nannarasi radhe serial : ಸಧ್ಯ ಕಿರುತೆರೆ ಲೋಕದಲ್ಲಿ ಸಾಲು ಸಾಲು ಹಿಟ್ ಧಾರವಾಹಿಗಳು ಪ್ರಸಾರವಾಗುತ್ತಿದೆ. ಇದರಲ್ಲಿ ಒಂದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನನ್ನರಸಿ ರಾಧೆ ಧಾರವಾಹಿ. ಇಷ್ಟು ದಿನಗಳ ಕಾಲ ಅಗಸ್ತ್ಯನ ಅಮ್ಮನ ಹುಡುಕಾಟದ ಕತೆಯನ್ನು ತೋರಿಸುತ್ತಿದ್ದ ಈ ಧಾರವಾಹಿಯಲ್ಲೀಗ ಅಗಸ್ತ್ಯನ ತಂಗಿ ಎಂಟ್ರಿಯಾಗಿದ್ದು ದಿನಕ್ಕೊಂದು ಟ್ವಿಸ್ಟ್ಗಳನ್ನು ನೀಡುವ ಮೂಲಕ ಪ್ರೇಕ್ಷಕರಿಗೆ ಸಖತ್ ಥ್ರಿಲ್ ಕೊಡ್ತಿದೆ.

ಜೈಲಿನಲ್ಲಿರುವ ಇಂದ್ರಾಣಿ ಅಲ್ಲಿಂದ ಹೊರ ಬರೋಕೆ ಅಶ್ವಿನಿಯನ್ನು ಹೇಗೆ ಬಳಸಿಕೊಳ್ತಾಳೆ..? ಅಶ್ವಿನಿ ಅಸಲಿ ಮುಖವೇನು..? ಇಂಚರಾ ಇವೆಲ್ಲವನ್ನೂ ಹೇಗೆ ಕಂಡು ಹಿಡೀತಾಳೆ..? ಹೀಗೆ ಸಾಕಷ್ಟು ಆಯಾಮಗಳಲ್ಲಿ ಈ ಎಪಿಸೋಡ್ಗಳು ಸಾಗುತ್ತಿದೆ. ಈ ಧಾರವಾಹಿಯಲ್ಲಿ ಅಗಸ್ತ್ಯ ಹಾಗೂ ಇಂಚರ ಪಾತ್ರದಲ್ಲಿ ನಟಿಸುತ್ತಿರುವ ಅಭಿನವ್ ಹಾಗೂ ಕೌಸ್ತುಭಾ ಮಣಿ ಅಭಿಮಾನಿಗಳ ಪಾಲಿನ ಫೇವರಿಟ್ ಕಪಲ್ ಎನಿಸಿದ್ದಾರೆ.

ಅಂದಹಾಗೆ ನಟಿ ಕೌಸ್ತುಭಾ ಮಣಿ ಪಾಲಿಗೆ ಇದು ಮೊದಲ ಧಾರವಾಹಿ. ಮೊದಲ ಧಾರವಾಹಿಯಲ್ಲಿಯೇ ಅಭಿಮಾನಿ ಬಳಗವನ್ನು ಸಂಪಾದಿಸುವಲ್ಲಿ ಕೌಸ್ತುಭಾ ಮಣಿ ಯಶಸ್ವಿಯಾಗಿದ್ದಾರೆ. ಇಂಚರ ಹಾಗೂ ಅಗಸ್ತ್ಯನ ಮುದ್ದಾದ ಜಗಳ, ಇಂಚರಾ ತುಂಟತನದಿಂದಾಗಿ ಈ ಧಾರವಾಹಿಯಲ್ಲಿ ಇಂಚರಾ ಪಾತ್ರಕ್ಕೆ ಅಪಾರ ಅಭಿಮಾನ ಬಳಗಿವೆ. ಕೌಸ್ತುಭಾ ಮಣಿ ಮೂಲತಃ ಅಯ್ಯಂಗಾರ್ ಕುಟುಂಬಕ್ಕೆ ಸೇರಿದ್ದು ಬೆಂಗಳೂರಿನ ಬಸವನಗುಡಿಯಲ್ಲಿ ವಾಸವಿದ್ದಾರೆ. ಕೌಸ್ತುಭಾ ಮಣಿ ಈ ಧಾರವಾಹಿಯಲ್ಲಿ ನಟಿಸುವುದಕ್ಕೂ ಮುನ್ನ ಒಂದೂವರೆ ವರ್ಷಗಳ ಕಾಲ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡಿದ್ದರು.

ಫೋಟೋಶೂಟ್ ಒಂದರಲ್ಲಿ ಸ್ಯಾಂಡಲ್ವುಡ್ ನಟಿ ಮಾನ್ವಿತಾ ಹರೀಶ್ ಜೊತೆ ಪರಿಚಯ ಮಾಡಿಕೊಂಡ ಕೌಸ್ತುಭಾ ಮಣಿಗೆ ಬಳಿಕ ಮಾನ್ವಿಯಾ ಹೀಗೆ ಧಾರವಾಹಿಗೆ ಆಡಿಷನ್ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಆಡಿಷನ್ನಲ್ಲಿ ಆಯ್ಕೆಯಾದ ಕೌಸ್ತುಭಾ ಕಿರುತೆರೆಯಲ್ಲಿ ತಮ್ಮ ವೃತ್ತಿ ಕ್ಷೇತ್ರವನ್ನು ಆರಂಭಿಸಿದರು. ಸಧ್ಯ ಅವರು ರಾಮಚಾರಿ 2.0 ಸಿನಿಮಾದ ನಾಯಕಿಯಾಗಿಯೂ ಆಯ್ಕೆಯಾಗಿದ್ದು ಈ ಸಿನಿಮಾದ ಶೂಟಿಂಗ್ನಲ್ಲಿಯೂ ಬ್ಯುಸಿಯಾಗಿದ್ದಾರೆ.
ಇದನ್ನು ಓದಿ : raja – rani : ಮತ್ತೆ ಶುರುವಾಗ್ತಿದೆ ರಾಜಾ-ರಾಣಿ ರಿಯಾಲಿಟಿ ಶೋ: ಸ್ಪರ್ಧಿಗಳು ಯಾರು, ಈ ಸೀಸನ್ನ ವಿಶೇಷತೆಯೇನು ಇಲ್ಲಿದೆ ಮಾಹಿತಿ
ಇದನ್ನೂ ಓದಿ : boycott laal singh chaddha : ಆಮಿರ್ ಖಾನ್-ಕರೀನಾ ಕಪೂರ್ಗೆ ಹೊಸ ಸಂಕಷ್ಟ: ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಹಿಷ್ಕಾರಕ್ಕೆ ಆಗ್ರಹ
introduction about nannarasi radhe serial lead role kaustubha mani