Infinix Hot 20 5G : 50 ಮೆಗಾಪಿಕ್ಸೆಲ್‌ ಕ್ಯಾಮೆರಾ ಇರುವ ಇನ್ಫಿನಿಕ್ಸ್‌ ಹಾಟ್‌20 5G ಸ್ಮಾರ್ಟ್‌ಫೋನ್‌ ಮಾರಾಟ ಪ್ರಾರಂಭ

ಕಳೆದವಾರ ಇನ್ಫಿನಿಕ್‌ (Infinix) ಹಾಟ್‌ ಸಿರೀಸ್‌ (Hot Series) ನ ಎರಡು ಫೋನ್‌ಗಳನ್ನು ಲಾಂಚ್‌ ಮಾಡಿತ್ತು. ಅದು ಹಾಟ್‌ 20 ಪ್ಲೇ ಮತ್ತು ಹಾಟ್‌ 20 5G (Infinix Hot 20 5G) ಸ್ಮಾರ್ಟ್‌ಫೋನ್‌ಗಳಾಗಿತ್ತು. ಈಗ ಕಂಪನಿಯು ಹಾಟ್‌ 20 5G ಅನ್ನು ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 810 ಪ್ರೊಸೆಸ್ಸರ್‌ ನಿಂದ ಚಾಲಿತವಾಗುತ್ತದೆ. ಇದು 50 ಮೆಗಾಪಿಕ್ಸೆಲ್‌ ಕ್ಯಾಮೆರಾ, 120Hz ರಿಫ್ರೆಶ್ ದರ ಹೊಂದಿರು ಡಿಸ್ಪ್ಲೇ, 5000mAh ಬ್ಯಾಟರಿ, ಸ್ಟೀರಿಯೋ ಸ್ಪೀಕರ್ ಸೆಟಪ್ ಮತ್ತು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

ಇನ್ಫಿನಿಕ್ಸ್‌ ಹಾಟ್‌20 5G ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳು :

ಈ ಸ್ಮಾರ್ಟ್‌ಫೋನ್‌ 120Hz IPS LCD ಡಿಸ್ಪ್ಲೇಯನ್ನು ಹೊಂದಿದೆ. ಇದರ ಗಾತ್ರವು 6.6 ಇಂಚುಗಳು. ಇದು ಫುಲ್‌ HD + (1080 × 2408 ಪಿಕ್ಸೆಲ್ಸ್‌) ರೆಸಲ್ಯೂಶನ್‌ ನೊಂದಿಗೆ ಬರುತ್ತದೆ. ಆಕ್ಟಾಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 ಪ್ರೊಸೆಸರ್ ನಿಂದ ವೇಗವನ್ನು ಪಡೆದುಕೊಳ್ಳುತ್ತದೆ. 4GB LPDDR4X RAM ಮತ್ತು 64GB ಸ್ಟೋರೇಜ್ ಇದರಲ್ಲಿದೆ. ಈ ಫೋನ್‌, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್‌ಗಳ ಕ್ಯಾಮೆರಾ f/1.6 ಅಪರ್ಚರ್‌ನೊಂದಿಗೆ ಬರಲಿದೆ. ಇದರೊಂದಿಗೆ, AI ಲೆನ್ಸ್ ಮತ್ತು ಡ್ಯುಯಲ್ LED ಫ್ಲ್ಯಾಷ್ ಸಹ ಕ್ಯಾಮೆರಾದಲ್ಲಿ ಲಭ್ಯವಿದೆ. ಸೆಲ್ಫಿಗಾಗಿ, ಇದು 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದು, ಅದು ಸಹ ಎಲ್ಇಡಿ ಫ್ಲ್ಯಾಷ್ ಹೊಂದಿದೆ.

ಇದನ್ನೂ ಓದಿ :Airtel Jio BSNL Broadband Plans :100 Mbps ಸ್ಪೀಡ್‌ ನೀಡುವ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು; ಯಾವ ಪ್ಲಾನ್‌ ಬೆಸ್ಟ್‌

ಇನ್ನು ಈ ಫೋನಿನ ಬ್ಯಾಟರಿಯ ಬಗ್ಗೆ ಹೇಳುವುದಾದರೆ, ಇದು 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಚಾರ್ಜ್ ಮಾಡುವ ಸಲುವಾಗಿ ಟೈಪ್-ಸಿ ಪೋರ್ಟ್ ಅನ್ನು ಇದರಲ್ಲಿ ನೀಡಲಾಗಿದೆ. ಸೆಕ್ಯೂರಿಟಿಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ. ಅದನ್ನು ಪವರ್ ಬಟನ್‌ಗೆ ಸಂಯೋಜಿಸಲಾಗಿದೆ. 3.5 ಎಂಎಂ ಆಡಿಯೊ ಜಾಕ್ ಮತ್ತು ಮೈಕ್ರೋ-ಎಸ್‌ಡಿ ಕಾರ್ಡ್ ಇದರಲ್ಲಿ ಲಭ್ಯವಿದೆ. ಸಂಪರ್ಕಕ್ಕಾಗಿ ಇದು ಡ್ಯುಯಲ್ ಸಿಮ್, 5G, ವೈ–ಫೈ 802.11 a/b/g/n/ac, Bluetooth 5.0 ಮತ್ತು GPS ಗೆ ಬೆಂಬಲಿಸುತ್ತದೆ. ಈ ಫೋನ್ ಅನ್ನು Blaster Green, Space Blue ಮತ್ತು Racing Black ಬಣ್ಣಗಳ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

ಬೆಲೆ ಮತ್ತು ಲಭ್ಯತೆ :

ಭಾರತದಲ್ಲಿ 4GB RAM ಮತ್ತು 64GB ಸಂಗ್ರಹಣೆಯಿರುವ, ಇನ್ಫಿನಿಕ್ಸ್‌ ಹಾಟ್‌20 5G (Infinix Hot 20 5G) ಬೆಲೆಯು 11,999 ರೂ. ಆಗಿದೆ. ಈ ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದಾಗಿದೆ. ಫ್ಲಿಪ್‌ಕಾರ್ಟ‌್ನಲ್ಲಿ ಆಕ್ಸಿಸ್ ಬ್ಯಾಂಕ್ ಕ್ರಡಿಟ್ ಕಾರ್ಡ್‌ನ ಮೂಳಕ ಪಾವತಿಸಿದರೆ, 5 ಪ್ರತಿಶತ ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆಯಬಹುದು.

ಇದನ್ನೂ ಓದಿ : National Pension System | ನಿವೃತ್ತಿ ಬಳಿಕ ಸಿಗುತ್ತೆ ತಿಂಗಳಿಗೆ 70 ಸಾವಿರ ರೂ. ಪಿಂಚಣಿ

(Infinix Hot 20 5G sale starts from today. Know the price and specifications)

Comments are closed.