‘ಹೋಪ್’ ಟ್ರೈಲರ್‌ ಬಿಡುಗಡೆ ಮಾಡಿದ ಸಚಿವ ಅಶ್ವತ್ಥ್ ನಾರಾಯಣ್

ಒಂದಷ್ಟು ನಿರೀಕ್ಷೆಗಳ ಒಡ್ಡೋಲಗದ ನಡುವೆ ಬಿಡುಗಡೆಗೆ ಸಜ್ಜಾಗಿರುವ ಹೋಪ್ ಸಿನಿಮಾ (HOPE Trailer) ಜುಲೈ 8ರಂದು ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಈಗಾಗ್ಲೇ ಪೋಸ್ಟರ್, ಟೀಸರ್ ಮೂಲಕ ಸದ್ದು ಮಾಡ್ತಿರುವ ಹೋಪ್ ಟ್ರೇಲರ್ ನ್ನು ಸಚಿವ ಅಶ್ವತ್ಥ್ ನಾರಾಯಣ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಸಚಿವರಾದ ಅಶ್ವತ್ಥ್ ನಾರಾಯಣ್ ಮಾತಾನಾಡಿ, ಬಹಳ ಒಳ್ಳೆ ವಿಶೇಷ ಆಯ್ಕೆ ಮಾಡಿಕೊಂಡಿದ್ದೀರಾ. ವರ್ಗಾವಣೆ ಸರ್ಕಾರದ ಮುಖ್ಯ ಬಾಧೆ. ನಾವು ಅದ್ರಲ್ಲೇ ಮುಳುಗಿರುವವರು. ನಾವು ಅದನ್ನು ತುಂಬು ಅರ್ಥ ಮಾಡಿಕೊಂಡಿದ್ದೇನೆ. ವರ್ಗಾವಣೆ ಅನ್ನೋದು ಪಿಡುಗು. ಅದೊಂದು ಚಾಲೆಂಜ್. ಹೀಗಾಗಿ ಇದರ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿರುವುದು ಶ್ಲಾಘನೀಯ. ಇದು ಸಮಾಜದ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ಜಾಗೃತಿ ಮೂಡಿಸುವ ಕೆಲಸವೆಲ್ಲಾ ಆಗ್ಬೇಕು ಅನ್ನೋವ ಪ್ರಯತ್ನವನ್ನು ಸಿನಿಮಾ ಮೂಲಕ ಮಾಡಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದು ಆಗಲಿ ಎಂದರು.

ನಿರ್ಮಾಪಕಿ ವರ್ಷಾ ಸಂಜೀವ್, ಜುಲೈ 8ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ. ಟ್ರೇಲರ್ ಎಲ್ಲರಿಗೂ ಇಷ್ಟವಾಗಿದೆ ಎಂದು ಭಾವಿಸುತ್ತೇನೆ. ಪ್ರತಿಯೊಬ್ಬರು ತುಂಬಾ ಚೆನ್ನಾಗಿ ಅಭಿನಯಿಸಿ ದ್ದಾರೆ. ಕೋವಿಡ್ ಟೈಮ್ ನಲ್ಲಿಯೂ ಕಲಾವಿದರು ಕೆಲಸ ಮಾಡಿದ್ದಾರೆ. ಒಳ್ಳೆ ಔಟ್ ಫುಲ್ ಬಂದಿದೆ. ರಾಜಕೀಯ ಒತ್ತಡದಿಂದ ವರ್ಗಾವಣೆ ಹೇಗೆಲ್ಲಾ ನಡೆಯುತ್ತಿದೆ ಅನ್ನೋದನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ ಎಂದರು. ಶ್ವೇತಾ ಶ್ರೀವಾಸ್ತವ್ ಮಾತಾನಾಡಿ, ಏಳು ವರ್ಷದ ನಂತ್ರ ಎಲ್ಲರೂ ಭೇಟಿಯಾಗ್ತಿರೋದು ಖುಷಿ ಕೊಟ್ಟಿದೆ. ವೈಯಕ್ತಿಕವಾಗಿ ಈ ಕಥೆ ಕನೆಕ್ಟ್ ಆಯ್ತು. ಸಮಾಜವನ್ನು ಕಣ್ತೆರೆಸುವ ಕಥೆ ಇದು. ತುಂಬಾ ಸೂಕ್ಷ್ಮ ಸಬೆಕ್ಟ್ ಇದು. ಸಿನಿಮಾದಲ್ಲಿ ಒಳ್ಳೆ ಕಲಾವಿದರು ಇದ್ದಾರೆ. ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ ಪ್ರತಿಯೊಬ್ಬರು ಸಪೋರ್ಟ್ ಮಾಡಿ ಎಂದರು.

ಚಿತ್ರರಂಗದಿಂದ ಒಂದಷ್ಟು ಗ್ಯಾಪ್ ತೆಗೆದುಕೊಂಡಿದ್ದ ಶ್ವೇತಾ ಶ್ರೀವಾಸ್ತವ್ ಹೋಪ್ ಸಿನಿಮಾ ಮೂಲಕ ಮತ್ತೆ ಕಂಬ್ಯಾಕ್ ಮಾಡ್ತಿದ್ದು, ಕೆಎಎಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಕೆಎಎಸ್ ಅಧಿಕಾರಿ ವರ್ಗಾವಣೆ ಜನ ಸಾಮಾನ್ಯರ ಏನೆಲ್ಲಾ ಎಂಬ ಕಥಾವಸ್ತುವನ್ನು ಇಟ್ಕೊಂಡು ಸಿನಿಮಾ ಮಾಡಲಾಗಿದೆ. ಸುಮಲತಾ ಅಂಬರೀಷ್, ಪ್ರಮೋದ್ ಶೆಟ್ಟಿ, ಗೋಪಾಲ ಪಾಂಡೆ, ಪ್ರಕಾಶ್ ಬೆಳವಾಡಿ, ಸಿರಿ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ.

ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್, ಹೋಪ್ ಸಿನಿಮಾಗೆ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಜಲ್ವಂತ ಸಿನಿಮಾ ನಿರ್ದೇಶಿಸಿದ ಅಂಬರೀಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಎಸ್.ಹಲ್ಲೇಶ್ ಕ್ಯಾಮರಾ ವರ್ಕ್ ಮಾಡಿದ್ದು, ರಿತ್ವಿಕ್ ಮುರಳೀಧರ್ ಸಂಗೀತ ನೀಡಿದ್ದಾರೆ. ಮಹಿಳಾ ಪ್ರಧಾನ ಸಿನಿಮಾವಾಗಿರುವ ಹೋಪ್ ಇದೇ ಜುಲೈ 8 ರಂದು ಬೆಳ್ಳಿತೆರೆಗೆ ಎಂಟ್ರಿ ಕೊಡ್ತಿದೆ.

ಇದನ್ನೂ ಓದಿ : Yash 100 crore offer : ಕೆಜಿಎಫ್‌ 2 ಸೂಪರ್‌ ಸಕ್ಸಸ್‌ : ಯಶ್ ಗೆ 100 ಕೋಟಿ ರೂಪಾಯಿ ಸಂಭಾವನೆ ಆಫರ್‌ ಕೊಟ್ಟ ನಿರ್ಮಾಪಕ ದಿಲ್ ರಾಜು

ಇದನ್ನೂ ಓದಿ : Rashmika Mandanna Controversy : ನಾಯಿಗೂ ಫ್ಲೈಟ್ ಟಿಕೇಟ್ ಬುಕ್ ಮಾಡಿ : ರಶ್ಮಿಕಾ ಸುತ್ತ ಹೊಸತೊಂದು ವಿವಾದ

HOPE Trailer Released by Ashwath Narayana Shwetha Srivatsav, Sumalatha, Pramod Shetty

Comments are closed.