ಮಂಗಳವಾರ, ಏಪ್ರಿಲ್ 29, 2025
HomeCinemaHello god Dr. Bro: ಡಾ.ಬ್ರೋ ಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಕನ್ನಡಿಗರ ಆಗ್ರಹ; ಏನಂತಾರೆ...

Hello god Dr. Bro: ಡಾ.ಬ್ರೋ ಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಕನ್ನಡಿಗರ ಆಗ್ರಹ; ಏನಂತಾರೆ ನಮಸ್ಕಾರ ದೇವರು..?

- Advertisement -

Hello god Dr. Bro: ಅತ್ಯುನ್ನತ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿಯನ್ನು ಡಾ. ಬ್ರೋ ಗೆ ನೀಡುವಂತೆ ಕನ್ನಡಿಗರು ಆಗ್ರಹಿಸಿದ್ದು, ಇದಕ್ಕೆ ಡಾ.ಬ್ರೋ ಅವರು ಕೆಲವು ಹೇಳಿಕೆಯನ್ನು ನೀಡಿದ್ದಾರೆ. ಹಾಗಿದ್ದರೆ ಕನ್ನಡಿಗರ ಆಗ್ರಹದ ಕುರಿತಾಗಿ ಏನಂತಾರೆ ನಮಸ್ಕಾರ ದೇವರು ಎನ್ನುವ ಮಾಹಿತಿ ಇಲ್ಲಿದೆ.

ಯು ಟ್ಯೂಬ್‌ ಇರುವವರೆಗೂ ಡಾ. ಬ್ರೋ(Hello god Dr. Bro) ಹೆಸರು ನೆನಪಿನಲ್ಲಿರುತ್ತದೆ. ಡಾ. ಬ್ರೋ ಒಬ್ಬ ಫೇಮಸ್‌ ಯುಟ್ಯೂಬರ್‌. ಈತನ ನಿಜವಾದ ಹೆಸರು ಗಗನ್‌. ಈತನಿಗೆ ಓದುವುದಕ್ಕಿಂತಲೂ ಹಾಡು, ಡಾನ್ಸ್‌, ನಿರೂಪಣೆ ಇತರ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚು. ಹೀಗಾಗಿ ಈತ 2016 ರಲ್ಲಿ ತನ್ನದೇ ಆದ ಯುಟ್ಯೂಬ್‌ ಚಾನೆಲ್‌ ಒಂದನ್ನು ಶುರು ಮಾಡಿದ್ದು, ಮೊದಮೊದಲು ಕೇವಲ ಕಾಮಿಡಿ ವಿಡಿಯೋಗಳನ್ನು ಮಾತ್ರ ಹಾಕುತ್ತಿದ್ದ. ನಂತರದಲ್ಲಿ ಸಿನಿಮಾ ನಟರ ಇಂಟರ್‌ ವ್ಯೂ, ತಾನು ತಿರುಗಾಡಿದ ಬೇರೆ ಬೇರೆ ರಾಜ್ಯಗಳ, ದೇಶಗಳ ವಿವರಗಳನ್ನು ಹಾಕಲು ಶುರು ಮಾಡಿದ. ಇದರಿಂದಲೇ ಕನ್ನಡಿಗರ ಮನಸನ್ನು ಗೆದ್ದಿದ್ದಾನೆ. ಬಹಳ ಚಿಕ್ಕ ಚಯಸ್ಸಿನಲ್ಲಿಯೇ ಬಹಳ ಸಾಧನೆ ಮಾಡಿದ್ದು, ಆತನ ಸಾಧನೆಗೆ ಕಾರಣ ಯುಟ್ಯೂಬ್.‌ ಯುಟ್ಯೂಬ್‌ ನಲ್ಲಿ ಆತನಿಗೆ ನಮಸ್ಕಾರ ದೇವರು ಅಂತಾನೆ ಕರೆಯುತ್ತಾರೆ. ಆದ್ದರಿಂದ ಗಗನ್‌ ನಮಸ್ಕಾರ ದೇವರು ಡಾ.ಬ್ರೋ ಎಂದೇ ಯುಟ್ಯೂಬ್‌ ನಲ್ಲಿ ಪ್ರಸಿದ್ದರಾಗಿದ್ದಾರೆ.

ಇದೀಗ ಕನ್ನಡಿಗರು ಡಾ. ಬ್ರೋ ಅವರ ಈ ರೀತಿಯ ಸಾಧನೆಗೆ ಅತ್ಯುನ್ನತ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕೆಂದು ಆಗ್ರಹಿಸಿದ್ದು, ಬ್ರೋ ಅವರು ಪ್ರಶಸ್ತಿಯನ್ನು ಪಡೆದುಕೊಳ್ಳುವಂತ ದೊಡ್ಡ ಸಾಧನೆ ನಾನೇನು ಮಾಡಿಲ್ಲ ಎನ್ನುವುದಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ :Kantara OTT Release Date: ಕಾಂತಾರ OTT ರಿಲೀಸ್‌ ಡೇಟ್‌ ಮುಂದೂಡಿಕೆ; ಕಾರಣ ಇಲ್ಲಿದೆ

ಇದನ್ನೂ ಓದಿ : Mission Majnu: ಥಿಯೇಟರ್ ನಲ್ಲಿ ರಿಲೀಸ್‌ ಆಗುತ್ತಿಲ್ಲ “ಮಿಷನ್‌ ಮಜ್ನು” ಚಿತ್ರ:‌ ಬಾಲಿವುಡ್‌ ನಲ್ಲಿ ರಶ್ಮಿಕಾಗೆ ಮತ್ತೊಂದು ಹಿನ್ನಡೆ

ಏನೆನ್ನುತ್ತಾರೆ ಡಾ.ಬ್ರೋ…?
ಕನ್ನಡಿಗರ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿದ ಡಾ.ಬ್ರೋ, ” ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಳ್ಳುವ ದೊಡ್ಡ ಕೆಲಸ ನಾನೇನು ಮಾಡಿಲ್ಲ. ಮುಂದೆ ಏನಾದರೂ ಸಾಧನೆ ಮಾಡಿ ಆ ಪ್ರಶಸ್ತಿನ ತಗೊಳ್ಳೋಣ. ಆ ಪ್ರಶಸ್ತಿಗೆ ತುಂಬಾನೆ ದೊಡ್ಡ ಗೌರವವಿದೆ. ನಾನು ಇನ್ನೂ ಏನು ಮಾಡಿಲ್ಲ, ಮುಂದೆ ಏನಾದ್ರೂ ಮಾಡಿದ್ರೆ ಪ್ರಶಸ್ತಿ ಕೊಡ್ಲಿ ಬೇಕಾದ್ರೆ, ಇಸ್ಕೊತೀನಿ. ಸದ್ಯಕ್ಕಂತು ಇಲ್ಲ.” ಎಂದಿದ್ದಾರೆ.

https://www.youtube.com/watch?v=6vHrvWFeqRI

ಇನ್ನೂ ಕರ್ನಾಟಕ ಸರ್ಕಾರದಿಂದ ಕೊಡಲಾಗುವ ಎರಡನೇ ಅತ್ಯುನ್ನತ ನಾಗರೀಕ ಪ್ರಶಸ್ತಿಯೇ ಈ ಕನ್ನಡ ರಾಜ್ಯೋತ್ಸವ ಪ್ರಶಸ್ತಿ . ಕಲೆ , ಸಾಹಿತ್ಯ, ಸಿನಿಮಾ ,ಸಂಗೀತ , ಯಕ್ಷಗಾನ, ಶಿಲ್ಪಕಲೆ ,ಚಿತ್ರಕಲೆ , ಸಮಾಜಸೇವೆ, ಪತ್ರಿಕೋದ್ಯಮ , ಕ್ರೀಡೆ , ಶಿಕ್ಷಣ , ತಂತ್ರಜ್ಞಾನ ಸೇರಿದಂತೆ ವಿವಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ .

Hello god Dr. Bro: Dr. Rajyotsava Award, the highest award. Kannadigars have demanded to give to Bro, to which Dr. Bro has given some statement. If so, here is the information about the demand of the Kannadigas.

RELATED ARTICLES

Most Popular