Jio 5G and Airtel 5G : ದೇಶದಲ್ಲಿ ಎಲ್ಲೆಲ್ಲಿ ಜಿಯೊ ಮತ್ತು ಏರ್‌ಟೆಲ್‌ ಸೇವೆ ಲಭ್ಯ; 5G ಹೀಗೆ ಆಕ್ಟಿವೇಟ್‌ ಮಾಡಿ

ಜಿಯೊ ಮತ್ತು ಏರ್‌ಟೆಲ್‌ನ 5 ಜಿ (Jio 5G and Airtel 5G) ಸೇವೆಗಳು ದೇಶದ ಅನೇಕ ನಗರಗಳಲ್ಲಿ ದೊರಕುತ್ತಿವೆ. ಟೆಲಿಕಾಂ ಕಂಪನಿಗಳು 5ಜಿ ಸೇವೆಯನ್ನು ಅನೇಕ ನಗರ (City) ಗಳಿಗೆ ವಿಸ್ತರಿಸುತ್ತಿವೆ. ಪ್ರತಿದಿನ 5G ಸೇವೆಯು ಹೆಚ್ಚಿನ ಪ್ರದೇಶಗಳನ್ನು ತಲುಪುವ ಬಗ್ಗೆ ಕೇಳಿಬರುತ್ತಿದೆ. ಕಂಪನಿಗಳು ತಮ್ಮ ಭರವಸೆಯ 5ಜಿ ಸೇವೆಗಳನ್ನು ಭಾರತದಾದ್ಯಂತ ವೇಗವಾಗಿ ನೀಡುತ್ತಿವೆ.

5ಜಿ ಸೇವೆಗಳನ್ನು ನೀಡುತ್ತಿರುವ ಏರ್‌ಟೆಲ್‌ ಮತ್ತು ಜಿಯೊ ಸದ್ಯ ಇದಕ್ಕಾಗಿ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಟೆಲಿಕಾಂ ಕಂಪನಿಗಳು ಈ ಸೇವೆಯನ್ನು ಉಚಿತವಾಗಿ ನೀಡುತ್ತಿವೆ. ಜನರು 5ಜಿ ಸೇವೆಯ ಲಭ್ಯಕ್ಕಾಗಿ ಸಿಮ್‌ಕಾರ್ಡ್‌ಗಳನ್ನು ಬದಲಿಸುವ ಅಗತ್ಯವಿಲ್ಲ. ಇತ್ತೀಚಿನ 4ಜಿ ನೆಟ್‌ವರ್ಕ್‌ಗಿಂತ 5ಜಿ 10 ಪಟ್ಟು ಹೆಚ್ಚಿನ ವೇಗವನ್ನು ನೀಡುತ್ತದೆ ಎಂದು ಭರವಸೆ ನೀಡಲಾಗಿದೆ. 5ಜಿ ಸೇವೆ ಲಭ್ಯತೆಯನ್ನು ಹೊಂದಿರುವ ನಗರಗಳ ಪಟ್ಟಿ ಇಲ್ಲಿದೆ.

ಏರ್‌ಟೆಲ್‌ 5ಜಿ ಸೇವೆ ಲಭ್ಯವಿರುವ ನಗರಗಳು :
ಪುಣೆ
ದಿಲ್ಲಿ
ಮುಂಬೈ
ಚೆನೈ
ಬೆಂಗಳೂರು
ಹೈದರಾಬಾದ್‌
ಪಾಣಿಪತ್‌
ಗುರುಗ್ರಾಂ
ಸಿಲಿಗುರಿ
ನಾಗ್ಪುರ್‌

ಜಿಯೊ 5ಜಿ ಸೇವೆ ಲಭ್ಯವಿರುವ ನಗರಗಳು :
ಹೈದರಾಬಾದ್‌
ಬೆಂಗಳೂರು
ಮುಂಬೈ
ವಾರಣಾಸಿ
ಚೆನೈ
ಕೋಲ್ಕತ್ತಾ
ಗುರುಗ್ರಾಂ
ದಿಲ್ಲಿ
ನೊಯ್ಡಾ
ಗಾಜಿಯಾಬಾದ್‌
ಫರೀದಾಬಾದ್‌

ನಿಮ್ಮ ಫೋನ್‌ನಲ್ಲಿ 5ಜಿ ಸೇವೆ ಆಕ್ಟಿವೇಟ್‌ ಮಾಡಿಕೊಳ್ಳುವುದು ಹೇಗೆ?
5ಜಿ ಸೇವೆ ಆಕ್ಟಿವೇಟ್‌ ಮಾಡಿಕೊಳ್ಳುವುದು ಬಹಳ ಸುಲಭ. ನಿಮ್ಮ ಮೊಬೈಲ್ ಫೋನ್‌ನ ನೆಟ್‌ವರ್ಕ್ ಸೆಟ್ಟಿಂಗ್‌ಗಳಿಗೆ ಹೋಗಿ. ಅದರಲ್ಲಿ 5G ನೆಟ್‌ವರ್ಕ್ ಅನ್ನು ಆಯ್ಕೆ ಮಾಡಿಕೊಳ್ಳಿ. ನೀವು 5G ಲಭ್ಯವಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್ 5G ಯೊಂದಿಗೆ ಹೊಂದಿಕೊಳ್ಳುತ್ತದೆ.

5ಜಿ ಸೇವೆಗೆ ಪ್ರವೇಶಿಸುವುದು ಹೇಗೆ?
ಎಲ್ಲಾ ರಿಲಯನ್ಸ್ ಜಿಯೋ ಬಳಕೆದಾರರು 5G ಸೇವೆಗಳನ್ನು ಪ್ರವೇಶಿಸಲು ಸಾಧ್ಯವಿಲ್ಲ. ಕಂಪನಿಯು 5G ವೆಲ್ಕಮ್ ಆಫರ್ ಅನ್ನು ಗ್ರಾಹಕರಿಗೆ ಕಳುಹಿಸುತ್ತದೆ. ಅಂತಹವರು ಮಾತ್ರ 5ಜಿ ಸೇವೆಗೆ ಒಳಪಡಲು ಸಾಧ್ಯ. ಆದರೆ ಏರ್‌ಟೆಲ್‌ ಬಳಕೆದಾರರು ಚಿಂತಿಸುವ ಅಗತ್ಯವಿಲ್ಲ. ಇದು ಎಲ್ಲರಿಗೂ 5ಜಿ ಸೇವೆಯನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ : Sandhya Devanathan: ಮೆಟಾ ಇಂಡಿಯಾದ ಉಪಾಧ್ಯಕ್ಷರಾಗಿ ನೇಮಕಗೊಂಡ ಸಂಧ್ಯಾ ದೇವನಾಥನ್‌

ಇದನ್ನೂ ಓದಿ : Google Health Connect App : ಗೂಗಲ್‌ನ ಹೊಸ ಅಪ್ಲಿಕೇಶನ್‌ ಹೆಲ್ತ್‌ ಕನೆಕ್ಟ್‌ ಬಗ್ಗೆ ನಿಮಗೆ ಗೊತ್ತಾ…

(Jio 5G and Airtel 5G services available Indian cities. How to access 5g services)

Comments are closed.