ಸಿನಿಮಾ ಶೂಟಿಂಗ್ ಮುಗಿದ ಖುಷಿಯಲ್ಲಿ ಬಾಯ್ ಪ್ರೆಂಡ್ ಜೊತೆ ಜಾಲಿ ರೈಡ್ ಹೋಗಿದ್ದ ನಟಿ ಗೆಳೆಯದೊಂದಿಗೆ ನದಿಯಲ್ಲಿ ಬಿದ್ದು ದುರಂತ ಸಾವುಕಂಡಿದ್ದಾರೆ. ಹಿಂದಿ ಹಾಗೂ ಮರಾಠಿಯಲ್ಲಿ ಗುರುತಿಸಿಕೊಂಡ ನಟಿ ಈಶ್ವರಿ ದೇಶಪಾಂಡೆ ದುರಂತ ಸಾವು ಕಂಡಿದ್ದಾರೆ.

ಈಶ್ವರಿ ತಮ್ಮ ಬಾಯ್ ಪ್ರೆಂಡ್ ಶುಭಂ ದಾದ್ಗೆ ಜೊತೆಗೆ ಗೋವಾ ಟ್ರಿಪ್ ಹೋಗಿದ್ದರು. ಈ ವೇಳೆ ಕಾರಿನಲ್ಲಿ ಅಲ್ಲೆಲ್ಲ ಸುತ್ತಾಡುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಶುಭಂ ಹಾಗೂ ಈಶ್ವರಿ ಪ್ರಯಾಣಿಸುತ್ತಿದ್ದ ಕಾರು ಗೋವಾದ ಬಾಗಾ ನದಿಗೆ ಬಿದ್ದಿದೆ.

ಕಾರು ಸೆಂಟ್ರಲ್ ಲಾಕ್ ಆಗಿದ್ದ ಪರಿಣಾಮ ಕಾರಿನಿಂದ ಹೊರಬರಲಾಗದೇ ಶುಭಂ ಹಾಗೂ ಈಶ್ವರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.ಕಾರನ್ನು ನದಿಯಿಂದ ಮೇಲಕ್ಕೆತ್ತಲಾಗಿದ್ದು ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
25 ವರ್ಷದ ಈಶ್ವರಿ ನಟನೆಯಲ್ಲಿ ಆಸಕ್ತಿ ಹೊಂದಿದ್ದು ಮರಾಠಿ ಹಾಗೂ ಹಿಂದಿಯಲ್ಲಿ ಹಲವು ಚಿತ್ರದಲ್ಲಿ ನಟಿಸಿದ್ದರು. ಸದ್ಯ ಈಶ್ವರಿ ನಟಿಸಿದ ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ. ಶುಭಂರನ್ನು ಹಲವು ವರ್ಷದಿಂದ ಪ್ರೀತಿಸುತ್ತಿದ್ದ ಈಶ್ವರಿ ಮುಂದಿನ ತಿಂಗಳು ನಿಶ್ಚಿತಾರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದರು.
(marathi actress ishwari deshpande died in accident in goa)