Elon Musk : ಕೆಲಸ ಬಿಡಲಿದ್ದಾರಂತೆ ಟೆಸ್ಲಾ ಸಿಇಒ ಎಲಾನ್ ಮಸ್ಕ್!

ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ( Tesla and SpaceX CEO Elon Musk ) ಟ್ವಿಟ್ಟರ್‌ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಎಷ್ಟರಮಟ್ಟಿಗೆ ಎಂದರೆ ಈ ಬಿಲಿಯನೇರ್ ಮಾಡುವ ಪ್ರತಿಯೊಂದು ಟ್ವೀಟ್‌ಗಳು ಸಿಕ್ಕಾಪಟ್ಟೆ ಸುದ್ದಿ ಮಾಡುತ್ತವೆ. ಎಲಾನ್ ಮಸ್ಕ್ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳನ್ನು ಒಬ್ಬರು. ಇವರ ಒಟ್ಟು ಆಸ್ತಿ 2 ಲಕ್ಷ ಕೋಟಿಗೂ ಅಧಿಕ. ಇವೆಲ್ಲವನ್ನೂ ಮಾರಿ ಇದೀಗ ಅನ್ಯಗ್ರಹದಲ್ಲಿ ಆಸ್ತಿ ಖರೀದಿಸಿ ಮನುಷ್ಯನ ವಾಸಸ್ಥಳವನ್ನಾಗಿಸುವ ಹೊಸ ಐಡಿಯಾದ ಪ್ರಾಜೆಕ್ಟ್ ಒಂದರ ಮೇಲೆ ಕಂಪೆನಿ ಕಟ್ಟಿದ್ದಾರೆ ಎಲಾನ್ ಮಸ್ಕ್. ಇದಕ್ಕಾಗಿ ಅವರ ಸ್ಪೇಸ್ ಎಕ್ಸ್ ಕಂಪನಿಯು ಶ್ರಮಿಸುತ್ತಿದೆ.

ಈಗ, ಎಲೋನ್ ಮಸ್ಕ್‌ಗೆ ತಮ್ಮ ಉದ್ಯೋಗವನ್ನು ತೊರೆಯುವ ಮನಸ್ಸಾಗಿದೆಯಂತೆ. ಇದೇನು ಗಾಸಿಪ್ ಅಲ್ಲ, ಅವರೇ ಟ್ವಿಟರ್ ಮೂಲಕ ಬಹಿರಂಗಪಡಿಸಿದ ಸುದ್ದಿಯಿದು. ತಮ್ಮ ಸಿಇಒ ಕೆಲಸ ತೊರೆದು ಪೂರ್ಣ ಸಮಯದ ಇನ್ಫ್ಲುಯೆನ್ಸರ್ ಆಗುವ ಬಯಕೆ ಹುಟ್ಟಿದೆ ಎಂದು ಸ್ವತಃ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಸದ್ಯ ಈ ಟ್ವೀಟ್ ವೈರಲ್ ಜಗತ್ತಿನ ಹಾಟ್ ಫೇವರೇಟ್ ಆಗಿದೆ.

ತಮ್ಮ ಇತ್ತೀಚಿನ ಟ್ವೀಟ್‌ನಲ್ಲಿ, ಮಸ್ಕ್ ಅವರು “ತನ್ನ ಕೆಲಸಗಳನ್ನು ತೊರೆದು ಪೂರ್ಣಾವಧಿಯ ಇನ್ಫ್ಲುಎನ್ಸರ್ ಆಗಲು ಯೋಚಿಸುತ್ತಿದ್ದೇನೆ” ಎಂದು ಬರೆದುಕೊಂಡಿದ್ದು ಈಕುರಿತು ಜನರ ಬಳಿ ಅಭಿಪ್ರಾಯವನ್ನು ಕೇಳಿದ್ದಾರೆ. ಇದಕ್ಕೆ ಪಾಪುಲರ್ ಯು ಟ್ಯುಬರ್ಸ್ ಗಳು ಹೇಗೆಲ್ಲಾ ಯೂ ಟ್ಯೂಬ್ ಲೈಕ್ ಪಡೆಯಲು ಸಾಧ್ಯ ಎಂದು ಬಿಳಿಯನೇರ್ ವ್ಯಕ್ತಿಗೆ ಸಲಹೆ ನೀಡಿದ್ದಾರೆ.

ಈ ಹಿಂದೆ ಮಸ್ಕ್ ಮಾಡಿದ್ದ ಟ್ವಿಟ್ ಒಂದು ಸಾಕಷ್ಟು ಟ್ರೋಲ್ ಆಗಿತ್ತು. ಇದರಲ್ಲಿ ತಮ್ಮ ಹೊಸ ಹೇರ್ ಸ್ಟೈಲ್ ಫೋಟೋ ಅಪ್ ಲೋಡ್ ಮಾಡಲಾಗಿತ್ತು. ಸಾಕಷ್ಟು ಪ್ರಮಾಣದಲ್ಲಿ ಚರ್ಚೆ ನಡೆದ ಮೇಲೆ, ಅದು ತಮ್ಮದೇ ಸ್ವಂತ ಹೇರ್ ಕಟ್ ಎಂದು ಹೇಳಿದ್ದರು. ಇವರ ಕಂಪೆನಿಯ ರಾಕೆಟ್‌ಗಳನ್ನು ನಾಸಾ ಸಂಸ್ಥೆ ಬಳಸುತ್ತಿದೆ. ಮನೆ ಮಠ ಎಂದು ಕುಳಿತರೆ ತಮ್ಮ ಮಹತ್ವಾಕಾಂಕ್ಷೆಯುಳ್ಳು ಗುರಿಗೆ ಅಡ್ಡಿ ಆಗಬಹುದು ಎಂದು ಹಿಂದೊಮ್ಮೆ ಮಸ್ಕ್ಕ ಹೇಳಿದ್ದರು. ಈ ಮಾತು ಸಹ ಸಾಕಷ್ಟು ವೈರಲ್ ಆಗಿತ್ತು.

ಇದನ್ನೂ ಓದಿ: Elon Musks : ಉಪಗ್ರಹದಿಂದ ಇಂಟರ್‌ನೆಟ್ ಒದಗಿಸುವ ಸ್ಟಾರ್‌ಲಿಂಕ್ ಭಾರತಕ್ಕೆ! ಇಲ್ಲಿದೆ ಖುಷಿ ಕೊಡುವ ಅಪ್‌ಡೇಟ್

(Tesla and SpaceX CEO Elon Musk wants to quit his job)

Comments are closed.