ಸೋಮವಾರ, ಜೂನ್ 16, 2025
HomeCinemaನಟಿ ಸಮಂತಾಗೆ IVIG ಟ್ರೀಟ್‌ಮೆಂಟ್ : ಕೊನೆಗೂ ಹೆಲ್ತ್‌ ಅಪ್‌ಡೇಟ್‌ ನೀಡಿದ ಸ್ಯಾಮ್

ನಟಿ ಸಮಂತಾಗೆ IVIG ಟ್ರೀಟ್‌ಮೆಂಟ್ : ಕೊನೆಗೂ ಹೆಲ್ತ್‌ ಅಪ್‌ಡೇಟ್‌ ನೀಡಿದ ಸ್ಯಾಮ್

- Advertisement -

ಹಲವು ದಿನಗಳಿಂದ ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾಗೆ (Actress Samantha) ಚಿಕಿತ್ಸೆ ಮುಂದುವರೆದಿದೆ. ತಮ್ಮ ಆರೋಗ್ಯದ ಬಗ್ಗೆ ನಟಿ ಸಮಂತಾ ಸ್ಪಂದಿಸಿದ್ದಾರೆ. ತಮ್ಮ ಅಭಿಮಾನಿಗಳಿಗೆ ಸ್ಯಾಮ್ ಹೆಲ್ತ್ ಅಪ್‌ಡೇಟ್ ನೀಡಿದ್ದಾರೆ. ಸದ್ಯ ಮನೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಅದರಂತೆ ತಮ್ಮ ಅಭಿಮಾನಿಗಳಿಗೆ ತಾವು ಚೇತರಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಹಾಗೆಯೇ ನಟಿ ಸಮಂತಾ ಚಿಕಿತ್ಸೆಯ ಭಾಗವಾಗಿ ಪ್ರತಿದಿನ ಜಿಮ್‌ನಲ್ಲಿ ಕಸರತ್ತು ಮಾಡಿ ದೇಹ ದಂಡಿಸುತ್ತಿದ್ದಾರೆ. ಸಮಂತಾ ಮಯೋಸೈಟಿಸ್ ಸಮಸ್ಯೆಗೆ ನುರಿತ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿ ತಿಂಗಳಿನಂತೆ ಐವಿಐಜಿ (Intravenous Immunoglobulin) ಇಂಜೆಕ್ಷನ್ ಪಾರ್ಟಿ ನಡೆದಿದೆ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. ಅದನ್ನು ಫೋಟೊ ಸಮೇತ ಸಮಂತಾ ಹಂಚಿಕೊಂಡಿದ್ದಾರೆ. ಇದಕ್ಕಾಗಿ ಎರಡು ಮೂರು ಗಂಟೆಗಳ ಕಾಲ ಕಷ್ಟ ಪಡುತ್ತಿದ್ದಾರೆ. ಚಿಕಿತ್ಸೆ ವೇಳೆ ಸ್ಯಾಮ್ ಜೊತೆಗೆ ಸ್ನೇಹಿತರಾದ ರಾಹುಲ್ ರವೀಂದ್ರ, ನಂದಿನಿ ರೆಡ್ಡಿ ಕೂಡ ಇದ್ದಾರೆ. ಜೊತೆಗೆ “ನ್ಯೂ ನಾರ್ಮಲ್” ಎಂದು ಬರೆದು ಚೇತರಿಸಿಕೊಳ್ಳುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಸಮಂತಾ ಜಿಮ್‌ ಕಸರತ್ತು ಮುಂದುವರೆಸಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. ಹೆಚ್ಚು ಭಾರ ಎತ್ತುವ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಆರೋಗ್ಯದ ವಿಚಾರದಲ್ಲಿ ಬೇಕಾದ ಮುಂಜಾಗ್ರತೆ ತೆಗೆದುಕೊಳ್ಳುತ್ತಿದ್ದಾರೆ. ಮಯೋಸೈಟಿಸ್‌ಗಾಗಿ ಐವಿಐಜಿ ಇಂಜೆಕ್ಷನ್ ತೆಗೆದುಕೊಂಡಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಈ ಥೆರಪಿ ಚಿಕಿತ್ಸೆ ನೀಡಲಾಗುತ್ತದೆ. “ಕಷ್ಟಪಡಬೇಕು, ಕಷ್ಟ ಅಂತ ಗೊತ್ತಿದ್ದರೂ ಬಿಡದೇ ಕಷ್ಟಪಟ್ಟರೇ ಫಲಿತಾಂಶ ಸಿಗುತ್ತದೆ” ಎಂದು ಈ ಹಿಂದೆ ನಟಿ ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ : ನಟ ದರ್ಶನ್ ಟ್ಯಾಟೂ ಬಗ್ಗೆ ಸ್ಯಾಂಡಲ್‌ವುಡ್ ತಾರೆಯರ ಪ್ರತಿಕ್ರಿಯೆ ಏನು ಗೊತ್ತಾ ?

ಇದನ್ನೂ ಓದಿ : “ಪುಷ್ಪ 2” ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಹೆಚ್ಚು ಪ್ರಾಶಸ್ತ್ಯ ಇಲ್ಲ ಕಾರಣವೇನು ಗೊತ್ತಾ ?

ಇದನ್ನೂ ಓದಿ : ಎನ್‌ಟಿಆರ್‌ ಕುಟುಂಬಕ್ಕೆ ಮತ್ತೊಂದು ಆಘಾತ : ನಂದಮೂರಿ ರಾಮಕೃಷ್ಣ ಕಾರು ಅಪಘಾತ

ಅಭಿಮಾನಿಗಳು ಸಮಂತಾ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲಿ ನಿಮಗೆ ಮತ್ತಷ್ಟು ಬಲ ಸಿಗಲಿ. ಬೇಗ ಮೊದಲಿನಂತಾಗಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಸಮಂತಾ ವಿಜಯ್ ದೇವರಕೊಂಡ ಜೊತೆ ‘ಖುಷಿ’ ಸಿನಿಮಾದಲ್ಲಿ ನಟಿಸಬೇಕಿದೆ. ‘ಸಿಟಾಡೆಲ್‌’ ಎನ್ನುವ ವೆಬ್‌ಸೀರಿಸ್‌ಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮೊದಲು ಈ ವೆಬ್‌ ಸೀರಿಸ್‌ ಶುರುವಾಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಈ ನಟನ ಜೊತೆ ಇನ್ಮುಂದೆ ನಟಿಸಲಾರೆ ಎಂದ ನಯನತಾರಾ

ಇದನ್ನೂ ಓದಿ : Urvashi Rautela : ಕಾಂತಾರ 2 ಸಿನಿಮಾದಲ್ಲಿ ಐರಾವತ ನಟಿ : ವೈರಲ್ ಆಯ್ತು ರಿಷಬ್ ಜೊತೆಗಿನ ಪೋಟೋ

IVIG treatment for actress Samantha : Finally Sam gives a health update

RELATED ARTICLES

Most Popular