ನೀವು ಸಿನಿಮಾ ಪ್ರಿಯರಾ? ಅದರಲ್ಲೂ ಹಾರರ್ ಸಿನಿಮಾ ನೋಡೋಕೆ ಆಸಕ್ತಿ ಇದ್ಯಾ? ಹಾಗಿದ್ದರೇ ಇಲ್ಲೊಂದು ಅದ್ಭುತ ಆಫರ್ ನಿಮಗಾಗಿ ಕಾದಿದೆ. ಹಾಲಿವುಡ್ ನ 13 ಹಾರರ್ ಸಿನಿಮಾಗಳನ್ನು ನೋಡಿದವರಿಗೆ 1300 ಯುಎಸ್ ಡಾಲರ್ ಬಹುಮಾನ ನೀಡೋದಾಗಿ ಫೈನಾನ್ಸ್ ಬುಜ್ ಕಂಪನಿ ಘೋಷಿಸಿದೆ.

ಹಾರರ್ ಸಿನಿಮಾಗಳನ್ನು ನೋಡುವಾಗ ಪ್ರೇಕ್ಷಕನ ಎದೆಬಡಿತ ಹೇಗಿರುತ್ತದೆ? ಎದೆಬಡಿತದ ಮಟ್ಟದಲ್ಲಿ ಯಾವ ರೀತಿ ಬದಲಾವಣೆಯಾಗುತ್ತದೆ ಎಂಬುದನ್ನು ಅಧ್ಯಯನ ಮಾಡಲು ಫೈನಾನ್ಸ್ ಬುಜ್ ಕಂಪನಿ ಇಂತಹದೊಂದು ಆಫರ್ ನೀಡಿದೆ.

ಹಾಲಿವುಡ್ ನ ಈ ಹಾರರ್ ಸಿನಿಮಾಗಳನ್ನು ವೀಕ್ಷಿಸುವ ಪ್ರೇಕ್ಷಕರಿಗೆ ಕಂಪನಿ ಫಿಟ್ ಬಿಟ್ ಯಂತ್ರವನ್ನು ಅಳವಡಿಸಲಿದ್ದು, ಹಾರರ್ ಸಿನಿಮಾ ವೀಕ್ಷಣೆ ವೇಳೆ ಯಾರ ಹೃದಯಬಡಿತ ಸಾಮಾನ್ಯ ಸ್ಥಿತಿಯಲ್ಲೇ ಇರುತ್ತದೆಯೋ ಅಂತಹವರಿಗೆ ಬಹುಮಾನ ಸಿಗಲಿದೆ.

ಅತ್ಯಂತ ಹಾರರ್ ಸಿನಿಮಾವನ್ನು ಒಬ್ಬರೇ ಕುಳಿತು ನೋಡಬೇಕು ಎಂಬುದು ಕಂಡಿಶನ್. ಸಪ್ಟೆಂಬರ್ 26 ರಿಂದ ಇದಕ್ಕಾಗಿ ಕಂಪನಿ ಆನ್ ಲೈನ್ ಅರ್ಜಿ ಸ್ವೀಕರಿಸಲಿದ್ದು, ಅಕ್ಟೋಬರ್ 1 ರ ವೇಳೆಗೆ ವಿಜೇತರ ಘೋಷಣೆಯಾಗಲಿದೆ.
ಫೈನಾನ್ಸ್ ಬುಜ್ ಕಂಪನಿ ಪ್ರೇಕ್ಷಕನ ಎದೆಬಡಿತದ ಜೊತೆ ಕಡಿಮೆ ಬಜೆಟ್ ಮತ್ತು ಭಾರಿ ಬಜೆಟ್ ಹಾರರ್ ಸಿನಿಮಾಗಳು ಪ್ರೇಕ್ಷಕನ ಮೇಲೆ ಬೀರುವ ಪ್ರಭಾವವನ್ನು ಅಧ್ಯಯನ ಮಾಡಲು ಕಂಪನಿ ನಿರ್ಧರಿಸಿದೆ. ಅದಕ್ಕಾಗಿ ಪ್ರೇಕ್ಷಕರು ನೋಡಬೇಕಿರುವ ಸಿನಿಮಾ ಪಟ್ಟಿಯನ್ನು ಕಂಪನಿ ಬಿಡುಗಡೆ ಮಾಡಿದೆ.
1.ಸಾ
2.ದಿ ಅಮಿಟಿವಿಲ್ಲೆ ಹಾರರ್
3.ಅ ಕ್ವೈಟ್ ಪ್ಲೇಸ್
4.ಅ ಕ್ವೈಟ್ ಪ್ಲೇಸ್ ಪಾರ್ಟ್ -2
5.ಕ್ಯಾಂಡಿಮ್ಯಾನ್
6.ಇನ್ ಸಿಡಿಯಸ್
7.ದಿ ಬ್ಲೇರ್ ವಿಚ್ ಪ್ರೊಜೆಕ್ಟ್
8.ಸಿನ್ನಿಸ್ಟರ್
9.ಗೆಟ್ ಔಟ್
10.ದಿ.ಪರ್ಗ್
11.ಹಾಲೋವಿನ್
12.ಪ್ಯಾರಾನಾರ್ಮಲ್ ಆಕ್ಟಿವಿಟಿ
13.ಅನ್ನಾಬೆಲ್ಲೆ
financebuzz company to pay a person huge money to watch 13 horror movies in10 days