ಮಂಗಳವಾರ, ಏಪ್ರಿಲ್ 29, 2025
HomeCinemaSai Pallavi : ನಟನೆ ಬಿಟ್ಟು ಕೃಷಿಗೆ ಇಳಿದ ಸ್ಟಾರ್ ನಟಿ ಸಾಯಿಪಲ್ಲವಿ

Sai Pallavi : ನಟನೆ ಬಿಟ್ಟು ಕೃಷಿಗೆ ಇಳಿದ ಸ್ಟಾರ್ ನಟಿ ಸಾಯಿಪಲ್ಲವಿ

- Advertisement -

ಅದ್ಯಾಕೋ ಗೊತ್ತಿಲ್ಲ ಬಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ಹೀಗೆ ಎಲ್ಲ ಚಿತ್ರರಂಗದ ನಟ-ನಟಿಯರು ಇತ್ತೀಚಿಗೆ ಕೃಷಿಯತ್ತ ಮುಖಮಾಡಿದ್ದಾರೆ. ಸಲ್ಮಾನ್ ಖಾನ್ ರಿಂದ ಆರಂಭಿಸಿ ಸ್ಯಾಂಡಲ್ ವುಡ್ ನ ಉಪೇಂದ್ರವರೆಗೆ ಎಲ್ಲರೂ ಕೃಷಿಗೆ ಆದ್ಯತೆ ನೀಡಿ ಬಿಡುವಿನ ವೇಳೆಯಲ್ಲಿ ಮಣ್ಣಿನಜೊತೆ ಸಮಯ ಕಳೆಯುತ್ತಾರೆ. ಈಗ ಈ ಸಾಲಿಗೆ ಸೌತ್ ರಿಯಲ್ ಬ್ಯೂಟಿ ಖ್ಯಾತಿಯ ಸಾಯಿಪಲ್ಲವಿ (Sai Pallavi ) ಕೂಡ ಸೇರ್ಪಡೆಗೊಂಡಿದ್ದಾರೆ. ಸಿನಿಮಾ ಹಿಟ್ ಆದ ಸಂಭ್ರಮದಲ್ಲಿರೋ ಸಾಯಿ ಪಲ್ಲವಿ (Sai Pallavi) ಈಗ ಶುಂಠಿ ಕೃಷಿಯಲ್ಲಿ ಬ್ಯುಸಿಯಾಗಿದ್ದಾರೆ.

Indian Star Actress Sai Pallavi Doing Agriculture

ಹೌದು, ನಟಿ ಸಾಯಿಪಲ್ಲವಿ (Sai Pallavi), ಹೊಸ ವರ್ಷ ಹಾಗೂ ಯುಗಾದಿ ಸಂಭ್ರಮದಲ್ಲಿ ಕೃಷಿಗೆ ಇಳಿದಿದ್ದಾರೆ. ಶುಂಠಿ ಕೃಷಿಯಲ್ಲಿ ತೊಡಗಿಕೊಂಡಿರೋ ಚಿತ್ರಗಳನ್ನು ಸಾಯಿ ಪಲ್ಲವಿ ಹಂಚಿಕೊಂಡಿದ್ದು, ಇತರ ಮಹಿಳೆಯರಂತೆ ತಾವು ಕೂಡ ತಲೆಗೆ ಬಟ್ಟೆ ಕಟ್ಟಿಕೊಂಡು ಬರಿಗಾಲಿನಲ್ಲಿ ಕೃಷಿಗೆ ಬಂದು ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ. ತಾವೇ ಶುಂಠಿಯನ್ನು ಕಿತ್ತು ಕೈಯಲ್ಲಿ ಹಿಡಿದುಕೊಂಡಿರೋ ಪೋಟೋಗಳನ್ನು ಶೇರ್ ಮಾಡಿಕೊಂಡಿರೋ ಸಾಯಿ ಪಲ್ಲವಿ ಡಿ ರೂಟಿಂಗ್ ಎಂಬ ಕ್ಯಾಪ್ಸನ್ ಜೊತೆ ಕೂಡ ನೀಡಿದ್ದಾರೆ.
ಸಾಯಿ ಪಲ್ಲವಿ ಹಂಚಿಕೊಂಡಿರೋ ಪೋಟೋಗಳಿಗೆ ನಟಿ ಶ್ರದ್ಧಾಶ್ರೀನಾಥ, ಮಲೆಯಾಳಂ ನಟಿ ಅನುಪಮಾ ಪರಮೇಶ್ವರ ನ್ ಸೇರಿ ಹಲವು ಪ್ರತಿಕ್ರಿಯೆ ನೀಡಿದ್ದಾರೆ.

Indian Star Actress Sai Pallavi Doing Agriculture

ಸಾಯಿ ಪಲ್ಲವಿ ನಟನೆಯ ಶ್ಯಾಮ್ ಸಿಂಘ್ ರಾಯ್ ಸಿನಿಮಾ ಕೆಲವು ತಿಂಗಳ ಹಿಂದೆಯಷ್ಟೇ ರಿಲೀಸ್ ಆಗಿದ್ದು, ಸಾಯಿ ಪಲ್ಲವಿ (Sai Pallavi) ಪಾತ್ರಕ್ಕೆ‌ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಸದ್ಯದಲ್ಲೇ ವಿರಾಟ ಪರ್ವಂ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ. ಇದರಲ್ಲಿ ಸಾಯಿ ಪಲ್ಲವಿ ಜೊತೆ ರಾಣಾ ದಗ್ಗುಬಾಟಿ ಕೂಡ ನಟಿಸಿದ್ದು, ಕನ್ನಡದ ಪ್ರಿಯಾಮಣಿ ಕೂಡ ನಟಿಸಿದ್ದಾರೆ. ಈ ಸಿನಿಮಾದ ಟೀಸರ್ ಹಾಗೂ ಹಾಡು ಈಗಾಗಲೇ ರಿಲೀಸ್ ಆಗಿದ್ದು, ಮನಸೆಳೆಯುತ್ತಿದೆ. ನಕ್ಸಲೈಟ್ಸ್ ಕತೆ ಹೊಂದಿರೋ ಈ ಸಿನಿಮಾದಲ್ಲಿ ಸಾಯಿಪಲ್ಲವಿ ಅದ್ಭುತವಾಗಿ ನಟಿಸಿದ್ದಾರೆ ಎಂದು ನಟ ರಾಣಾ ದಗ್ಗುಬಾಟಿ ಕೂಡ ಮೆಚ್ಚುಗೆ ಸೂಚಿಸಿದ್ದಾರೆ‌

ಈ ಮಧ್ಯೆ ಬೋಲಾ ಶಂಕರ ರಿಮೇಕ್ ಚಿತ್ರವನ್ನು ಸಾಯಿ ಪಲ್ಲವಿ ನಿರಾಕರಿಸಿದ್ದು, ರಿಮೇಕ್ ನಲ್ಲಿ ನಟಿಸೋದಿಲ್ಲ ಎಂದಿದ್ದಾರಂತೆ. ಇನ್ನೊಂದೆಡೆ ನಟಿ ಸಾಯಿ ಪಲ್ಲವಿ ಸಿನಿಮಾ ಗೆಲುವಿನ ಬಳಿಕವೂ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ನಟಿ ಸಾಯಿ ಪಲ್ಲವಿ ಸಿನಿಮಾ ಕ್ಷೇತ್ರದಿಂದ ದೂರ ಉಳಿಯುತ್ತಾರಾ ಎಂಬ ಅನುಮಾನವೂ ಅಭಿಮಾನಿಗಳಿಗೆ ಕಾಡುತ್ತಿದೆ. ಕೃಷಿ ಪೋಟೋ ಹಂಚಿಕೊಂಡಿರೋ ಸಾಯಿಪಲ್ಲವಿ ಫುಲ್ ಟೈಂ ಅದಕ್ಕೆ ತಮ್ಮನ್ನು ತಾವು ಮೀಸಲಿಡಿಸುತ್ತಾರಾ ಎಂಬ ಅನುಮಾನವೂ ಅಭಿಮಾನಿಗಳನ್ನು ಕಾಡ್ತಿದೆ.

ಇದನ್ನೂ ಓದಿ : ಕುಂಡಲಿಭಾಗ್ಯ ನಾಯಕನ ಮನೆಗೆ ಹೊಸ ಅತಿಥಿ : ಧೀರಜ್ ಧೂಪರ್ ಹಂಚಿಕೊಂಡ್ರು ಸಿಹಿ ಸುದ್ದಿ

ಇದನ್ನೂ ಓದಿ : ರಾಜಮೌಳಿ ಮುಂದಿನ ಚಿತ್ರದ ನಾಯಕ ಇವರೇನಾ…?ಕುತೂಹಲ ಮೂಡಿಸಿದ ಮುಂದಿನ ಚಿತ್ರ

Indian Star Actress Sai Pallavi Doing Agriculture

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular