Mamata Banerjee : ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಭಬನಿಪುರದಲ್ಲಿ 34,000 ಮತಗಳ ಮುನ್ನಡೆ

ಕೋಲ್ಕತ್ತಾ : ತೀವ್ರ ಕುತೂಹಲ ಕೆರಳಿಸಿರುವ ಬಂಗಾಳದ ಭಬಜಿಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. 11 ನೇ ಸುತ್ತಿನ ಮತ ಎಣಿಕೆಯ ಬೆನ್ನಲ್ಲೇ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬರೊಬ್ಬರಿ 34,000 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಟಿಎಂಸಿ ಅಧಿಕಾರದ ಗದ್ದುಗೆ ಏರಿತ್ತು. ಆದ್ರೆ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ನಡೆದ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದರು. ನಂತರ ಬಂಗಾಳ ಸಿಎಂ ಆಗಿ ಆಯ್ಕೆಯಾಗಿರುವ ಮಮತಾ ಆರು ತಿಂಗಳ ಒಳಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಲೇ ಬೇಕಾದ ಸಂದಿಗ್ದತೆಗೆ ಸಿಲುಕಿದ್ದರು. ಇದೇ ಕಾರಣಕ್ಕೆ ಭಬಜಿಪುರದ ಉಪಚುನಾವಣಾ ಮೂಲಕ ಕಣಕ್ಕೆ ಇಳಿದಿದ್ದರು.

ಬೆಳಗ್ಗೆ ಮತ ಎಣಿಕೆ ಆರಂಭವಾಗುತ್ತಿದ್ದಂತೆಯೇ ಮಮತಾ ಬ್ಯಾನರ್ಜಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಭಬನಿಪುರದಲ್ಲಿ ಮಮತಾ ಎದುರಾಳಿಯಾಗಿ ಬಿಜೆಪಿಯಿಂದ ಪ್ರಿಯಾಂಕಾ ಟಿಬ್ರೂವಾಲ್‌ ಹಾಗೂ ಸಿಪಿಐಎಂನ ಶ್ರೀಬಿಜ್‌ ಬಿಸ್ವಾಸ್‌ ಕಣದಲ್ಲಿದ್ದಾರೆ. ಅಲ್ಲದೇ ಮುರ್ಷಿದಾಬಾದ್‌ನ ಸಂಸರ್‌ಗಂಜ್ ಮತ್ತು ಜಂಗೀಪುರ್ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು, ತಲಾ 77% ರಷ್ಟು ಹೆಚ್ಚಿನ ಮತದಾನವಾಗಿತ್ತು.

ಇದನ್ನೂ ಓದಿ : ಮಮತಾ ಬ್ಯಾನರ್ಜಿ ಎಡವಟ್ಟು : ಗಾಯಗೊಂಡ ಕಾಲನ್ನು ಅಲುಗಾಡಿಸಿದ ವೀಡಿಯೋ ವೈರಲ್..!!!

ಭಬನಿಪುರ ಉಪಚುನಾವಣೆಯ 11 ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, ಮಮತಾ ಬ್ಯಾನರ್ಜಿ 34,000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಮಮತಾ ಬ್ಯಾನರ್ಜಿ 45894 ಮತಗಳನ್ನು ಪಡೆದಿದ್ದಾರೆ, ಪ್ರಿಯಾಂಕಾ ಟಿಬ್ರೆವಾಲ್ 11894 ಮತಗಳನ್ನು ಪಡೆದಿದ್ದಾರೆ ಮತ್ತು CPIM ಅಭ್ಯರ್ಥಿ ಕೇವಲ 1515 ಮತಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ : ಪ್ರಾದೇಶಿಕ ಪಕ್ಷಗಳೆದುರು ಮುಗ್ಗರಿಸಿದ ಬಿಜೆಪಿ, ಬಿಜೆಪಿ ಎದುರು ಎಡವಿದ ಕಾಂಗ್ರೆಸ್ : ಆಂತರಿಕ ಕಚ್ಚಾಟದಿಂದ ಬೆತ್ತಲಾದ ಕೈ ಪಡೆ

( Bengal By-election Results LIVE Updates: Mamata Banerjee leading by over 34,000 votes )

Comments are closed.