ಸೋಮವಾರ, ಏಪ್ರಿಲ್ 28, 2025
HomeCinemaInternet Movie Database : 2022ನೇ ಸಾಲಿನ ಟಾಪ್ 10 ಭಾರತೀಯರ ನಟ-ನಟಿಯರ ಪಟ್ಟಿ ಬಿಡುಗಡೆ...

Internet Movie Database : 2022ನೇ ಸಾಲಿನ ಟಾಪ್ 10 ಭಾರತೀಯರ ನಟ-ನಟಿಯರ ಪಟ್ಟಿ ಬಿಡುಗಡೆ : ಧನುಷ್‌ ನಂ 1, ಯಶ್ ಎಷ್ಟನೇ ಸ್ಥಾನ?

- Advertisement -

ಇನ್ನೂ ಕೆಲವೇ ದಿನಗಳಲ್ಲಿ 2022 ಮುಗಿಯುತ್ತಿದ್ದು, ಕ್ಯಾಲೆಂಡರ್‌ ಹೊಸ ವರ್ಷವಾದ 2023ಕ್ಕೆ ಅದ್ಧೂರಿ ಸ್ವಾಗತವಾಗುತ್ತದೆ. (Internet Movie Database) ಈ ಒಂದು ವರ್ಷದಲ್ಲಿ ಯಾವ್ಯಾವ ನಟರು ಮಾಡಿದ ಸಾಧನೆ ಏನು? ಭಾರತದಲ್ಲಿ ಟಾಪ್ 10 ಪಟ್ಟಿಯರಲ್ಲಿರೋ ಸ್ಟಾರ್‌ಗಳು ಯಾರು? ಅನ್ನೋ ಕುತೂಹಲ ನೆಚ್ಚಿನ ಅಭಿಮಾನಿಗಳಿದೆ.

ಸಿನಿಮಾ, ಟಿವಿ ಹಾಗೂ ಸೆಲೆಬ್ರೆಟಿಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ನೀಡುವ ಇಂಟರ್ನೆಟ್ ಚಲನಚಿತ್ರ ಡೇಟಾಬೇಸ್ (IMDb) 2022ರಲ್ಲಿ ಸಾಧನೆ ಮಾಡಿದ ಸ್ಟಾರ್ ನಟರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಶ್ವದಾದ್ಯಂತ ಸುಮಾರು 200 ಮಿಲಿಯನ್‌ಗೂ ಅಧಿಕ ವೀಕ್ಷಕರು ಗೂಗಲ್‌ ಸರ್ಚ್‌ ಮಾಡಿದ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಈ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ.

IMDb ರಿಲೀಸ್ ಮಾಡಿದ 2022ರ ಪಟ್ಟಿಯಲ್ಲಿರುವ ಟಾಪ್ 10 ಭಾರತೀಯ ನಟ-ನಟಿಯರ ಪಟ್ಟಿ ವಿವರ :

  1. ಧನುಷ್
    2022 ರ ಟಾಪ್ 1ನೇ ಸ್ಥಾನದಲ್ಲಿರೋದು ಧನುಷ್. ಈ ವರ್ಷ ಧನುಷ್ ಐದು ಪ್ರಾಜೆಕ್ಟ್‌ಗಳಲ್ಲಿ ನಟಿಸಿದ್ದಾರೆ. ಓಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ ಸಿರೀಸ್ ‘ಗ್ರೇ ಮ್ಯಾನ್’, ತಮಿಳು ಸಿನಿಮಾಗಳು ‘ಮಾರನ್’, ‘ತಿರುಚಿತ್ರಂಬಲಂ’, ‘ನಾನೇ ವರುವೆನ್’ ಹಾಗೂ ‘ವಾಥಿ’ ಸಿನಿಮಾಗಳು ಈ ವರ್ಷ ಬಿಡುಗಡೆ ಆಗಿವೆ. ಈ ಆಧಾರದಲ್ಲಿ ಧನುಷ್ ನಂ 1 ಸ್ಥಾನದಲ್ಲಿದ್ದಾರೆ.
  2. ಆಲಿಯಾ ಭಟ್
    ಬಾಲಿವುಡ್ ನಟಿ ಆಲಿಯಾ ಭಟ್ ಎರಡನೇ ಸ್ಥಾನದಲ್ಲಿದ್ದಾರೆ. ರಾಜಮೌಳಿ ನಿರ್ದೇಶಿಸಿದ RRR ಸಿನಿಮಾದಲ್ಲಿ ಕೆಲವೇ ನಿಮಿಷಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಆ ಸಿನಿಮಾನೇ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿದೆ. ಹಾಗೇ ‘ಗಂಗೂಬಾಯಿ ಕಾಠಿಯವಾಡಿ’ ಸಿನಿಮಾ ಕೂಡ ಹಿಟ್ ಲಿಸ್ಟ್‌ಗೆ ಸೇರ್ಪಡೆಗೊಂಡಿದೆ.
  3. ಐಶ್ವರ್ಯಾ ರೈ ಬಚ್ಚನ್
    ಇದರಲ್ಲಿ ಐಶ್ವರ್ಯಾ ರೈ ಬಚ್ಚನ್ ಟಾಪ್ 3 ಸ್ಥಾನದಲ್ಲಿದ್ದಾರೆ. ಸುಮಾರು 5 ವರ್ಷಗಳ ಬಳಿಕ ಐಶ್ವರ್ಯಾ ರೈ ಬಚ್ಚನ್ ಸಿನಿರಂಗಕ್ಕೆ ಮರಳಿದ್ದಾರೆ. ಮಣಿರತ್ನಂ ನಿರ್ದೇಶಿಸಿದ ‘ಪೊನ್ನಿಯನ್ ಸೆಲ್ವನ್ 1’ ರಲ್ಲಿ ಅಭಿನಯಿಸಿದ್ದಾರೆ. ಈ ವೇಳೆ ಅತಿ ಹೆಚ್ಚು ಮಂದಿ ಐಶ್ವರ್ಯಾ ರೈ ಅನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ.
  4. ರಾಮ್‌ ಚರಣ್
    ಈ ವರ್ಷ ವಿಶ್ವ ಮಟ್ಟದಲ್ಲಿ ಗಮನ ಸೆಳೆದ ಸಿನಿಮಾ RRR. ರಾಜಮೌಳಿ ನಿರ್ದೇಶಿಸಿದ ಈ ಸಿನಿಮಾದಲ್ಲಿ ರಾಮ್ ಚರಣ್ ತೇಜಾ ಹಾಗೂ ಜೂ.ಎನ್‌ಟಿಆರ್ ಜೊತೆಯಾಗಿ ನಟಿಸಿದ್ದಾರೆ. ಭಾರತದಲ್ಲಿ ರಾಮ್‌ ಚರಣ್ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ.
  5. ಸಮಂತಾ
    ಇಂಟರ್ನೆಟ್ ಚಲನಚಿತ್ರ ಡೇಟಾಬೇಸ್ (IMDb)ನ ಪ್ರಕಾರ ಟಾಪ್ 5ನೇ ಸ್ಥಾನದಲ್ಲಿ ಸಮಂತಾ ಇದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ‘ಪುಷ್ಪ’ ರಿಲೀಸ್ ಆಗಿತ್ತು. ಅಲ್ಲಿಂದ ಸಮಂತಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇದ್ದರು. ಈ ಕಾರಣಕ್ಕೆ ಸಮಂತಾ ಟಾಪ್‌ 5 ಸ್ಥಾನದಲ್ಲಿದ್ದಾರೆ.
  6. ಹೃತಿಕ್ ರೋಷನ್
    ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ 2022ನೇ ಸಾಲಿನ ಟಾಪ್ 6ನೇ ಸ್ಥಾನದಲ್ಲಿ ಇದ್ದಾರೆ. ಈ ವರ್ಷ ಹೃತಿಕ್ ರೋಷನ್ ನಟಿಸಿದ ಏಕೈಕ ಸಿನಿಮಾ ತೆರೆಕಂಡಿತ್ತು. ಅದುವೇ ‘ವಿಕ್ರಂ ವೇದ’. ಈ ಸಿನಿಮಾ ಕೂಡ ಬಾಲಿವುಡ್ ಬಾಕ್ಸ್‌ ಆಫೀಸ್‌ನಲ್ಲಿ ಗೆಲ್ಲಲಿಲ್ಲ. ಆದರೂ, ಟಾಪ್ 6ನೇ ಸ್ಥಾನದಲ್ಲಿದ್ದಾರೆ.
  7. ಕೈರಾ ಅದ್ವಾನಿ
    2022ರಲ್ಲಿ ಬಾಲಿವುಡ್‌ನ ಸಕ್ಸಸ್‌ಪುಲ್ ನಟಿ ಕೈರಾ ಅದ್ವಾನಿ. ಈ ವರ್ಷ ಎರಡು ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಜಗ್‌ಜುಗ್‌ಜಿಯೋ’ ಮತ್ತು ‘ಭೂಲ್‌ ಭುಲಯ್ಯಾ 2’ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ.
  8. ಜೂ.ಎನ್‌ಟಿಆರ್
    RRR ಸಿನಿಮಾದ ಮೂಲಕ ವಿಶ್ವದಲ್ಲಿ ಫೇಮಸ್ ಆದ ನಟ ಜೂ.ಎನ್‌ಟಿಆರ್. ರಾಜಮೌಳಿ ನಿರ್ದೇಶಿಸಿದ ಈ ಸಿನಿಮಾ ವಿಶ್ವದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ. ರಾಮ್‌ ಚರಣ್ ಭಾರತದಲ್ಲಿ ಮೆಚ್ಚುಗೆ ಗಳಿಸಿದ್ರೆ, ಜೂ.ಎನ್‌ಟಿಆರ್ ವಿದೇಶದಲ್ಲಿ ಜನಪ್ರಿಯ ನಟರಾಗಿದ್ದಾರೆ.
  9. ಅಲ್ಲು ಅರ್ಜುನ್
    ಟಾಲಿವುಡ್‌ನಲ್ಲಿ ಯಶಸ್ಸು ಗಳಿಸಿದ ಮೂರನೇ ನಟ ಅಲ್ಲು ಅರ್ಜುನ್. ಕಳೆದ ವರ್ಷದ ಕೊನೆಯಲ್ಲಿ ತೆರೆಕಂಡಿದ್ದ ‘ಪುಷ್ಪ’ ಸಿನಿಮಾದ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಅದ್ಭುತ ಕಲೆಕ್ಷನ್‌ ಮಾಡುವುದರೊಂದಿಗೆ ಸದ್ದು ಮಾಡಿದೆ. ಆ ಸಿನಿಮಾದ ಮೂಲಕವೇ ಟಾಪ್ 9ನೇ ಸ್ಥಾನದಲ್ಲಿದ್ದಾರೆ.
  10. ಯಶ್
    2022ರಲ್ಲಿ ಯಶ್ ನಟಿಸಿದ ‘ಕೆಜಿಎಫ್ 2’ ಸಿನಿಮಾ ಭಾರತೀಯ ಬಾಕ್ಸ್‌ ಆಫೀಸ್‌ನಲ್ಲಿ ಕೊಳ್ಳೆ ಹೊಡೆದಿತ್ತು. ವಿಶ್ವದಾದ್ಯಂತ ಸುಮಾರು 1250 ಕೋಟಿ ರೂ. ಲೂಟಿ ಮಾಡಿದೆ. ಅಲ್ಲದೆ 19ನೇ ಸಿನಿಮಾ ಬಗ್ಗೆ ಕುತೂಹಲ ಕೆರಳಿಸಿದ್ದಾರೆ. ಹೀಗಾಗಿ ಇಡೀ ವರ್ಷ ಸುದ್ದಿಯಲ್ಲಿದ್ದ ಯಶ್ IMDb ಟಾಪ್ 10 ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ : Vasuki Vaibhav – Chandana : ಹಸೆಮಣೆ ಏರಲು ಸಜ್ಜಾದ ಬಿಗ್‌ಬಾಸ್‌ ಖ್ಯಾತಿಯ ವಾಸುಕಿ ವೈಭವ್‌ – ಚಂದನಾ

ಇದನ್ನೂ ಓದಿ : Rashmika Mandanna Ban‌ : ನನ್ನ ಯಾರು ಬ್ಯಾನ್‌ ಮಾಡಿಲ್ಲ : ಕನ್ನಡ ಸಿನಿಮಾ ಬಗ್ಗೆ ಪ್ರೀತಿ ಇದೆ : ರಶ್ಮಿಕಾ ಮಂದಣ್ಣ

Internet Movie Database: Top 10 Indian Actors and Actresses List Released in 2022: Dhanush No. 1, Yash What Rank?

RELATED ARTICLES

Most Popular