raping pregnant cow: ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರವೆಸಗಿ ವಿಕೃತಿ :ರಕ್ತಸ್ರಾವದಿಂದ ಜಾನುವಾರು ಸಾವು

ಪಶ್ಚಿಮ ಬಂಗಾಳ : raping pregnant cow : ದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆಯನ್ನು ಹೆಚ್ಚಿಸಬೇಕು ಅಂತಾ ಕಾನೂನಿನ ರಕ್ಷಣೆಯನ್ನು ಹೆಚ್ಚಿಸಲಾಗುತ್ತಲೇ ಇದೆ. ಕಠಿಣ ಕಾನೂನು ಕ್ರಮದ ಭಯದಿಂದಾರೂ ಸಹ ದುಷ್ಕರ್ಮಿಗಳು ಹೆಣ್ಣು ಮಕ್ಕಳ ಮೇಲೆ ಕೆಟ್ಟ ದೃಷ್ಟಿ ಹಾಕುವುದನ್ನು ನಿಲ್ಲಿಸಲು ಎಂಬುದು ಸರ್ಕಾರದ ಉದ್ದೇಶವಾಗಿದೆ. ಆದರೆ ಇತ್ತೀಚಿಗೆ ನಡೆಯುತ್ತಿರುವ ಕೆಲವು ಘಟನೆಗಳನ್ನು ನೋಡುತ್ತಿದ್ದಾರೆ ಈ ದೇಶದಲ್ಲಿ ಮಹಿಳೆಯರು , ಮಕ್ಕಳು ಮಾತ್ರವಲ್ಲದೇ ಪ್ರಾಣಿಗಳೂ ಸಹ ಅಪಾಯದಲ್ಲಿ ಇವೆಯಾ ಎಂಬ ಅನುಮಾನ ಕಾಡಲು ಶುರುವಾಗಿದೆ.

ಈ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತಹ ಘಟನೆಯೊಂದು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ನಮ್​ಖಾನಾ ಬ್ಲಾಕ್​​ನ ಉತ್ತರ ಚಂದನ್​ಪಿಡಿ ಪ್ರದೇಶದಲ್ಲಿ ಸಂಭವಿಸಿದೆ. ಇಲ್ಲಿ ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಅಡಿಯಲ್ಲಿ 29 ವರ್ಷದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಗರ್ಭಿಣಿ ಹಸುವಿನ ಮಾಲೀಕರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಪ್ರದ್ಯುತ್​​ ಭೂಯಾನನ್ನು ಬಂಧಿಸಿದ್ದಾರೆ.


ಸ್ಥಳೀಯರು ಹಾಗೂ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಉತ್ತರ ಚಂದನಪಿಡಿ ನಿವಾಸಿಯಾದ ಆರತಿ ಭೂಯಾ ಹಾಗೂ ಅವರ ಕುಟುಂಬವು ಪೊಲೀಸ್​ ಠಾಣೆಗೆ ತೆರಳಿ, ತಮ್ಮ ನೆರೆ ಮನೆಯವನಾದ ಪ್ರದ್ಯುತ್​​ ಭೂಯಾ ತಮ್ಮ ಮನೆಯ ಹಿಂದಿನ ದನದ ಕೊಟ್ಟಿಗೆಗೆ ನುಗ್ಗಿ ತಮ್ಮ ಹಸುವಿನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ. ಮಧ್ಯರಾತ್ರಿ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದು ಅತಿಯಾದ ರಕ್ತಸ್ರಾವದಿಂದ ಹಸು ಸಾವನ್ನಪ್ಪಿದೆ .


ಆರೋಪಿ ಪ್ರದ್ಯುತ್​ ವಿರುದ್ಧ, ಭಾರತೀಯ ದಂಡ ಸಂಹಿತೆ ಸೆಕ್ಷನ್​ 377 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ಕಾಕದ್ವೀಪ ಉಪವಿಭಾಗೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ


ಪ್ರದ್ಯುತ್​ ವಿರುದ್ಧ ಇದಲ್ಲದೇ ಇನ್ನೂ ಅನೇಕ ಆರೋಪಗಳಿವೆ. ಈತ ಈ ಹಿಂದೆ ಹೊಲಗಳಲ್ಲಿ ಮೇಕೆಗಳು, ವಾಹನಗಳು ಹಾಗೂ ತರಕಾರಿಗಳನ್ನು ಕದ್ದಿದ್ದ ಎಂದು ಚಂದನಪಿಂಡಿ ಗ್ರಾಮದ ನಿವಾಸಿಗಳು ಹೇಳಿದ್ದಾರೆ. ಈತನ ಅಮಾನವೀಯ ಕೃತ್ಯಕ್ಕೆ ತಕ್ಕ ಶಿಕ್ಷೆಯಾಗಲೇಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನು ಓದಿ : Sonia Gandhi : ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಾಯಿ ವಿಧಿವಶ

ಇದನ್ನೂ ಓದಿ : Zomato : ಹೈದರಾಬಾದ್​ನಿಂದ ಬಿರಿಯಾನಿ, ಮೈಸೂರಿನಿಂದ ಮೈಸೂರುಪಾಕ್​ ತಿನ್ನಬೇಕೆಂದು ಆಸೆಯಾಗ್ತಿದ್ಯಾ :ಜೊಮ್ಯಾಟೋದಲ್ಲಿದೆ ಪರಿಹಾರ

Bengal man arrested for raping pregnant cow, sent to jail
.

Comments are closed.