Corona vaccine campaign : ಇಂದಿನಿಂದ 15- 18 ವಯಸ್ಸಿನ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ: ಲಸಿಕೆ ಪಡೆದ ಮಕ್ಕಳಿಗೆ ರಜೆ

ಬೆಂಗಳೂರು : ದೇಶದಾದ್ಯಂತ ಇಂದಿನಿಂದ ಮಕ್ಕಳಿಗೆ ( 15- 18 ವರ್ಷ) ಲಸಿಕೆ ಅಭಿಯಾನ ನಡೆಯಲಿದೆ. ರಾಜ್ಯದಲ್ಲಿಯೂ ಮಕ್ಕಳಿಗೆ ಕೊರೊನಾ ಲಸಿಕೆಯನ್ನು ನೀಡಲಾಗುತ್ತದೆ. ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಬೆಂಗಳೂರಿನ ಮೂಡಲಪಾಳ್ಯದ ಬಿಬಿಎಂಪಿ ಶಾಲೆಯಲ್ಲಿ ಕೊರೊನಾ ಲಸಿಕೆ ಅಭಿಯಾನಕ್ಕೆ ( Corona vaccine campaign ) ಚಾಲನೆ ನೀಡಲಿದ್ದಾರೆ. ಲಸಿಕೆ ಪಡೆದ ಮಕ್ಕಳಿಗೆ ಒಂದು ದಿನದ ರಜೆಯನ್ನು ನೀಡಲು ರಾಜ್ಯ ಸರಕಾರ ತೀರ್ಮಾನಿಸಿದೆ.

ಕರ್ನಾಟಕದಲ್ಲಿ 15 ರಿಂದ 18 ವರ್ಷ ವಯೋಮಿತಿಯ ಸುಮಾರು 31.75 ಲಕ್ಷ ಮಕ್ಕಳಿದ್ದು, ಎಲ್ಲರೂ ಕೂಡ ಕೊರೊನಾ ಲಸಿಕೆ ಪಡೆಯಲು ಅರ್ಹತೆ ಪಡೆದಿದ್ದಾರೆ. ರಾಜ್ಯದಲ್ಲಿ ಸದ್ಯ 16 ವರ್ಷ ಕೋವ್ಯಾಕ್ಸಿನ್‌ ಡೋಸ್‌ ಲಭ್ಯವಿದೆ. ಲಸಿಕೆ ಅಭಿಯಾನದ ಮೊದಲ ದಿನ ಸುಮಾರು ೬ ಲಕ್ಷ ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆಯನ್ನು ನೀಡಲು ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಿದ್ದತೆ ಮಾಡಿಕೊಂಡಿದೆ. ರಾಜ್ಯದಲ್ಲಿನ ಶಾಲೆ ಹಾಗೂ ಕಾಲೇಜು ಮಟ್ಟದಲ್ಲಿ ಲಸಿಕೆ ಅಭಿಯಾನ ನಡೆಯಲಿದೆ ಎಂದು ರಾಜ್ಯ ಸರಕಾರ ಹೇಳಿದೆ.

ರಾಜ್ಯದಲ್ಲಿನ ಪ್ರತೀ ಶಾಲೆಯಲ್ಲಿಯೂ ವಿದ್ಯಾರ್ಥಿಗಳಿಗೆ ಲಸಿಕೆಯನ್ನು ನೀಡಲಾಗುತ್ತದೆ. ಮೊದಲ ದಿನ 50 ವಿದ್ಯಾರ್ಥಿಗಳಿಗೆ ಮಾತ್ರವೇ ಲಸಿಕೆ ನೀಡಲು ಪ್ಲ್ಯಾನ್‌ ಮಾಡಿಕೊಳ್ಳಲಾಗಿದೆ. ಕೊರೊನಾ ಲಸಿಕೆ ನೀಡುವ ವೇಳೆಯಲ್ಲಿ ಶಾಲೆಯ ಬಳಿಯಲ್ಲಿ ಅಂಬ್ಯುಲೆನ್ಸ್‌ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಒಂದೊಮ್ಮೆ ಅನಾರೋಗ್ಯ ಸಮಸ್ಯೆ ಕಂಡು ಬಂದ್ರೆ ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಲಸಿಕೆ ಹಾಕಿಸಿಕೊಂಡ ಮಕ್ಕಳು ಒಂದು ದಿನಗಳ ಕಾಲ ರಜೆಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ : ಕರ್ನಾಟಕದಲ್ಲಿ ಆರ್ಭಟಿಸಿದ ಕೊರೊನಾ : ಶಿಕ್ಷಣ ಸಚಿವರಿಗೆ ಸೋಂಕು : ಮತ್ತೆ ಶಾಲೆಗಳು ಬಂದ್‌ !

ಮಕ್ಕಳಿಗೆ ಕೊರೊನಾ ಲಸಿಕೆಯನ್ನು ನೀಡುವ ಮೊದಲು ಪೋಷಕರಿಗೆ ಮಾಹಿತಿ ನೀಡುವಂತೆ ಸರಕಾರ ಹೇಳಿದೆ. ಈ ಹಿನ್ನೆಲೆಯಲ್ಲಿಂದು ಪ್ರತೀ ಶಾಲೆಯಲ್ಲಿಯೂ ಪೋಷಕರ ಸಭೆ ನಡೆಯಲಿದೆ. ಮಕ್ಕಳು ಲಸಿಕೆಯನ್ನು ಪಡೆಯಲು ನೋಂದಣಿ ಮಾಡಿಸುವುದು ಕಡ್ಡಾಯವಲ್ಲ, ಐಡಿ ಕಾರ್ಡ್‌ ತೋರಿಸಿ ಸ್ಥಳದಲ್ಲಿಯೇ ಲಸಿಕೆಯನ್ನು ಹಾಕಿಸಿಕೊಳ್ಳಬಹುದಾಗಿದೆ ಎಂದು ಬೆಂಗಳೂರು ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್‌ ಅವರು ತಿಳಿಸಿದ್ದಾರೆ.

ಮಕ್ಕಳು ಲಸಿಕೆ ಪಡೆಯುವ ವಿಚಾರದಲ್ಲಿ ಯಾರಿಗೂ ಒತ್ತಾಯ ಹೇರುವುದಿಲ್ಲ. ಆದರೆ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆಯುವುದು ಉತ್ತಮ. ಕೇಂದ್ರ ಸರಕಾರದ ಮಾರ್ಗಸೂಚಿಯ ಪ್ರಕಾರವೇ ಕೊರೊನಾ ಲಸಿಕೆಯನ್ನು ನೀಡಲಾಗುತ್ತಿದೆ. ಅಲ್ಲದೇ ಪೋಷಕರು ಲಸಿಕೆಯ ವಿಚಾರದಲ್ಲಿ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಶಾಲೆ, ಕಾಲೇಜಿಗೆ ತೆರಳುವ ಮಕ್ಕಳು ಲಸಿಕೆ ಪಡೆಯುವುದರಿಂದ ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಲಸಿಕೆ ಸಹಕಾರಿಯಾಗಲಿದೆ.

ಇದನ್ನೂ ಓದಿ : ಪ್ರಥಮ ಪಿಯುಸಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣ : ರಾಜ್ಯ ಸರಕಾರ ಮಹತ್ವದ ಆದೇಶ

ಇದನ್ನೂ ಓದಿ : ಕರ್ನಾಟಕದಲ್ಲಿ ಕಂಟ್ರೋಲ್‌ ತಪ್ಪಿದ ಕರೋನಾ : ದೆಹಲಿ ಮಾದರಿ‌ ಕ್ರಮಕ್ಕೆ ತಜ್ಞರ ಶಿಫಾರಸ್ಸು

(Corona vaccine campaign from today, 15 18 age group 31 lakh children eligible, grant leave to the children who received the vaccine)

Comments are closed.