಿಯಾಗಿದೆ.

ದೇಶದ ಹಲವು ಭಾಗಗಳಲ್ಲಿ ಹಾಲಿನ ದರ ಏರಿಕೆಯಾಗಿದೆ. ಅಮುಲ್ ಫೆಬ್ರವರಿಯಲ್ಲಿ ಹಾಲಿನ ದರವನ್ನು ಲೀಟರ್‌ಗೆ 3 ರೂ ಹೆಚ್ಚಳ ಮಾಡಲಾಗಿತ್ತು. ಪರಿಷ್ಕರಣೆ ಬಳಿಕ ಅಮುಲ್ ಗೋಲ್ಡ್ ಪ್ರತಿ ಲೀಟರ್ ಗೆ 66 ರೂ., ಅಮುಲ್ ತಾಜಾ ಲೀಟರ್‌ಗೆ 54 ರೂ., ಅಮುಲ್ ಹಸುವಿನ ಹಾಲು ಲೀಟರ್‌ಗೆ 56 ರೂ. ಮತ್ತು ಅಮುಲ್ ಎ2 ಎಮ್ಮೆ ಹಾಲಿನ ಬೆಲೆ ಈಗ ಲೀಟರ್‌ಗೆ 70 ರೂ. ನಂತೆ ಬೆಲೆ ನಿಗದಿ ಮಾಡಲಾಗಿತ್ತು. ಹಾಲಿನ ಒಟ್ಟಾರೆ ಕಾರ್ಯಾಚರಣೆ ಮತ್ತು ಉತ್ಪಾದನೆಯ ವೆಚ್ಚದಲ್ಲಿ ಹೆಚ್ಚಳದಿಂದಾಗಿ ಬೆಲೆ ಏರಿಕೆ ಮಾಡಲಾಗಿತ್ತು. ದನಗಳ ಮೇವಿನ ವೆಚ್ಚವೇ ಸರಿಸುಮಾರು 20 ಪ್ರತಿಶತಕ್ಕೆ ಏರಿದೆ ಎಂದು ಅಮುಲ್ ಹೇಳಿದೆ.

ಇದನ್ನೂ ಓದಿ : Food processing plant: ಕೊಪ್ಪಳದಲ್ಲಿ 100 ಆಹಾರ ಸಂಸ್ಕರಣಾ ಘಟಕ ಆರಂಭ: ಸಿಎಂ ಬೊಮ್ಮಾಯಿ ಘೋಷಣೆ

ಆದರೆ ಹಾಲಿನ ಪೂರೈಕೆ ಕೊರತೆಯಿಂದಾಗಿ ಕರ್ನಾಟಕ ಹಾಲು ಒಕ್ಕೂಟ ಈ ಕ್ರಮವನ್ನು ತೆಗೆದುಕೊಂಡಿದೆ. ಕರ್ನಾಟಕ ಸಹಕಾರಿ ಹಾಲು ಒಕ್ಕೂಟವು ಜುಲೈ 2022 ರಿಂದ ದಿನಕ್ಕೆ ಒಂಬತ್ತರಿಂದ 10 ಲಕ್ಷ ಲೀಟರ್ ಹಾಲು ಸಂಗ್ರಹಣೆಯಲ್ಲಿ ಕುಸಿತ ಕಂಡಿದೆ ಎಂದು ಡೆಕ್ಕನ್ ಹೆರಾಲ್ಡ್ ಈ ವರ್ಷದ ಜನವರಿಯಲ್ಲಿ ವರದಿ ಮಾಡಿತ್ತು. 2021-22 ರಲ್ಲಿ, ಹಾಲಿನ ಉತ್ಪಾದನೆಯು ದಿನಕ್ಕೆ 84.5 ಲಕ್ಷ ಲೀಟರ್ ಆಗಿತ್ತು ಮತ್ತು ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಹಾಲು ಉತ್ಪಾದನೆಯು ಕುಸಿತ ಕಂಡಿರುವುದು ಇದೇ ಮೊದಲು ಎಂದು ವರದಿಯಾಗಿತ್ತು. ಹಾಲಿನ ಉತ್ಪಾದನೆ ಕುಸಿತಕ್ಕೆ ಹಸಿರು ಮೇವು ಲಭ್ಯವಾಗದಿರುವುದು ಮತ್ತು ಈ ಋತುವಿನಲ್ಲಿ ಅಸಾಮಾನ್ಯ ಬಿಸಿಲು ಕಾರಣ ಎಂದು ಆರೋಪಿಸಲಾಗಿದೆ.

Reduction of packet products: Shortage in milk supply: KMF has decided to reduce packet products

Comments are closed.