Jacqueline Fernandez :ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪಪಟ್ಟಿಯನ್ನು ಸಲ್ಲಿಸಿದ್ದು ಇದರಲ್ಲಿ ವಂಚಕ ಸುಕೇಶ್ ಚಂದ್ರಶೇಖರ್ ಭೂತಕಾಲವನ್ನು ಪ್ರಜ್ಞಾಪೂರ್ವಕವಾಗಿ ಕಡೆಗಣಿಸಿ ಆತನೊಂದಿಗೆ ಹಣಕಾಸಿನ ವ್ಯವಹಾರವನ್ನು ಮುಂದುವರಿಸಿದ್ದರು. ಕೇವಲ ಜಾಕ್ವೆಲಿನ್ ಮಾತ್ರವಲ್ಲದೇ ಆಕೆಯ ಕುಟುಂಬಸ್ಥರು ಹಾಗೂ ಸ್ನೇಹಿತರು ಕೂಡ ಸುಕೇಶ್ರಿಂದ ಆರ್ಥಿಕ ಲಾಭವನ್ನು ಪಡೆದಿದ್ದಾರೆ. ಹಣದ ಮೋಹದಿಂದ ಸುಕೇಶ್ರ ಎಲ್ಲಾ ಕ್ರಿಮಿನಲ್ ಹಿಸ್ಟರಿಯನ್ನು ಜಾಕ್ವೆಲಿನ್ ಕಡೆಗಣಿಸಿದ್ದರು ಎಂದು ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ.
ಇದಲ್ಲದೇ ಆರೋಪಿ ಜಾಕ್ವೆಲಿನ್ ಫರ್ನಾಂಡಿಸ್ ತನಗೆ ಮತ್ತು ತನ್ನ ಸಂಬಂಧಿಗಳಿಗೆ ಉಡುಗೊರೆಗಳನ್ನು ಸ್ವೀಕರಿಸುವ ಬಗ್ಗೆ ನಿರಂತರವಾಗಿ ತನ್ನ ನಿಲುವುಗಳನ್ನು ಬದಲಾಯಿಸುತ್ತಾ ಬಂದಿದ್ದಾರೆ. ಸಾಕ್ಷ್ಯಾಧಾರಗಳನ್ನು ಪ್ರಸ್ತುತ ಪಡಿಸಿದ ನಂತರವೇ ಅವರು ತನ್ನ ವಿವರವನ್ನು ಹಂಚಿಕೊಂಡಿದ್ದಾರೆ. ಆದರೆ ಸುಕೇಶ್ ತನಗಾಗಿ ಖರೀದಿಸಿದ್ದ ಕೆಲವು ಆಸ್ತಿಗಳನ್ನು ಆಕೆ ನಿರಾಕರಿಸಿದ್ದಳು ಎಂಬುದನ್ನೂ ಸಹ ಇಡಿ ಹೇಳಿದೆ.
ಇಡಿ ಸಲ್ಲಿಸಿರುವ ಜಾರ್ಜ್ಶೀಟ್ನಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ನೇರವಾಗಿ ಅಥವಾ ಪರೋಕ್ಷವಾಗಿ ಅಪರಾಧಿಯ ಆದಾಯದಲ್ಲಿ ಪಾಲನ್ನು ಹೊಂದಿದ್ದಾರೆ. ಅಪರಾಧದ ಮೂಲಕ ಸುಕೇಶ್ ಗಳಿಸಿದ್ದ ಭಾಗಶಃ ಆದಾಯವನ್ನು ಸ್ವಾದೀನ ಪಡಿಸುಕೊಂಡಿದ್ದಾರೆ. ಅಲ್ಲದೇ ಇದೇ ವಂಚನೆಯ ಹಣದಿಂದ ಭಾರತ ಹಾಗೂ ವಿದೇಶದ ಉಡುಗೊರೆಗಳನ್ನು ತನ್ನ ಹಾಗೂ ತನ್ನ ಕುಟುಂಬಸ್ಥರಿಗೆ ಪಡೆದುಕೊಂಡಿದ್ದಾರೆ ಎನ್ನುವುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ತಿಳಿದು ಬಂದಿದೆ.
ಪಿಎಮ್‌ಎಲ್‌ಎ, 2002 ರ ಸೆಕ್ಷನ್ 3 ಆರೋಪಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಇಲ್ಲಿ ಮೊದಲು ಚರ್ಚಿಸಿದಂತೆ ಪಿಒಸಿಗೆ ಸಂಬಂಧಿಸಿದ ಪ್ರಕ್ರಿಯೆ ಮತ್ತು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಆ ಮೂಲಕ ಅಪರಾಧದ ಆದಾಯವನ್ನು ಉದ್ದೇಶಪೂರ್ವಕವಾಗಿ ಬಳಸುವುದಕ್ಕಾಗಿ ಮತ್ತು ಹೊಂದಿದ್ದಕ್ಕಾಗಿ ಪಿಎಂಎಲ್‌ಎಯ ಸೆಕ್ಷನ್ 3 ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಮನಿ ಲಾಂಡರಿಂಗ್ ಅಪರಾಧವನ್ನು ಮಾಡಿದ್ದಾರೆ ಎಂದು ಇಡಿ ಹೇಳಿದೆ.
ಇದನ್ನು ಓದಿ : Zomato : ಹೈದರಾಬಾದ್ನಿಂದ ಬಿರಿಯಾನಿ, ಮೈಸೂರಿನಿಂದ ಮೈಸೂರುಪಾಕ್ ತಿನ್ನಬೇಕೆಂದು ಆಸೆಯಾಗ್ತಿದ್ಯಾ :ಜೊಮ್ಯಾಟೋದಲ್ಲಿದೆ ಪರಿಹಾರ
ಇದನ್ನೂ ಓದಿ : jothe jotheyali serial : ಜೊತೆ ಜೊತೆಯಲ್ಲಿ ಧಾರವಾಹಿಯಲ್ಲಿ ಮತ್ತೊಂದು ಟ್ವಿಸ್ಟ್ : ಆರ್ಯವರ್ಧನ್ ಪಾತ್ರಕ್ಕೆ ಬಿತ್ತು ಕತ್ತರಿ
Jacqueline Fernandez ‘consciously’ overlooked Sukesh Chandrasekhar’s criminal record, says ED