Maha Shivaratri 2023: ರೈಲ್ವೇ ಇಲಾಖೆಯಿಂದ 12 ಶಿವನ ದೇವಾಲಯಗಳಿಗೆ ಟೂರ್ ಪ್ಯಾಕೇಜ್

ನವದೆಹಲಿ: (Maha Shivaratri 2023) ಭಾರತದ ಅತ್ಯಂತ ಪೂಜ್ಯ ದೇವರಲ್ಲಿ ಒಬ್ಬನಾದ ಶಿವನ ದೇವಾಲಯಗಳು ಸಾಕಷ್ಟಿವೆ. ಅಲ್ಲದೇ ೧೨ ಶಿವ ಜ್ಯೋತಿರ್ಲಿಂಗಗಳನ್ನು ಹೊಂದಿದ ದೇವಾಲಯಗಳು ಅತ್ಯಂತ್‌ ಪ್ರಸಿದ್ದ ದೇವಾಲಯಗಳಾಗಿವೆ. ಶಿವನ ಭಕ್ತರು ಈ ಹನ್ನೆರಡು ದೇವಾಲಯಗಳನ್ನು ಪವಿತ್ರ ಸ್ಥಳವೆಂದು ಭಾವಿಸುತ್ತಾರೆ. ಇನ್ನೇನೂ ಮಹಾಶಿವರಾತ್ರಿ ಕೂಡ ಸಮೀಪಿಸುತ್ತಿದೆ. ಶಿವನನ್ನು ಪೂಜಿಸುವವರಿಗೆ ಇದು ಪ್ರಮುಖವಾದ ದಿನವಾಗಿದೆ. ಶಿವರಾತ್ರಿ ದಿನದಂದು ಭಾರತೀಯ ರೈಲ್ವೇ ಇಲಾಖೆ ಈ ಹನ್ನೆರಡು ಜ್ಯೋತಿರ್ಲಿಂಗಗಳ ದೇವಸ್ಥಾನಗಳಿಗೆ ವಿಶೇಷ ಪ್ಯಾಕೇಜ್‌ ನಿಗದಿಪಡಿಸಿದೆ.

ಇಂಡಿಯನ್‌ ರೈಲ್ವೇ ಕ್ಯಾಟರಿಂಗ್‌ ಟೂರಿಸಂ ಕಾರ್ಪೊರೇಷನ್‌ ಜ್ಯೋತಿರ್ಲಿಂಗಗಳನ್ನು ಭೇಟಿ ಮಾಡಲು ಬಯಸುವ ಯಾತ್ರಾರ್ಥಿಗಳಿಗಾಗಿ ವಿಶೇಷವಾದ ಪ್ಯಾಕೇಜ್‌ ಪ್ರವಾಸವನ್ನು ರಚಿಸಿದೆ. ಐಆರ್‌ಸಿಟಿಸಿ ಜ್ಯೋತಿರ್ಲಿಂಗ ಯಾತ್ರಾ ಪ್ರವಾಸ ಪ್ಯಾಕೇಜ್‌ ನಲ್ಲಿ ಸೋಮನಾಥ ದೇವಾಲಯ, ಕಾಶಿ ವಿಶ್ವನಾಥ, ಮಹಾಕಾಳೇಶ್ವರ, ಮಲ್ಲಿಕಾರ್ಜುನ, ಓಂಕಾರೇಶ್ವರ, ಕೇದಾರನಾಥ, ಭೀಮಾಶಂಕರ, ಬೈದ್ಯನಾಥ, ರಾಮನಾಥಸ್ವಾಮಿ, ನಾಗೇಶ್ವರ, ತ್ರಯಂಬಕೇಶ್ವರ ಹಾಗೂ ಗಣೇಶ್ವರ ಇದರ ಜೊತೆಗೆ ಸೋಮನಾಥ, ನಾಗೇಶ್ವರ, ಭೇಟ್‌ ದ್ವಾರಕಾ ಮತ್ತು ಶಿವರಾಜಪುರ ಬೀಚ್‌ ನಂತಹ ಜನಪ್ರಿಯ ಯಾತ್ರಾ ಸ್ಥಳಗಳನ್ನು ಸೇರಿಸಲಾಗಿದೆ.

ಈ ಪ್ಯಾಕೇಜ್‌ ನಲ್ಲಿ ಟಿಕೆಟ್‌ ಬುಕ್‌ ಮಾಡಲು ಬಯಸುವವರು ಐಆರ್‌ಸಿಟಿಸಿ ಟೂರಿಸ್ಟ್‌ ಫೆಸಿಲಿಟೇಶನ್‌ ಸೆಂಟರ್‌, ವಲಯ ಕಚೇರಿಗಳು ಮತ್ತು ಪ್ರಾದೇಶಿಕ ಅಧಿಕಾರಿಗಳ ಮೂಲಕವೂ ಬುಕ್ಕಿಂಗ್‌ ಮಾಡಬಹುದು. ಇನ್ನೂ ಐಆರ್‌ಸಿಟಿಸಿ ವೆಬ್‌ ಸೈಟ್‌ ನಲ್ಲಿ ಕೂಡ ರೈಲು ಟಿಕೆಟ್‌ ಬುಕ್ಕಿಂಗ್‌ ಲಭ್ಯವಿದೆ.

ಮಹಾಶಿವರಾತ್ರಿ ನವ ಜ್ಯೋತಿರ್ಲಿಂಗ ಯಾತ್ರಾ ದಿನಾಂಕ: ಮಾರ್ಚ್‌ 08 ರಿಂದ ಮಾರ್ಚ್‌ 20
ಒಟ್ಟು ಪ್ರವಾಸ ದಿನ: 12 ರಾತ್ರಿಗಳು
ಪ್ಯಾಕೇಜ್‌ ಕೋಡ್:‌ SZBD384A
ಮೂಲ: ಮಧುರೈ
ಬೋರ್ಡಿಂಗ್‌ ಪಾಯಿಂಟ್:‌ ತಿರುನೋವೇಲಿ, ವುರುಡುನಗರ, ಮಧುರೈ, ದಿಂಡಿಗಲ್‌, ಕರೂರ್‌, ಈರೋಡ್‌, ಸೇಲಂ, ವಾರಂಗಲ್‌, ವಿಜಯವಾಡ, ಜೋಲಾರ್ಪೆಟ್ಟೈ, ಕಟ್ಪಾಡಿ, ಪೆರಂಬೂರು, ನೆಲ್ಲೂರು. ಈ ಸ್ಥಳಗಳಲ್ಲಿ ಮಾಹಾಕಾಳೇಶ್ವರ, ಓಕಾರೇಶ್ವರ, ಸೋಮಂತ್‌, ತ್ರಯಂಬಕೇಶ್ವರ, ಭೀಮಶಂಕರ್‌, ಗುರುನೇಶ್ವರ, ಆಯುಂಧ್‌, ನಾಗನಾಥ್‌, ಪರ್ಲಿ ವೈಜಿನಾಥ್‌, ಮಲ್ಲಿಕಾರ್ಜುನ ಸ್ವಾಮಿ ಸೇರಿವೆ.
ವೆಚ್ಚ: 15, 350 ರೂ.

ಇದನ್ನೂ ಓದಿ : Modi tight schedule: ಪ್ರಧಾನಿ ಮೋದಿ ದಿನಕ್ಕೆ ಎಷ್ಟು ಕಿಮೀ ಪ್ರಯಾಣ, ಎಷ್ಟು ಸಭೆಯಲ್ಲಿ ಪಾಲ್ಗೋಳ್ಳತ್ತಾರೆ ಗೊತ್ತಾ ?

ವಿವಿಧ ನಿಲ್ದಾಣಗಳಲ್ಲಿ ರೈಲು ಆಗಮನ ಹಾಗೂ ನಿರ್ಗಮನದ ಸಮಯವು ತಾತ್ಕಾಲಿಕವಾಗಿದೆ. ಈ ಬಗ್ಗೆ ವಿವರಗಳ ಮಾಹಿತಿ irctcportal.in ನಲ್ಲಿ ಲಭ್ಯವಿದೆ.

Maha Shivaratri 2023: Tour Package to 12 Shiva Temples by Railway Department

Comments are closed.