Nipah Virus : ಮಂಗಳೂರು ಯುವಕನ ನಿಫಾ ವೈರಸ್‌ ವರದಿ ನೆಗೆಟಿವ್

ಮಂಗಳೂರು : ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಕಾರವಾರದ ಮೂಲದ ಯುವಕನ ನಿಫಾ ಟೆಸ್ಟ್‌ ವರದಿ ಆರೋಗ್ಯ ಇಲಾಖೆಯ ಕೈ ಸೇರಿದೆ. ವರದಿಯಲ್ಲಿ ಯುವಕನಿಗೆ ನಿಫಾ ವೈರಸ್‌ ಇಲ್ಲ ಅನ್ನೋದು ದೃಢಪಟ್ಟಿದೆ. ಈ ಮೂಲಕ ಕರಾವಳಿಯ ಜನತೆ ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ.

ಗೋವಾದ ಲ್ಯಾಬ್‌ವೊಂದರಲ್ಲಿ ಸ್ಯಾಂಪಲ್‌ ಕಲೆಕ್ಟ್‌ ಮಾಡುವ ಕೆಲಸವನ್ನು ಮಾಡ್ತಿದ್ದ ಕಾರವಾರ ಮೂಲದ ಯುವಕ ಮನೆಗೆ ಬಂದಿದ್ದ ವೇಳೆಯಲ್ಲಿ ಜ್ವರ ಹಾಗೂ ಇನ್ನಿತರ ಲಕ್ಷಣಗಳು ಕಾಣಿಸಿಕೊಂಡಿದೆ. ಇಂಟರ್‌ನೆಟ್‌ನಲ್ಲಿ ನಿಫಾ ಜ್ವರದ ಲಕ್ಷಣಗಳ ಕುರಿತು ಸರ್ಚ್‌ ಮಾಡಿದ್ದ. ಈ ವೇಳೆಯಲ್ಲಿ ತನಗೂ ಕೂಡ ನಿಫಾ ವೈರಸ್‌ ತಗುಲಿದೆ ಎಂದು ಭಯಗೊಂಡಿದ್ದ.

ಇದನ್ನೂ ಓದಿ : ಯುವಕನಲ್ಲಿ ಪತ್ತೆಯಾಯ್ತು ನಿಫಾ ವೈರಸ್‌ ಲಕ್ಷಣ ! ಬೆಂಗಳೂರಿಗೆ ಸ್ವ್ಯಾಬ್‌ ರವಾನೆ

ಆರಂಭದಲ್ಲಿ ಕಾರವಾರದ ಆಸ್ಪತ್ರೆಗೆ ದಾಖಲಾಗಿದ್ದ ಯುವಕನನ್ನು ನಂತರ ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತು. ನಿಫಾ ಭಯದ ಹಿನ್ನೆಲೆಯಲ್ಲಿ ಅಂತಿಮವಾಗಿ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದ. ಯುವಕನ ಮನವಿಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಯುವಕನ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಕಳುಹಿಸಿಕೊಟ್ಟಿತ್ತು. ಇದೀಗ ಯುವಕನ ನಿಫಾ ಟೆಸ್ಟ್‌ ವರದಿ ಆರೋಗ್ಯ ಇಲಾಖೆಯ ಕೈ ಸೇರಿದೆ.

ವರದಿಯಲ್ಲಿ ಯುವಕನಿಗೆ ನಿಫಾ ವೈರಸ್‌ ಇಲ್ಲಾ ಅನ್ನೋದು ದೃಢಪಟ್ಟಿದೆ. ಇದೀಗ ವೈದ್ಯರು ಯುವಕನ ಜ್ವರಕ್ಕೆ ಕಾರಣವೇನು ಅನ್ನೋ ಬಗ್ಗೆ ತಪಾಸಣೆ ನಡೆಸುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಯುವಕನಿಗೆ ನಿಫಾದ ಲಕ್ಷಣ ಇಲ್ಲ. ಆದರೆ ಯುವಕನ ಗೊಂದಲ ನಿವಾರಣೆಗೆ ಟೆಸ್ಟ್‌ ಮಾಡಿಸಿದ್ದೇವೆ ಎಂದು ಹೇಳಿದ್ದರು. ಇದೀಗ ಟೆಸ್ಟ್‌ ರಿಪೋರ್ಟ್‌ ನೆಗೆಟಿವ್‌ ಬಂದಿರೋದ್ರಿಂದಾಗಿ ಜನರಷ್ಟೇ ಅಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೂಡ ರಿಲ್ಯಾಕ್ಸ್‌ ಆಗಿದ್ದಾರೆ.

ಇದನ್ನೂ ಓದಿ : ಮಂಗಳೂರಿಗರೇ ಎಚ್ಚರ ! ಹಾಡುಹಗಲೇ ದರೋಡೆಕೋರರನ್ನು ಹೊಡೆದು ಓಡಿಸಿದ ಧೀರ ಮಹಿಳೆ

(Mangalore youth’s Nipah virus report is negative )

Comments are closed.