Vijay Raghavendra- Spandana Vijay : ಒಲಿದ ಜೀವಗಳನ್ನು ಸಾವು ಕೂಡ ಬೇರಾಗಿಸೋದಿಕ್ಕೆ ಸಾಧ್ಯವಿಲ್ಲ ಅಂತಾರೇ. ಆ ಮಾತು ನಟ ಹಾಗೂ ಸ್ಯಾಂಡಲ್ ವುಡ್ ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ವಿಷ್ಯದಲ್ಲಿ ನಿಜವಾಗಿದೆ. ಪತ್ನಿ ಅಗಲಿ ವರ್ಷಗಳೇ ಕಳೆದರೂ ಪತ್ನಿಯ ನೆನಪಲ್ಲೇ ದಿನದೂಡ್ತಿರೋ ನಟ ವಿಜಯ್ ರಾಘವೇಂದ್ರ, ತಮ್ಮ ಸ್ಪೆಶಲ್ ದಿನಕ್ಕಾಗಿ ಪತ್ನಿಯ ಜೊತೆಗಿನ ಪೋಟೋ ಶೇರ್ ಮಾಡಿ ಭಾವುಕ ಶುಭಾಶಯ ಕೋರಿದ್ದಾರೆ. ವಿಜಯ್ ರಾಘವೇಂದ್ರ ಜೊತೆ ಪುತ್ರ ಶೌರ್ಯ ಕೂಡ ಹೆತ್ತವರಿಗೆ ಶುಭಕೋರಿದ್ದು ಈ ಎಮೋಶನಲ್ ಪೋಸ್ಟ್ ಗೆ ಸ್ಯಾಂಡಲ್ ವುಡ್ ಕಣ್ಣೀರು ಮಿಡಿದಿದೆ.

ನಟ ವಿಜಯ್ ರಾಘವೇಂದ್ರ ಸ್ಯಾಂಡಲ್ ವುಡ್ ನ ಚಿನ್ನಾರಿ ಮುತ್ತ. ಪುಟ್ಟ ಕಂದನಾಗಿದ್ದಾಗಲೇ ಬಣ್ಣ ಹಚ್ಚಿದ ವಿಜಯ್ ಕಿರುತೆರೆ,ಹಿರಿತೆರೆ ಎರಡರಲ್ಲೂ ಮಿಂಚಿದ ಪ್ರತಿಭೆ. ಒಳ್ಳೆಯ ನಟನೆ, ಕೈತುಂಬ ಸಿನಿಮಾ, ಮುದ್ದಾದ ಮಗ, ಪ್ರೀತಿಸುವ ಹೆಂಡತಿ. ಹೀಗೆ ಸ್ವರ್ಗ ಕಿಚ್ಚು ಹಚ್ಚುವಂತಿದ್ದ ಬದುಕಿಗೆ ವಿಧಿ ಕೊಳ್ಳಿ ಇಟ್ಟಿತು.
ವಿದೇಶ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ವಿಜಯ್, ಅಲ್ಲಿಯೇ ಲೋ ಬಿಪಿಯಿಂದ ಸಾವನ್ನಪ್ಪಿದರು. ಪತ್ನಿ ಸ್ಪಂದನಾ ಅಗಲಿಕೆಯಿಂದ ನಟ ವಿಜಯ್ ರಾಘವೇಂದ್ರ್ ಅಕ್ಷರಷಃ ಕುಸಿದು ಹೋಗಿದ್ದರು. ಇದಾದ ಬಳಿಕ ಕೊಂಚ ಚೇತರಿಸಿಕೊಂಡ ನಟ ವಿಜಯ್ ರಾಘವೇಂದ್ರ ತಮ್ಮ ಸಿನಿಮಾ ಹಾಗೂ ರಿಯಾಲಿಟಿ ಶೋಗಳತ್ತ ಗಮನ ಹರಿಸಿದ್ದಾರೆ. ಆದರೆ ಪರಸ್ಪರ ಪ್ರೀತಿಸಿ ಹಿರಿಯರ ಒಪ್ಪಿಗೆ ಪಡೆದು ಮದುವೆಯಾದ ವಿಜಯ್ ರಾಘವೇಂದ್ರ್ ಹಾಗೂ ಸ್ಪಂದನಾ ದಂಪತಿಗೆ ಅಗಸ್ಟ್ 26 ನೇ ತಾರೀಕು ವಿಶೇಷ ದಿನ.
ಇದನ್ನೂ ಓದಿ : ಡಾಲಿ ಧನಂಜಯ ವಿದ್ಯಾಪತಿಗೆ ಹಿಟ್ಲರ್ ಕಲ್ಯಾಣ ಖ್ಯಾತಿಯ ಮಲೈಕಾ ವಸೂಪಾಲ್ ನಾಯಕಿ
ಕಾರಣ ಏನೆಂದರೇ ಇದು ವಿಜಯ್ ಮತ್ತು ಸ್ಪಂದನಾ ಮದುವೆಯಾಗಿದ್ದು ಅಗಸ್ಟ್ 26. ಇಂದಿಗೆ ಸ್ಪಂದನಾ ಮತ್ತು ವಿಜಯ್ ಮದುವೆಯಾಗಿ ಬರೋಬ್ಬರಿ 17 ವರ್ಷಗಳೇ ಸಂದಿವೆ. ಈ ಸ್ಪೆಶಲ್ ಡೇ ಗೆ ವಿಜಯ್ ಪತ್ನಿ ನೆನೆದು ಭಾವುಕರಾಗಿದ್ದಾರೆ. ಈ ಸ್ಪೆಶಲ್ ದಿನದಂದು ಪತ್ನಿಯೊಂದಿಗಿನ ಪೋಟೋ ಶೇರ್ ಮಾಡಿರೋ ವಿಜಯ್ ಭಾವುಕರಾಗಿ ಆನ್ಯಿವರ್ಸರಿ ವಿಶ್ ಮಾಡಿದ್ದಾರೆ. ಇಂದಿಗೆ 17 ವರ್ಷಗಳು…..Happy Anniversary To Us ಚಿನ್ನ ಎಂದು ಪೋಸ್ಟ್ ಹಾಕಿದ್ದಾರೆ.

2008 ರ ಅಗಸ್ಟ್ 26 ರಂದು ವಿಜಯ್ ಮತ್ತು ಸ್ಪಂದನಾ ಹೊಸಬದುಕಿಗೆ ಕಾಲಿಟ್ಟಿದ್ದರು. ಖಡಕ್ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂರ ಏಕೈಕ ಪುತ್ರಿಯಾಗಿದ್ದ ಸ್ಪಂದನಾರನ್ನು ಕಾರ್ಯಕ್ರಮವೊಂದರಲ್ಲಿ ನೋಡಿದ ವಿಜಯ್ ಮೆಚ್ಷಿಕೊಂಡಿದ್ದು ಬಳಿಕ ಹಿರಿಯರ ಮನವೊಲಿಸಿ ಮದುವೆಯಾಗಿದ್ದರು. ಇನ್ನೂ ವಿಜಯ್ ಪುತ್ರ ಶೌರ್ಯ ಕೂಡ ತಾಯಿಗೆ ತಾವು ಸಿಹಿಮುತ್ತು ನೀಡುತ್ತಿರುವ ಪೋಟೋ ಹಂಚಿಕೊಂಡು ಮದುವೆಯ ವಾರ್ಷೀಕೋತ್ಸವದ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ : ಒಂದು ಸರಳ ಪ್ರೇಮಕತೆ ಸಿನಿಮಾಕ್ಕೆ ಸಾಥ್ ಕೊಟ್ಟ ರಮ್ಯ, ಸೂಫಿ ಶೈಲಿಯ ಹಾಡು ರಿಲೀಸ್
ಸ್ಪಂದನಾ ವಿಜಯ್ ಗೆ ತಕ್ಕ ಸೌಮ್ಯ ಸ್ವಭಾವದರವರಾಗಿದ್ದು, ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದರೂ ಪತಿಯ ಸಾಧನೆಯ ಬೆನ್ನೆಲುಬಾಗಿದ್ದರು. ಸ್ಪಂದನಾ ನಿಧನದಿಂದ ತಾವು ಬದುಕಿನ ಖುಷಿಯನ್ನೇ ಕಳೆದುಕೊಂಡಿದ್ದೇನೆ ಎಂದು ಹಲವು ಭಾರಿ ವೇಳೆ ವಿಜಯದ ರಾಘವೇಂದ್ರ್ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ಇನ್ನೂ ಬದುಕಿದ್ದಾಗಲೇ ಸ್ಪಂದನಾ ನಮ್ಮ ಬದುಕಿಗೊಂದು ಚೌಕಟ್ಟು ಹಾಕಿಕೊಟ್ಟಿದ್ದಾರೆ. ಮಗನನ್ನು ಕ್ರೀಡಾಪಟು ಮಾಡಬೇಕು, ಪುಟ್ಬಾಲ್ ಪ್ಲೇಯರ್ ಮಾಡಬೇಕೆಂಬ ಕನಸು ಪತ್ನಿಗಿತ್ತು. ಅದನ್ನು ನನಸು ಮಾಡಲು ನಾನು ಶ್ರಮವಹಿಸುತ್ತೇನೆ ಎಂದು ವಿಜಯ್ ಹೇಳಿಕೊಂಡಿದ್ದರು. ಬ್ಯಾಂಕಾಕ್ ನ ಥೈಲ್ಯಾಂಡ್ ಗೆ ಪ್ರವಾಸಕ್ಕೆ ತೆರಳಿದ್ದ ಸ್ಪಂದನಾ ಅಲ್ಲಿಯೇ 2023 ರ ಅಗಸ್ಟ್ 7 ರಂದು ನಿಧನ ರಾಗಿದ್ದರು. ಕೆಲದಿನಗಳ ಹಿಂದೆಯಷ್ಟೇ ಸ್ಪಂದನಾ ಪುಣ್ಯ ತಿಥಿ ನಡೆದಿದೆ.
ಇದನ್ನೂ ಓದಿ : ದರ್ಶನ್‌ಗೆ ಜೈಲಲ್ಲಿ ರಾಜಾತಿಥ್ಯ : ದಾಸ ಜೊತೆ ಅಧಿಕಾರಿಗಳಿಗೂ ಸಂಕಷ್ಟ
Happy Anniversary Chinna Tears of fans for Vijay Raghavendra post about Spandana Vijay