ಒಂದು ಸರಳ ಪ್ರೇಮಕತೆ ಸಿನಿಮಾಕ್ಕೆ ಸಾಥ್‌ ಕೊಟ್ಟ ರಮ್ಯ, ಸೂಫಿ ಶೈಲಿಯ ಹಾಡು ರಿಲೀಸ್‌

ಸಿಂಪಲ್ ಸುನಿ ಸಾರಥ್ಯದ ಒಂದು ಸರಳ ಪ್ರೇಮಕಥೆ (Ondu Sarala Prema Kate) ಆಗಮನಕ್ಕೆ ದಿನಗಣೆಯಷ್ಟೇ ಬಾಕಿ ಇದೆ. ಫೆಬ್ರವರಿ 8ಕ್ಕೆ ತೆರೆಗೆ ಬರ್ತಿರುವ ಈ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗ್ತಿದೆ.

ಸಿಂಪಲ್ ಸುನಿ ಸಾರಥ್ಯದ ಒಂದು ಸರಳ ಪ್ರೇಮಕಥೆ (Ondu Sarala Prema Kate) ಆಗಮನಕ್ಕೆ ದಿನಗಣೆಯಷ್ಟೇ ಬಾಕಿ ಇದೆ. ಫೆಬ್ರವರಿ 8ಕ್ಕೆ ತೆರೆಗೆ ಬರ್ತಿರುವ ಈ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗ್ತಿದೆ. ಕ್ಯಾರೆಕ್ಟರ್ ಟೀಸರ್ ಬಿಟ್ಟು ನಿರೀಕ್ಷೆ ಹೆಚ್ಚಿಸಿರುವ ಸುನಿ ಈಗ ಒಂದೊಂದೇ ಹಾಡು ಬಿಡುಗಡೆ ಮಾಡುವ ಮೂಲಕ ಚಿತ್ರಪ್ರೇಮಿಗಳಿಗೆ ಆಮಂತ್ರಣ ನೀಡುತ್ತಿದ್ದಾರೆ.

Ondu sarala Premakathe Movie Song Released Vinay Rajkumar Movie Support sandalwood Actress Ramya
Image Credit to Original Source

ಒಂದು ಸರಳ ಪ್ರೇಮಕಥೆ ಸಿನಿಮಾದ ಮತ್ತೊಂದು ಮೆಲೋಡಿ ಮಸ್ತಿ ಅನಾವರಣಗೊಂಡಿದೆ. ಸೂಫಿ ಶೈಲಿ ಸರಳ ಗೀತೆಯನ್ನು ಮೋಹಕ ತಾರೆ ರಮ್ಯಾ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

Ondu sarala Premakathe Movie Song Released Vinay Rajkumar Movie Support sandalwood Actress Ramya
Image Credit to Original Source

ಎಲ್ಲಾ ಮಾತನ್ನು ಎಂಬ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದು, ವೀರ್ ಸಮರ್ಥ್ ಸಂಗೀತ ಒದಗಿಸುವುದರ ಜೊತೆಗೆ ಶಿವಾನಿ ಸ್ವಾಮಿ ಜೊತೆಗೂಡಿ ಧ್ವನಿಯಾಗಿದ್ದಾರೆ. ದೊಡ್ಮನೆ ಕುವರ ವಿನಯ್ ರಾಜ್ ಕುಮಾರ್ ಹಾಗೂ ನಾಯಕಿ ‌ಮಲ್ಲಿಕಾ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ : ಶೂಟಿಂಗ್ ಮುಗಿಸಿದ ‘ಝೀಬ್ರಾ : ಶೀಘ್ರದಲ್ಲೇ ತೆರೆಗೆ ಡಾಲಿ-ಸತ್ಯದೇವ್ ಕಾಂಬಿಷೇನ್‌ ಸಿನಿಮಾ

Ondu sarala Premakathe Movie Song Released Vinay Rajkumar Movie Support sandalwood Actress Ramya
Image Credit to Original Source

ವಿನಯ್ ರಾಜ್ ಕುಮಾರ್ ಆತಿಷಯ ಎಂಬ ಪಾತ್ರದಲ್ಲಿ ‌ನಟಿಸಿದ್ದು, ಅವರಿಗೆ ಜೋಡಿಯಾಗಿ ಮಲ್ಲಿಕಾ ಸಿಂಗ್ ಹಾಗೂ ಸ್ವಾತಿಷ್ಠಾ ಕೃಷ್ಣನ್ ಅಭಿನಯಿಸಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಾಧು ಕಿಲಾ ಹಾಗೂ ರಾಜೇಶ್ ನಟರಂಗ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : ಕಾಟೇರ ಸಕ್ಸಸ್‌ : ಮಾಲಾಶ್ರೀ ಪುತ್ರಿ ಆರಾಧನಾ ರಾಮ್‌ ಬೆನ್ನಲ್ಲೇ ಚಿತ್ರರಂಗಕ್ಕೆ ಶುತ್ರಿ ಪುತ್ರಿ ಗೌರಿ

Ondu sarala Premakathe Movie Song Released Vinay Rajkumar Movie Support sandalwood Actress Ramya
Image Credit to Original Source

ಒಂದು ಸರಳ ಪ್ರೇಮಕಥೆಗೆ ಮೈಸೂರು ರಮೇಶ್ ನಿರ್ಮಾಣ ಹಣ ಹಾಕಿದ್ದಾರೆ. ಒಂದು ಸರಳ ಪ್ರೇಮಕಥೆಗೆ ಆದಿ ಅವರ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಹಾಗೂ ಕಾರ್ತಿಕ್ ಅವರ ಕ್ಯಾಮರಾ ಶ್ರಮವಿದೆ.

ಇದನ್ನೂ ಓದಿ :  ನಿರೂಪ್‌ ಭಂಡಾರಿ ಜೊತೆಯಾದ ಸಾಯಿ ಕುಮಾರ್‌, ಮೋಡಿ ಮಾಡುತ್ತಾ ರಂಗಿತರಂಗ ಜೋಡಿ

Ondu sarala Premakathe Movie Song Released Vinay Rajkumar Movie Support sandalwood Actress Ramya

Comments are closed.