ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಹಾಗೂ ವಿಶ್ವದಾದ್ಯಂತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಅಭಿನಯದ ಕೊನೆಯ ಚಿತ್ರ ಜೇಮ್ಸ್ (James) ತೆರೆ ಕಂಡಿದೆ. ಅಪ್ಪು ಅಭಿಮಾನಿಗಳು ಕಣ್ಣೀರಿಡುತ್ತಲೇ ತಮ್ಮ ನೆಚ್ಚಿನ ನಟನ ಕೊನೆಯ ಅಭಿನಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಅಪ್ಪು ಹುಟ್ಟುಹಬ್ಬ ವೂ (Puneeth Rajkumar Birthday) ಅಷ್ಟೇ ಅದ್ದೂರಿಯಾಗಿ ನಡೆದಿದ್ದು, ಅನ್ನದಾನ, ರಕ್ತದಾನ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳು ಅಪ್ಪು ಹೆಸರಿನಲ್ಲಿ ನಡೆದಿವೆ. ಇವೆಲ್ಲವನ್ನು ಕಂಡು ಮನಸ್ಸು ಆರ್ದಗೊಂಡಿದೆ ಎಂದಿರುವ ಆಶ್ವಿನಿ ನಾನಿನ್ನು ಈ ಸಂಭ್ರಮ ಸ್ವೀಕರಿಸುವ ಸ್ಥಿತಿಯಲ್ಲಿಲ್ಲ ಎಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಭಾವುಕರಾಗಿ ತಮ್ಮ ನೋವನ್ನು ಬಿಚ್ಚಿಟ್ಟಿರುವ ಅಶ್ವಿನಿ ಪುನೀತ್, ಅಪ್ಪು ಅಗಲಿಕೆ ನೋವು ನಮ್ಮ ಕುಟುಂಬದ ಪಾಲಿಗೆ ಎಂದೂ ಮುಗಿಯದ ಸಂಕಟ.ಅವರ ಭಿನ್ನವಾದ ಆಲೋಚನೆಗಳು,ತಾಳ್ಮೆ,ಭಿನ್ನವಾದ ನಡೆ,ವಿನಮ್ರವಾದ ವ್ಯಕ್ತಿತ್ವದಿಂದ ಕಲಿಯುವುದು ಇನ್ನು ಸಾಕಷ್ಟಿದೆ . ಅವರ ವೈಯಕ್ತಿಕ ಹಾಗೂ ಸಾರ್ವಜನಿಕ ಬದುಕು ಎರಡು ಆದರ್ಶಮಯವಾಗಿತ್ತು. ಇನ್ನೂ ಸಾಕಷ್ಟು ವಿಚಾರಗಳು ಇವೆ ಅವೆಲ್ಲವನ್ನೂ ನಾನು ನನ್ನೊಳಗೆ ಇಟ್ಟುಕೊಂಡಿದ್ದೇನೆ ಎಂದಿದ್ದಾರೆ.

ಮಾತ್ರವಲ್ಲ ಅಪ್ಪು ಬಗೆಗಿನ ಅಭಿಮಾನಿಗಳ ಮುಗಿಯದ ಅಭಿಮಾನದ ಬಗ್ಗೆ ಮಾತನಾಡಿರುವ ಆಶ್ವಿನಿ ಪುನೀತ್ (Ashwini Puneeth Rajkumar), ನಮ್ಮ ದುಃಖದಲ್ಲಿ ನಾಡಿಗೇ ನಾಡೇ ಭಾಗಿಯಾಯಿತು.ಅಪ್ಪು ಮೇಲೆ ನೀವೆಲ್ಲರೂ ಇಟ್ಟಿದ್ದ ಅಭಿಮಾನವನ್ನು ನೋಡುವಾಗ ಕಣ್ತುಂಬಿ ಬರುತ್ತದೆ. ಅಭಿಮಾನಿಗಳನ್ನು ಮೇರೆ ಮೀರಿದ ಅಭಿಮಾನ.ಅಪ್ಪು ಅವರ ಆದರ್ಶವನ್ನು ನೀವೆಲ್ಲರೂ ಮನಃಪೂರ್ವಕವಾಗಿ ಆಚರಿಸಿದ್ದನ್ನು ನೋಡಿ ನಾನು ಅಚ್ಚರಿಗೊಂಡಿದ್ದೇನೆ. ಅನ್ನದಾನ, ರಕ್ತದಾನ, ವಸ್ತ್ರದಾನ, ನೇತ್ರದಾನ ಒಂದಾ ಎರಡಾ ಇವೆಲ್ಲವನ್ನೂ ನೋಡಿ ನಾನು ಮೂಕವಾಗಿದ್ದೇನೆ ಎಂದು ಆಶ್ವಿನಿ ತನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಆದರೇ ನಾನು ಇನ್ನೂ ಪುನೀತ್ ಅಗಲಿಕೆಯ ಶಾಕ್ ನಿಂದ ಹೊರಕ್ಕೆ ಬಂದಿಲ್ಲ. ಹೀಗಾಗಿ ಈ ಆಚರಣೆಗಳ ನ್ನು ಸ್ವೀಕರಿಸಲಾಗುತ್ತಿಲ್ಲ.ನಾನು ಪುನೀತ್ ಕನಸುಗಳನ್ನು ನನಸು ಮಾಡುವ ಗುರಿಯಲ್ಲಿ ಸಾಗುತ್ತಿದ್ದೇನೆ. ಎಲ್ಲ ವಿಭಾಗದಲ್ಲೂ ಹೊಸಬರಿಗೆ ಅವಕಾಶ ನೀಡುವುದು ಪುನೀತ್ ಕನಸಾಗಿತ್ತು. ಆ ಕನಸನ್ನುಈಡೇರಿಸಲು ಪಿಆರ್ ಕೆ ಸ್ಟುಡಿಯೋ ಹಾಗೂ ಪ್ರೊಡಕ್ಷನ್ ಹೌಸ್ ಕಟಿ ಬದ್ಧವಾಗಿದೆ. ಮುಂದಿನ ಏಪ್ರಿಲ್ ನಲ್ಲಿ ಯುವ ಮಹಿಳಾ ನಿರ್ದೇಶಕಿಯೊಬ್ಬರ ಆಚಾರ್ ಎನ್ ಕೋ ಸಿನಿಮಾ ನಮ್ಮ ಪ್ರೊಡಕ್ಷನ್ ಹೌಸ್ ನಿಂದ ನಿರ್ಮಾಣವಾಗಲಿದೆ. ಮತ್ತಷ್ಟು ಹೊಸ ಹೊಸ ಕತೆ ಕೇಳುತ್ತಿದ್ದೇನೆ. ಸರಿಯೆನಿಸಿದ ಚಿತ್ರಗಳನ್ನು ನಿರ್ಮಿಸಿ ಹೊಸಬರಿಗೆ ಅವಕಾಶ ನೀಡುತ್ತೇನೆ ಎಂದು ಅಶ್ವಿನಿಹೇಳಿದ್ದಾರೆ.

ಮಾತ್ರವಲ್ಲ ತಮಗೆ ಚಿತ್ರರಂಗ ಹೊಸದಲ್ಲ.ಆದರೆ ಮುನ್ನಲೆಗೆ ಬರದೇ ಹಿನ್ನಲೆಯಲ್ಲಿ ಇದ್ದೆ. 2016 ರಿಂದಲೇ ಪಿಅರ್ರ್ಕೆ ಪ್ರೊಡಕ್ಷನ್ ಕೆಲಸ ಆರಂಭವಾಗಿದೆ. ಅಂದಿನಿಂದಲೂ ಸಕ್ರಿಯ ವಾಗಿದ್ದೇನೆ. ಮಕ್ಕಳು ಸಿನಿಮಾ ಕ್ಷೇತ್ರದತ್ತ ಆಕರ್ಷಿತರಾಗಿಲ್ಲ. ದೊಡ್ಡವಳು ಕಲಾಮಾಧ್ಯಮದಲ್ಲಿ ಅಧ್ಯಯನ ಮಾಡುತ್ತಿದ್ದಾಳೆ. ಚಿಕ್ಕವಳು ಇನ್ನೂ ಸ್ಕೂಲ್ ನಲ್ಲಿ ಓದುತ್ತಿದ್ದಾರೆ. ಎಲ್ಲರೂ ಜೇಮ್ಸ್ ಹೊಗಳುತ್ತಿದ್ದಾರೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ ಎನ್ನುತ್ತಿದ್ದಾರೆ. ಆದರೆ ನನ್ನಿಂದ ಈಗ ಸಿನಿಮಾ ನೋಡಲು ಸಾಧ್ಯವಿಲ್ಲ ಎಂದು ಅಶ್ವಿನಿ ನೊಂದು ಕೊಂಡಿದ್ದಾರೆ.
ಇದನ್ನೂ ಓದಿ : RRR ಸಿನಿಮಾಗಿರೋ ಬೆಲೆ ಪುನೀತ್ ಗಿಲ್ವಾ ? ಸರಕಾರದ ವಿರುದ್ದ ಅಪ್ಪು ಫ್ಯಾನ್ಸ್ ಗರಂ
ಇದನ್ನೂ ಓದಿ : ನವಜಾತ ಶಿಶುಗಳಿಗೆ ಪುನೀತ್ ಹೆಸರು : ವಿಭಿನ್ನವಾಗಿ ನಗರದಲ್ಲಿ ಅಪ್ಪು ಬರ್ತಡೇ ಆಚರಣೆ
(I can’t watch James cinema Ashwini Puneeth Rajkumar)