ಭಾನುವಾರ, ಏಪ್ರಿಲ್ 27, 2025
HomeCinemaShruti Haasan : ಇದುವರೆಗೂ ನಿಮಗೆಷ್ಟು ಬ್ರೇಕ್ ಅಪ್ ಆಗಿದೆ: ಅಭಿಮಾನಿ ಪ್ರಶ್ನೆಗೆ ಶೃತಿ ಹಾಸನ್...

Shruti Haasan : ಇದುವರೆಗೂ ನಿಮಗೆಷ್ಟು ಬ್ರೇಕ್ ಅಪ್ ಆಗಿದೆ: ಅಭಿಮಾನಿ ಪ್ರಶ್ನೆಗೆ ಶೃತಿ ಹಾಸನ್ ಉತ್ತರವೇನು ಗೊತ್ತಾ?!

- Advertisement -

ಸೆಲೆಬ್ರೆಟಿಗಳು ಹಾಗೂ ನಟ ನಟಿಯರ ಪರ್ಸನಲ್ ಲೈಫ್ ಬಗ್ಗೆ ಅಭಿಮಾನಿಗಳಿಗೆ ಸದಾ ಕೆಟ್ಟ ಕುತೂಹವಿರುತ್ತದೆ. ಅಷ್ಟೇ ಏಕೆ ಇದನ್ನು ಸಮಯ ಸಿಕ್ಕಾಗಲೆಲ್ಲ ಪ್ರದರ್ಶಿಸೋಕೆ ಅಭಿಮಾನಿಗಳು ಸಿದ್ಧವಾಗಿರುತ್ತಾರೆ. ಬಹುಭಾಷಾ ನಟಿ ಶೃತಿ ಹಾಸನ್ ಗೆ ಇಂತಹುದೇ ಕುತೂಹಲಕಾರಿ ಪ್ರಶ್ನೆಯೊಂದನ್ನು ಅಭಿಮಾನಿ ಕೇಳಿದ್ದಾನೆ. ತೀರಾ ವೈಯಕ್ತಿಕವಾದ ಪ್ರಶ್ನೆ ಕೇಳಿದ ಫ್ಯಾನ್ ಗೆ ಶೃತಿ ಹಾಸನ್ (Shruti Haasan) ಅಷ್ಟೇ ಖಡಕ್ ಉತ್ತರ ಕೂಡ ನೀಡಿದ್ದಾರೆ.

ಬಹುಭಾಷಾ ನಟ ಕಮಲ್ ಹಾಸನ್ ಅವರ ಟ್ಯಾಲೆಂಟೆಡ್ ಪುತ್ರಿ ಶೃತಿ ಹಾಸನ್, ನಟನೆ ಮಾತ್ರವಲ್ಲ ಬಹುಮುಖ ಪ್ರತಿಭೆ. ಮ್ಯೂಸಿಕ್, ಮಾಡೆಲಿಂಗ್, ನಟನೆ ಹಾಗೂ ಡ್ಯಾನ್ಸ್ ಮೂಲಕವೂ ಪ್ರಸಿದ್ಧಿಗೆ ಬಂದಿರೋ ಶೃತಿಗೆ ಕೈ ತುಂಬಾ ಸಿನಿಮಾ ಹಾಗೂ ಇಂಡಸ್ಟ್ರಿ ಯಲ್ಲಿ ಒಳ್ಳೆಯ ಬೇಡಿಕೆ ಇದೆ. ಈ ಮಧ್ಯೆಯೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಶೃತಿ ಆಗಾಗ ಫ್ಯಾನ್ಸ್ ಕೇಳೋ ಪ್ರಶ್ನೆಗಳಿಗೂ ಉತ್ತರಿಸಿ ಅಭಿಮಾನಿಗಳ ಖುಷಿಗೆ ಕಾರಣವಾಗುತ್ತಾರೆ.

ಆದರೆ ಈ ಭಾರಿ ಫ್ಯಾನ್ ಕೇಳಿದ ವೈಯಕ್ತಿಕ ಪ್ರಶ್ನೆಯೊಂದಕ್ಕೆ ನಟಿ ಶೃತಿ ಮುಖಕ್ಕೆ ಹೊಡೆದಂತೆ ಉತ್ತರ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ನಿಮಗೆ ಇದುವರೆಗೂ ಎಷ್ಟು ಬ್ರೇಕ್ ಅಪ್ ಆಗಿದೆ ಎಂದು ಅಭಿಮಾನಿಯೊಬ್ಬ ಪ್ರಶ್ನಿಸಿದ್ದಾನೆ. ಈ ಪ್ರಶ್ನೆ ಯಿಂದ ಕೊಂಚ ಇರಿಸುಮುರಿಸು ಅನುಭವಿಸಿದ ಶೃತಿ ಹಾಸನ್ ಪ್ರಶ್ನೆ ಕೇಳಿದ ಅಭಿಮಾನಿಗೆ ನಿಮಗೆ ಎಷ್ಟು ಗರ್ಲ್ ಪ್ರೆಂಡ್ಸ್ ಇದ್ದಾರೆ? ನನಗನ್ನಿಸುತ್ತೆ ಝೀರೋ ಅಥವಾ ಅರ್ಧ ಎಂದು ಕಿಚಾಯಿಸಿದ್ದಾರೆ. ತಮ್ಮ ಬೋಲ್ಡ್ ಪೋಟೋಶೂಟ್ ಹಾಗೂ ಬೋಲ್ಡ್ ನಡೆಯಿಂದಲೇ ಹೆಸರು ಗಳಿಸಿದ ಶೃತಿ ಈ ಹಿಂದೆ ಮೈಕಲ್ ಕೋರ್ಸಲೆ ಜೊತೆ ಡೇಟಿಂಗ್ ನಲ್ಲಿದ್ದ ಶೃತಿ ಬಳಿಕ ಬ್ರೇಕಪ್ ಘೋಷಿಸಿದ್ದರು.

ಈಗ ಶಂತನು ಹಜಾರಿಕಾ ಜೊತೆ ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಸಂಬಂಧದ ಬಗ್ಗೆ ಮುಕ್ತವಾಗಿ ಎಲ್ಲೂ ಹೇಳಿಕೊಂಡಿಲ್ಲ. ಇತ್ತೀಚಿಗೆ ಮಂದಿರಾ ಬೇಡಿ ಟಾಕ್ ಶೋನಲ್ಲಿ ಮಾತನಾಡಿದ್ದ ಶೃತಿ, ನಾನು ನಿರ್ದಿಷ್ಟ ಸಮಯದವರೆಗೆ ಒಂಟಿಯಾಗಿರಲು ಬಯಸುತ್ತೇನೆ ಎಂದಿದ್ದರು. ಕೊನೆಯದಾಗಿ ವಕೀಲ್‌ಸಾಬ್ ಸಿನಿಮಾದಲ್ಲಿ ಕಾಣಿಸಿಕೊಂಡಿರೋ ಶೃತಿ, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟನೆಯ ಸಲಾರ್ ನಲ್ಲಿ ನಾಯಕಿಯಾಗಿ‌ ಮಿಂಚಿದ್ದಾರೆ. ಈ ಚಿತ್ರ 2022 ರ ಏಪ್ರಿಲ್ ನಲ್ಲಿ ರಿಲೀಸ್ ಗೆ ಸಿದ್ಧವಾಗಿದೆ.

ಇದನ್ನೂ ಓದಿ : ಪತಿ ರಣವೀರ್​ ಸಿಂಗ್​​ ಉಡುಪನ್ನು ಮೈಕ್​ಗೆ ಹೋಲಿಸಿದ ದೀಪಿಕಾ ಪಡುಕೋಣೆ

ಇದನ್ನೂ ಓದಿ : ಸಿಂಗಲ್ ರಶ್ಮಿಕಾ ಮಿಂಗಲ್ ಆದ್ರು : ಗೋವಾದಲ್ಲಿ ನ್ಯಾಶನಲ್ ಕ್ರಶ್ ಜೊತೆಗಿದ್ದವರ್ಯಾರು ಗೊತ್ತಾ?

(how many break-up for you so far: Shruti Haasan answer to the fan question is known)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular