Reliance Jio 28 ದಿನಗಳ ಹೊಸ ಪ್ರೀಪೇಡ್‌ ಪ್ಲಾನ್‌!

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಇಲ್ಲದವರು ಯಾರಿದ್ದಾರೆ? ನಮ್ಮ ಪ್ರೀತಿ ಪಾತ್ರರನ್ನು ಅತ್ಯಂತ ಸುಲಭವಾಗಿ ಸಂಪರ್ಕಿಸಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ಇದಕ್ಕೆ ಧನ್ಯವಾದ ಹೇಳಲೇಬೇಕು. ಈಗಂತೂ ಅತೀ ಕಡಿಮೆ ಸಮಯದಲ್ಲಿ ಯಾರನ್ನುಬೇಕಾದರೂ ಸುಲಭವಾಗಿ ತಲುಪಲು ಸಹಾಯಮಾಡುವುದೇ ಈ ಟೆಲಿಕಾಂ ಸರ್ವಿಸ್‌ಗಳು(Reliance Jio). ಆದರೆ ಈ ಟೆಲಿಕಾಂ ಸರ್ವೀಸ್‌ಗಳನ್ನು ಉಪಯೋಗಿಸಲು ಬಳಕೆದಾರರು ತಮ್ಮ ಮೊಬೈಲ್‌ ನಂಬರ್‌ ರಿಚಾರ್ಜ್‌ ಮಾಡಲೇಬೇಕು. ಇದಕ್ಕಾಗಿ ಭಾರತದಲ್ಲಿ ಹಲವಾರು ಟೆಲಿಕಾಂ ಸರ್ವೀಸ್‌ಗಳು ಪ್ರೀಪೇಡ್‌ ರಿಚಾರ್ಜ್‌ ಪ್ಲಾನ್‌ಗಳನ್ನು ನೀಡಿವೆ. ಅದರಲ್ಲಿ 28 ದಿನಗಳ ಪ್ಲಾನ್‌ ಅತ್ಯಂತ ಜನಪ್ರಿಯ ಪ್ಲಾನ್‌ ಆಗಿದೆ. ಈ ಪ್ಲಾನ್‌ಗಳು ಸುಲಭವಾಗಿ ಕೈಗೆಟಕುವದರಿಂದ ಇದರ ಬಗ್ಗೆ ಒಲವು ಹೆಚ್ಚು.

Reliance Jio ಭಾರತದ ಅತಿ ದೊಡ್ದ ಟೆಲಿಕಾಂ ಸರ್ವೀಸ್‌ ಪೂರೈಕೆದಾರರು 28 ದಿನಗಳ ವ್ಯಾಲಿಡಿಟಿ ಇರುವ ಹೊಸ ಪ್ರೀಪೇಡ್‌ ಪ್ಲಾನ್‌ ಪರಿಚಯಿಸಿದೆ. ಈ ಪ್ಲಾನ್‌ನ ಅತಿ ಕಡಿಮೆ ದರವು 239 ರೂಪಾಯಿಗಳಾದರೆ ಅತಿ ಹೆಚ್ಚು 601 ರೂಪಾಯಿಗಳು. ಈ ಎಲ್ಲಾ ಪ್ರೀಪೇಡ್‌ ರಿಚಾರ್ಜ್‌ ಪ್ಲಾನ್‌ಗಳು ಬಳಕೆದಾರರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತಿದೆ. ಹಾಗಾದರೆ, 28 ದಿನಗಳ ವ್ಯಾಲಿಡಿಟಿಯಿರುವ Jio ನ ಹೊಸ ಪ್ರೀಪೇಡ್‌ ಪ್ಲಾನ್‌ಗಳಲ್ಲಿ ಏನೆಲ್ಲಾ ಇದೆ ಎಂದು ನೀವೇ ನೋಡಿ.

Jio 299 ರೂ. ಪ್ಲಾನ್‌ :
ಈ ಪ್ಲಾನ್‌ ಪ್ರತಿದಿನ 2ಜಿಬಿ ಡಾಟಾದ ಜೊತೆಗೆ ಅನ್‌ಲಿಮಿಟೆಡ್‌ ಫೋನ್‌ ಕಾಲ್‌ ಮತ್ತು 100 SMS ಗಳನ್ನು 28 ದಿನಗಳವರೆಗೆ ನೀಡಿದೆ. ಒಂದುವೇಳೆ ನಿಮಗೆ ಇದಕ್ಕಿಂತಲೂ ಕಡಿಮೆ ಬೆಲೆಯ ಪ್ಲಾನ್‌ ಬೇಕೆಂದರೆ 239 ರೂ. ಮತ್ತು 209 ರೂ. ಪ್ಲಾನ್‌ಗೆ ಹೋಗಬಹುದು.

Jio 239 ರೂ. ಪ್ಲಾನ್‌:
28 ದಿನಗಳ ವ್ಯಾಲಿಡಿಟಿಯಿರುವ ಈ ಪ್ಲಾನ್‌ 1.5 ಜಿಬಿ ಡಾಟಾವನ್ನು ಪ್ರತಿದಿನ ನೀಡಿದೆ. ಅದರ ಜೊತೆಗೆ ಅನ್‌ಲಿಮಿಟೆಡ್‌ ಫೋನ್‌ ಕಾಲ್‌ ಮತ್ತು 100 SMSಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

Jio 209 ರೂ. ಪ್ಲಾನ್‌:
Jio ತನ್ನ ಬಳಕೆದಾರರಿಗೆ ಅತ್ಯಂತ ಕಡಿಮೆ ಬೆಲೆಯ 209ರೂ.ಗಳ ಪ್ಲಾನ್‌ ನೀಡಿದೆ. ಇದು ದಿನಕ್ಕೆ 1ಜಿಬಿ ಡಾಟಾ ಅನ್‌ಲಿಮಿಟೆಡ್‌ ಫೋನ್‌ಕಾಲ್‌ ಮತ್ತು 100 SMS ಸಹ ನೀಡಿದೆ.

ಇದನ್ನೂ ಓದಿ: PAN Aadhar ಅನ್ನು ಮಾರ್ಚ್‌ 31ರ ಒಳಗೆ ಲಿಂಕ್‌ ಮಾಡಿ!

ನೀವು ದಿನವೊಂದಕ್ಕೆ ಹೆಚ್ಚು ಡಾಟಾ ಬಳಸುತ್ತಿದ್ದರೆ, ಅದಕ್ಕೆಂದೇ Jio 419 ರೂ. ಮತ್ತು 601 ರೂ. ಪ್ಲಾನ್‌ ಪರಿಚಯಿಸಿದೆ.

Jio 419 ರೂ. ಪ್ಲಾನ್‌:
ಇದೂ ಸಹ 28 ದಿನಗಳ ವ್ಯಾಲಿಡಿಟಿಯನ್ನೇ ಹೊಂದಿದೆ. ಈ ದಿನವೊಂದಕ್ಕೆ 3 ಜಿಬಿ ಡಾಟಾ, ಅನ್‌ಲಿಮಿಟೆಡ್‌ ಫೋನ್‌ ಕಾಲ್‌ ಮತ್ತು 100 SMS ನೀಡುತ್ತದೆ. ಒಂದುವೇಳೆ ನಿಮಗೆ OTT ಮತ್ತು ಡೇಟಾ ಪ್ರಯೋಜನ ಪಡೆಯಬೇಕೆಂದಿದ್ದರೆ ಆಗ ನೀವು 601 ರೂ.ಗಳ ಪ್ಲಾನ್‌ಗೆ ಹೋಗಬಹುದು.

Jio 601 ರೂ. ಪ್ಲಾನ್‌:
ಈ ಪ್ಲಾನ್‌ ದಿನವೊಂದಕ್ಕೆ 3ಜಿಬಿಗಳ ಡಾಟಾದ ಜೊತೆಗೆ ಎಲ್ಲಾನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್‌ ಫೋನ್‌ ಕಾಲ್‌ಗಳು ಮತ್ತು 100 SMS ನೀಡಿದೆ. ಇದರ ಜೊತೆಗೆ 6 ಜಿಬಿಗಳ ಡಾಟಾ ಮತ್ತು 1 ವರ್ಷದವರೆಗೆ ಡಿಸ್ನಿ+ಹೊಟ್‌ಸ್ಟಾರ್‌ನ ಮೊಬೈಲ್‌ ಸಬ್ಸ್‌ಕ್ರಿಪ್ಷನ್‌ ಅನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಬಳಕೆದಾರರಿಗೆ ನೀಡಿದೆ.

ಇದನ್ನೂ ಓದಿ: Maggi Price Hike: ಮ್ಯಾಗಿ ಬೆಲೆ ಏರಿಕೆ; ಇನ್ನೂ ಯಾವೆಲ್ಲ ತಿಂಡಿ ತಿನಿಸಿನ ಬೆಲೆ ಏರಿಕೆಯಾಗಿದೆ?

(Reliance Jio recharge Prepaid plans with 28 days validity)

Comments are closed.