ಸೋಮವಾರ, ಏಪ್ರಿಲ್ 28, 2025
HomeCinemaShah Rukh Khan son : ಕ್ರೂಸ್‌ನಲ್ಲಿ ಡ್ರಗ್ಸ್‌ ಪಾರ್ಟಿ : ನಟ ಶಾರೂಖ್‌ ಪುತ್ರ...

Shah Rukh Khan son : ಕ್ರೂಸ್‌ನಲ್ಲಿ ಡ್ರಗ್ಸ್‌ ಪಾರ್ಟಿ : ನಟ ಶಾರೂಖ್‌ ಪುತ್ರ ಆರ್ಯನ್‌ ವಿಚಾರಣೆ, 16 ಮಂದಿ ಅರೆಸ್ಟ್‌

- Advertisement -

ಮುಂಬೈ : ಸಮುದ್ರದ ಮಧ್ಯದಲ್ಲಿ ಐಶಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್‌ ಪಾರ್ಟಿಯ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯ ವೇಳೆಯಲ್ಲಿ ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆಯಲ್ಲಿ ಆರ್ಯನ್‌ ಮೊಬೈಲ್‌ ವಶಕ್ಕ ಪಡೆಯಲಾಗಿದ್ದು, ಪಾರ್ಟಿಯಲ್ಲಿ ಪಾಲ್ಗೊಂಡಿದ್ದ16 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಕಾರ್ಡೇಲಿತಾ ಕ್ರೂಸ್‌ ಎಂಪ್ರೆಸ್‌ ಹಡಗಿನಲ್ಲಿ ಡ್ರಗ್ಸ್‌ ಪಾರ್ಟಿ, ರೇವ್‌ ಪಾರ್ಟಿ ಆಯೋಜನೆ ಮಾಡಿರುವ ಕುರಿತು ಎನ್‌ಸಿಬಿ ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದಾರೆ. ಈ ವೇಳೆಯಲ್ಲಿ ಅಪಾರ ಪ್ರಮಾಣದ ಡ್ರಗ್ಸ್‌ ಪತ್ತೆಯಾಗಿತ್ತು. ಅದ್ರಲ್ಲೂ ಕ್ರೂಸ್‌ ನಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಶಾರೂಖ್‌ ಪುತ್ರ ಆರ್ಯನ್ ಖಾನ್ ಭಾಗಿಯಾಗಿದ್ದು, ಅವರನ್ನು ವಿಚಾರಣೆಗೊಳಪಡಿಸಲಾಗಿದೆ. ಆರ್ಯನ್‌ ಖಾನ್‌ನನ್ನು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ಅಲ್ಲದೇ ಮೊಬೈಲ್‌ ಸೀಜ್‌ ಮಾಡಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಾಲಿವುಡ್‌ ನಟ ಶಾರೂಖ್‌ ಖಾನ್‌ ಹಾಗೂ ಗೌರಿ ದಂಪತಿಗಳ ಒಟ್ಟು ಮೂರು ಮಕ್ಕಳ ಪೈಕಿ ಮೊದಲ ಮಗನಾಗಿರುವ ಆರ್ಯನ್‌ ಖಾನ್‌ ಅತಿಥಿಯಾಗಿ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದ ಅನ್ನೋ ಕುರಿತು ರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಪ್ರಸಾರ ಮಾಡಿವೆ.

ಹಡಗಿನಲ್ಲಿ ಡ್ರಗ್ಸ ಪಾರ್ಟಿ ಮಾಡಿರುವ ಕುರಿತು ದೆಹಲಿಯಿಂದ ಆಗಮಿಸಿದ್ದ ಮೂವರು ಯುವತಿಯರು ಸೇರಿದಂತೆ ಒಟ್ಟು 16 ಮಂದಿಯನ್ನು ವಶಕ್ಕೆ ಪಡೆದು ಎನ್‌ಸಿಬಿ ಅಧಿಕಾರಿಗಳು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಅಲ್ಲದೇ ಕ್ರೂಸ್ ಪಾರ್ಟಿಯನ್ನು ಯೋಜಿಸಿದ ಆರು ಸಂಘಟಕರನ್ನು ಕೂಡ ವಿಚಾರಣೆಗೆ ಒಳಪಡಿಸಿದೆ. ಹಡಗಿನಲ್ಲಿ ಎಕ್‌ಸ್ಟಸಿ, ಕೊಕೇನ್, ಮೆಫೆಡ್ರೋನ್ ಮತ್ತು ಚರಸ್‌ನಂತಹ ಮಾದಕ ವಸ್ತುಗಳು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಹಡಗಿನ ಕೆಲವು ಪ್ರಯಾಣಿಕ ಲಗೇಜ್‌ನಲ್ಲಿ ಮಾದಕ ವಸ್ತುಗಳು ಪತ್ತೆಯಾಗಿರುವುದನ್ನು ಎನ್‌ಸಿಬಿ ದೃಢಪಡಿಸಿದೆ.

ಇದನ್ನೂ ಓದಿ : ಸಮುದ್ರ ಮಧ್ಯೆ ಕ್ರೂಸ್‌ನಲ್ಲಿ ರೇವ್ ಪಾರ್ಟಿ : ಸ್ಟಾರ್‌ ನಟ ಪುತ್ರ, 10 ಮಂದಿ ಬಂಧನ

ಇನ್ನು ಶನಿವಾರ ರಾತ್ರಿ ಹಡಗಿನಲ್ಲಿ ರೇವ್‌ ಪಾರ್ಟಿ ನಡೆಸಲಾಗಿದೆ. ಸಂಗೀತ ಕಾರ್ಯಕ್ರಮದ ಹೆಸರಿನಲ್ಲಿ ಕ್ರೂಸ್‌ ನಲ್ಲಿ ಸಂಘಟಕರು ಪಾರ್ಟಿಯನ್ನು ಆಯೋಜನೆಯನ್ನು ಮಾಡಿದ್ದರು. ಐಶಾರಾಮಿ ಹಡಿಗಿನಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಪಾಲ್ಗೊಳ್ಳುವವರಿಗೆ ತಲಾ 60 ಸಾವಿರ ರೂಪಾಯಿಯಿಂದ ಐದು ಲಕ್ಷ ರೂಪಾಯಿ ವರೆಗೆ ಟಿಕೆಟ್‌ ದರವನ್ನು ನಿಗದಿ ಪಡಿಸಿದ್ದರು. ಕ್ರೂಸ್‌ ಸಮುದ್ರದ ಮಧ್ಯಭಾಗ ಪ್ರವೇಶಿಸುತ್ತಿದ್ದಂತೆಯೇ ರೇವ್‌ ಪಾರ್ಟಿಯನ್ನು ನಡೆಸಲಾಗಿತ್ತಯ. ಶನಿವಾರದಂದು ಮಧ್ಯಾಹ್ನ 2 ಗಂಟೆಗೆ ಹೊರಟಿರುವ ಕ್ರೂಶ್‌ ಅಕ್ಟೋಬರ್‌ ೪ರಂದು ಬೆಳಗ್ಗೆ 10 ಗಂಟೆಗೆ ಮರಳಬೇಕಿತ್ತು.

ಇದನ್ನೂ ಓದಿ : ಬಾಲಿವುಡ್ ನಟ ಸುಶಾಂತ್ ಸಿಂಗ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ !

ಹಡಗಿನಲ್ಲಿ ನಡೆದಿರುವ ಪಾರ್ಟಿಯಲ್ಲಿ ಆರ್ಯನ್‌ ಖಾನ್‌ ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳು ಭಾಗಿಯಾಗಿರುವ ಕುರಿತು ಮಾಹಿತಿ ಎನ್‌ಸಿಬಿ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಎನ್‌ಸಿಬಿ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ನೇತೃತ್ವದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಐಶಾರಾಮಿ ಹಡಗು ಪ್ರವೇಶಿಸಿದ್ದ ಅಧಿಕಾರಿಗಳು ಎಲ್ಲಾ ಮಾಹಿತಿಗಳನ್ನು ಪಡೆದು ಕೊಂಡಿದ್ದರು. ಹಡಗಿನಲ್ಲಿ ಪಾರ್ಟಿ ನಡೆಯುತ್ತಿದ್ದಂತೆಯೇ ಏಕಾಏಕಿ ದಾಳಿಯನ್ನು ನಡೆಸಿದ್ದಾರೆ. ಘಟನೆಯ ಕುರಿತು ಎಲ್ಲಾ ಮಾಹಿತಿಯನ್ನೂ ಸಂಪೂರ್ಣವಾಗಿ ಕಲೆ ಹಾಕಿದ ನಂತರವೇ ಹಲವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

( Shah Rukh Khan’s son Aryan is being questioned by NCB after rave party raid in Mumbai)

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular