ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಸಿನಿಮಾ ಇಂಡಸ್ಟ್ರಿ ಸಂಪೂರ್ಣ ನೆಲಕಚ್ಚಿತ್ತು. ಆದರೆ ಇದೀಗ ಕೊಂಚ ಸುಧಾರಿಸಿರುವ ಬೆಳ್ಳಿ ತೆರೆ ಹಾಗೂ ಕಿರುತೆರೆ ಸಾಲು ಸಾಲು ಯಶಸ್ವಿ ಸಿನಿಮಾ ಹಾಗೂ ಕಾರ್ಯಕ್ರಮಗಳನ್ನು ವೀಕ್ಷಕರಿಗಾಗಿ ನೀಡುತ್ತಿವೆ. ಸಿನಿಮಾ ಇಂಡಸ್ಟ್ರಿ , ಒಟಿಟಿ ವೇದಿಕೆಗಳ ಬಗ್ಗೆ ಅಧಿಕೃತ ಮಾಹಿತಿಗಳನ್ನು ನೀಡುವ ಪ್ರಸಿದ್ಧ ಐಎಂಡಿಬಿ ಭಾರತದಲ್ಲಿ ಅತೀ ಹೆಚ್ಚು ಜನಪ್ರಿಯವಾದ ಟಾಪ್ 10 ಸಿನಿಮಾಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. (IMDb Top 10 Indian Films of 2021)
ಜನವರಿ 1ರಿಂದ ನವೆಂಬರ್ 29ರವರೆಗೆ ರಿಲೀಸ್ ಆದ ಸಿನಿಮಾಗಳನ್ನು ಗಣನೆಗೆ ತೆಗೆದುಕೊಂಡು ಈ ರ್ಯಾಕಿಂಗ್ ನೀಡಲಾಗಿದೆ. ಈ ಪಟ್ಟಿಯಲ್ಲಿ ನಟ ಸೂರ್ಯ ನಟನೆ ಹಾಗೂ ಹೋಂ ಬ್ಯಾನರ್ನ ಜೈ ಭೀಮ್ ಸಿನಿಮಾ ಮೊದಲ ಸ್ಥಾನ ಪಡೆದುಕೊಂಡಿದೆ. ದಲಿತರ ಪರವಾಗಿ ಧ್ವನಿ ಎತ್ತುವ ಈ ಸಿನಿಮಾ ಈಗಾಗಲೇ ಸಾಕಷ್ಟು ಬಾರಿ ಚರ್ಚಾ ವಿಷಯ ಕೂಡ ಆಗಿದೆ. ಇತ್ತ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಶೇರ್ ಷಾ ಸಿನಿಮಾ 2ನೇ ಸ್ಥಾನ ಪಡೆದುಕೊಂಡಿದೆ.
ಐಎಂಡಿಬಿ 2021ನೇ ಸಾಲಿನ ಟಾಪ್ 10 ಭಾರತೀಯ ಸಿನಿಮಾಗಳು:
ಜೈ ಭೀಮ್
ಶೇರ್ಷಾ
ಸೂರ್ಯವಂಶಿ
ಮಾಸ್ಟರ್
ಸರ್ದಾರ್ ಉದ್ಧಮ್
ಮಿಮಿ
ಕರ್ಣನ್
ಶಿದ್ಧತ್
ದೃಶ್ಯಂ 2
ಹಸೀನ್ ದಿಲ್ರುಬಾ
ಕೋವಿಡ್ ಸಂದರ್ಭದಲ್ಲಿ ಚಿತ್ರಮಂದಿರಗಳು ಬಾಗಿಲು ಹಾಕಿದಾಗಿನಿಂದ ಜನರು ಒಟಿಟಿ ವೇದಿಕೆಗಳತ್ತ ಹೆಚ್ಚೆಚ್ಚು ಮುಖ ಮಾಡಿದ್ದಾರೆ. ಒಟಿಟಿ ವೇದಿಕೆಗಳಲ್ಲೇ ತೆರೆ ಕಾಣುವ ವೆಬ್ಸಿರೀಸ್ಗಳಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಐಎಂಡಿಬಿ ಟಾಪ್ 10 ಇಂಡಿಯನ್ ವೆಬ್ ಸಿರೀಸ್ಗಳನ್ನೂ ಬಿಡುಗಡೆ ಮಾಡಿದ್ದು ಇದರಲ್ಲಿ ಆಸ್ಟಿರಂಟ್ಸ್ ಮೊದಲ ಸ್ಥಾನವನ್ನು ಪಡೆದಿದ್ದರೆ ಧಿಂಡೋರಾ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ಐಎಂಡಿಬಿಯ 2021ನೇ ಟಾಪ್ 10 ಇಂಡಿಯನ್ ವೆಬ್ ಸಿರೀಸ್
ಆಸ್ಪಿರಂಟ್ಸ್
ಧಿಂಡೋರಾ
ದಿ ಫ್ಯಾಮಿಲಿ ಮ್ಯಾನ್
ದಿ ಲಾಸ್ಟ್ ಅವರ್
ಸನ್ಫ್ಲವರ್
ಕ್ಯಾಂಡಿ
ರೇ
ಗ್ರಹಣ್
ನವೆಂಬರ್ ಸ್ಟೋರಿ
ಮುಂಬೈ ಡೈರೀಸ್ 26/11
ಇದನ್ನು ಓದಿ : Vaibhavi Shandilya : ಮಾರ್ಟಿನ್ ನಲ್ಲಿ ಮಾದಕ ಬೆಡಗಿ : ಧ್ರುವ ಸರ್ಜಾಗೆ ಜೊತೆಯಾಗ್ತಾರೆ ವೈಭವಿ ಶಾಂಡಿಲ್ಯ
ಇದನ್ನೂ ಓದಿ : Samantha Ruth Prabhu Pushpa : ಪುಷ್ಪ ಸಿನಿಮಾ ರಂಗೇರಿಸಿದ ಸಮಂತಾ: ಐಟಂ ಸಾಂಗ್ ಲುಕ್ ಗೆ ಫ್ಯಾನ್ಸ್ ಫಿದಾ
ಇದನ್ನೂ ಓದಿ : ಕೆಂಪಾಯ್ತು ಮದಗಜ ಸುಂದರಿ ಬೆನ್ನು: ಪೋಟೋ ಹಂಚಿಕೊಂಡ ಅಶಿಕಾ ಹೇಳಿದ್ದೇನು ಗೊತ್ತಾ?!
ಇದನ್ನೂ ಓದಿ : Katrina Kaif Vicky Kaushal Marriage : ಸೀಕ್ರೆಟ್ ಆಗಿ ಮದುವೆಯಾದ್ರು ಕತ್ರಿನಾ ಕೈಫ್ – ವಿಕ್ಕಿ ಕೌಶಲ್
IMDb Top 10 Indian Films of 2021: Jai Bhim, Shershaah, Sooryavanshi Rank Highest, Aspirants Top Web Series