Tumkur : ಹೈಟೆಕ್‌ ವೇಶ್ಯಾವಾಟಿಕೆ ಜಾಲ ಬಯಲು : ಸುರಂಗದಲ್ಲಿ ಅವಿತಿದ್ದರು ಸುಂದರಿಯರು

ತುಮಕೂರು : ಲಾಡ್ಜ್‌ನಲ್ಲಿ ಸುರಂಗ ಕೊರೆದು ಹೈಟೆಕ್‌ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಮೈಸೂರಿನ ಒಡನಾಟಿ ಸಂಸ್ಥೆ ಹಾಗೂ ತುಮಕೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ತುಮಕೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಶಿ ರಾಶಿ ಕಾಂಡೋಮ್ ಗಳು ಪತ್ತೆಯಾಗಿತ್ತು. ಈ ಕುರಿತು ಮೈಸೂರಿನ ಒಡನಾಡಿ ಸಂಸ್ಥೆ ಪೊಲೀಸರಿಗೆ ದೂರು ನೀಡಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಒಡನಾಡಿ ಸಂಸ್ಥೆ ಜಂಟಿ ಕಾರ್ಯಚರಣೆ ನಡೆಸಿ ಹೈಟೆಕ್‌ ವೇಶ್ಯಾವಾಟಿಕೆ ನಡೆಯುತ್ತಿದ್ದ ಜಾಲವನ್ನು ಬೇಧಿಸಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಪೊಲೀಸರು ತುಮಕೂರಿನ ಕ್ಯಾತಸಂದ್ರ ಲಾಡ್ಜ್ ಮೇಲೆ ದಾಳಿ ಮಾಡಿದ್ದಾರೆ. ಆದರೆ ಈ ವೇಳೆಯಲ್ಲಿ ಲಾಡ್ಜ್ ನಲ್ಲಿ ಯಾರೊಬ್ಬರೂ ಕೂಡ ಇರಲಿಲ್ಲ. ಅನುಮಾನಗೊಂಡು ಪೊಲೀಸರು ಮೀರರ್ ಸ್ಟ್ಯಾಂಡ್ ಓಪನ್‌ ಮಾಡಿದ್ದಾರೆ. ಆಗ ಹೈಟೆಕ್‌ ವೇಶ್ಯಾವಾಟಿಕೆ ದಂಧ ಬಯಲಿಗೆ ಬಂದಿದೆ.

ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲ್‌ ಮಾಲೀಕ ಯಾರಿಗೂ ಗೊತ್ತೇ ಆಗಬಾರದು ಅನ್ನೋ ಕಾರಣಕ್ಕೆ ಲಾಡ್ಜ್‌ನಲ್ಲಿ ಸುರಂಗ ಕೊರೆದು ಯುವಕ, ಯುವತಿಯರನ್ನು ಬಚ್ಚಿಟ್ಟಿದ್ದ. ಆದರೆ ಪೊಲೀಸರು ಜಾಲವನ್ನು ಬೇಧಿಸಿದ್ದೂ, ಯುವತಿಯರು, ಪುರುಷರು ಸೇರಿದಂತೆ ಒಟ್ಟು ಏಳು ಮಂದಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : ಮಗನ ಶಾಲಾ ವಾಟ್ಸಾಪ್ ಗ್ರೂಪ್‌ಗೆ ಅಶ್ಲೀಲ ಚಿತ್ರ, ವಿಡಿಯೋ ಕಳುಹಿಸಿದ ವ್ಯಕ್ತಿ ಅರೆಸ್ಟ್‌

ಇದನ್ನೂ ಓದಿ : ಗೀತ ಗೋವಿಂದಂ ಸ್ಟೈಲ್‌ನಲ್ಲಿ ಬಸ್ಸಿನಲ್ಲಿ ಕಿಸ್‌ : ಬಳ್ಳಾರಿ ಮೂಲದ ಇಂಜಿನಿಯರ್‌ ಅರೆಸ್ಟ್‌

( High-tech prostitution racket Arrest in Tumkur : Beautiful women in the tunnel in Lodge )

Comments are closed.