Kannadathi serial : ಕನ್ನಡತಿ ಧಾರವಾಹಿಯ ಬಿಂದು ಪಾತ್ರದಲ್ಲಿ ನಟಿಸುತ್ತಿರುವ ನಟಿಯ ರಿಯಲ್​ ಲೈಫ್​ ಕಹಾನಿ ಹೀಗಿದೆ

Kannadathi serial : ಕಲರ್ಸ್​ ಕನ್ನಡದ ಧಾರವಾಹಿಗಳು ಎಂದಾಕ್ಷಣ ನೆನಪಾಗುವ ಧಾರವಾಹಿಗಳಲ್ಲಿ ಕನ್ನಡತಿ ಕೂಡ ಒಂದು. ಅಪ್ಪಟ ಕನ್ನಡದಲ್ಲಿಯೇ ಮಾತನಾಡುವ ಭುವಿ ಪಾತ್ರದ ಮೂಲಕ ಈ ಧಾರವಾಹಿ ವೀಕ್ಷಕರಿಗೆ ಹೆಚ್ಚು ಇಷ್ಟವಾಗಿದೆ. ಹರ್ಷ -ಭುವಿಯ ಲವ್​ ಸ್ಟೋರಿ, ಸಾನಿಯಾಳ ಸೇಡು, ವರೂಧಿನಿ ನೋವು , ಅಮ್ಮಮ್ಮ ಆತಂಕ ಹೀಗೆ ಸಾಕಷ್ಟು ಕೋನಗಳಲ್ಲಿ ಈ ಧಾರವಾಹಿಯ ಕತೆಯನ್ನು ಹೆಣೆಯುತ್ತಾ ಹೋಗಲಾಗ್ತಿದೆ. ಪ್ರಸ್ತುತ ಧಾರವಾಹಿಯಲ್ಲಿ ಭುವಿ ಹಾಗೂ ಹರ್ಷ ಮದುವೆ ಸಮೀಪಿಸುತ್ತಿದ್ದು ಈ ಕುರಿತು ಎಪಿಸೋಡ್​ಗಳು ಸಾಗುತ್ತಿದೆ.


ಈ ಧಾರವಾಹಿಯಲ್ಲಿ ಕೇವಲ ಮುಖ್ಯ ಪಾತ್ರಗಳು ಮಾತ್ರವಲ್ಲದೇ ಇನ್ನಿತರ ಪಾತ್ರಗಳು ಕೂಡ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಧಾರವಾಹಿಯಲ್ಲಿ ಭುವಿ ತಂಗಿ ಬಿಂದು ಪಾತ್ರ ಕೂಡ ಸಖತ್​ ಬಬ್ಲಿಯಾಗಿದೆ. ಸದಾ ಅಕ್ಕನನ್ನು ರೇಗಿಸುತ್ತಾ ಮಲತಾಯಿ ಮಗಳಾದರೂ ಅಕ್ಕನ ಮೇಲೆ ಜೀವವನ್ನೇ ಇಟ್ಟಿರುವ ಈ ಪಾತ್ರದಲ್ಲಿ ಮೋಹಿರ ಆಚಾರ್ಯ ನಟಿಸುತ್ತಿದ್ದಾರೆ.


ಬಿಂದು ಪಾತ್ರದ ಮೂಲಕ ಮನೆ ಮಾತಾಗಿರುವ ನಟಿ ಮೋಹಿರಾ ಆಚಾರ್ಯ ಮಲೆನಾಡಿನ ಸುಂದರಿ ಎಂದರೆ ತಪ್ಪಾಗಲಾರದು. ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿದ ಬಿಂದು ಬೆಳೆದಿದ್ದು ಹಾಗೂ ಶಿಕ್ಷಣವನ್ನು ಪೂರೈಸಿದ್ದು ಬೆಂಗಳೂರಿನಲ್ಲಿ. ನೃತ್ಯ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದುಕೊಂಡಿದ್ದ ಮೋಹಿರಾರನ್ನು ಕೈ ಬೀಸಿ ಕರೆದಿದ್ದು ನಟನಾ ಕ್ಷೇತ್ರ. ಇಂಜಿನಿಯರಿಂಗ್​ ಕೊನೆಯ ವರ್ಷದಲ್ಲಿದ್ದಾಗ ಧಾರವಾಹಿಯಲ್ಲಿ ನಟಿಸುವ ಸದಾವಕಾಶ ಮೋಹಿರಾಗೆ ಒಲಿದು ಬಂದಿತ್ತು .


ಸ್ಟಾರ್​ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಪ್ರೇಮಲೋಕ ಎಂಬ ಧಾರವಾಹಿಯ ಮೂಲಕ ಮೋಹಿರಾ ಆಚಾರ್ಯ ಕಿರುತೆರೆಗೆ ಎಂಟ್ರಿ ನೀಡಿದ್ದಾರೆ. ಮೊದಲ ಬಾರಿಗೆ ನೆಗೆಟಿವ್​ ಪಾತ್ರಕ್ಕೆ ಮೋಹಿರಾ ಬಣ್ಣ ಹಚ್ಚಿದ್ದರು . ಇದಾದ ಬಳಿಕ ಕನ್ನಡತಿ ಧಾರವಾಹಿಯಲ್ಲಿ ನಟಿಸುವ ಅವಕಾಶ ಮೋಹಿರಾಗೆ ಒಲಿದು ಬಂತು. ಧಾರವಾಹಿಯ ನಾಯಕಿಯ ತಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಿಂದು ಕನ್ನಡತಿ ಅಭಿಮಾನಿಗಳ ಪಾಲಿಗೆ ಫೇವರಿಟ್​ ಎನಿಸಿದ್ದಾರೆ.
ಕನ್ನಡತಿ ಧಾರವಾಹಿ ನನ್ನ ನಟನಾ ವೃತ್ತಿ ಜೀವನದ ಪಾಲಿಗೆ ಹೊಸದೊಂದು ಮೈಲಿಗಲ್ಲು ಅಂತಾರೆ ನಟಿ ಮೋಹಿರಾ ಆಚಾರ್ಯ. ಕನ್ನಡತಿ ಧಾರವಾಹಿ ಕನ್ನಡ ಕಿರುತೆರೆ ಲೋಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಈ ಧಾರವಾಹಿಯಲ್ಲಿ ನಟಿಸುವ ಮೂಲಕ ನಾನು ಜನತೆಗೆ ಇನ್ನಷ್ಟು ಹತ್ತಿರವಾಗಿದ್ದೇನೆ. ನನಗೆ ಹೊರಗಡೆ ಜನರು ಬಿಂದು ಅಂತಲೇ ಕರೆಯುತ್ತಿದ್ದಾರೆ. ಇದನ್ನೆಲ್ಲ ನೋಡುವಾಗ ನನಗೆ ಹೆಮ್ಮೆ ಎನಿಸುತ್ತದೆ ಎಂದು ತಮ್ಮ ಖುಷಿಯನ್ನು ಹಂಚಿಕೊಂಡರು.


ಇನ್ನೊಂದು ವಿಶೇಷ ಅಂದರೆ ನಟಿ ಮೋಹಿರಾ ಆಚಾರ್ಯಗೆ ತೆಲುಗು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಸದಾವಕಾಶ ಕೂಡಿ ಬಂದಿದೆ. ಸದ್ಯ ಈ ಸಿನಿಮಾದ ಶೂಟಿಂಗ್​​ನಲ್ಲಿ ಮೋಹಿರಾ ಬ್ಯುಸಿಯಾಗಿದ್ದಾರೆ. ತೆಲುಗು ಸಿನಿಮಾ ಇಂಡಸ್ಟ್ರಿಗೆ ಕಾಲಿಡುವ ಮೂಲಕ ನಟಿ ಮೋಹಿರಾ ಕರ್ನಾಟಕ ಮಾತ್ರವಲ್ಲದೇ ಪರ ರಾಜ್ಯಗಳಲ್ಲಿಯೂ ತಮ್ಮ ಅಭಿಮಾನಿಗಳ ಬಳಗವನ್ನು ಹೆಚ್ಚು ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಇದನ್ನು ಓದಿ : dancing champion winner : ಡ್ಯಾನ್ಸಿಂಗ್​ ಚಾಂಪಿಯನ್​ ವಿಜೇತರಾಗಿ ಹೊರಹೊಮ್ಮಿದ ಕೆಜಿಎಫ್​ ಖ್ಯಾತಿಯ ಅನ್ಮೋಲ್​ – ಆದಿತ್ಯ

ಇದನ್ನೂ ಓದಿ : raja – rani : ಮತ್ತೆ ಶುರುವಾಗ್ತಿದೆ ರಾಜಾ-ರಾಣಿ ರಿಯಾಲಿಟಿ ಶೋ: ಸ್ಪರ್ಧಿಗಳು ಯಾರು, ಈ ಸೀಸನ್​ನ ವಿಶೇಷತೆಯೇನು ಇಲ್ಲಿದೆ ಮಾಹಿತಿ

Kannadathi serial bindu real life introduction

Comments are closed.