ಮಂಗಳವಾರ, ಏಪ್ರಿಲ್ 29, 2025
HomeCinemaJacqueline Fernandez Sukesh : ಶ್ರೀಲಂಕಾ ಬೆಡಗಿ ಮತ್ತು ಇಡಿ ವಂಚಕ : ತೆರೆಗೆ ಬರುತ್ತಾ...

Jacqueline Fernandez Sukesh : ಶ್ರೀಲಂಕಾ ಬೆಡಗಿ ಮತ್ತು ಇಡಿ ವಂಚಕ : ತೆರೆಗೆ ಬರುತ್ತಾ ಜಾಕ್ವಲಿನ್ ಫರ್ನಾಂಡಿಸ್ ಲೈಫ್ ಸ್ಟೋರಿ

- Advertisement -

ಇತ್ತೀಚಿಗೆ ದೇಶವನ್ನೇ ಬೆಚ್ಚಿಬೀಳುವಂತೆ ಮಾಡಿದ್ದು ವಂಚಕ ಸುಕೇಶ್ ಪ್ರಕರಣ. ಕೋಟ್ಯಾಂತರ ರೂಪಾಯಿ‌‌ ವಂಚನೆ, ಬಾಲಿವುಡ್ ನಟಿಮಣಿಯರ ಜೊತೆ ಸರಸ ಬಗೆ ದಷ್ಟು ಬಯಲಾಗುತ್ತಲೇ ಇದೆ ಈತನ ಕರ್ಮಕಾಂಡ. ಆದರೆ ಈ ಕಹಾನಿಯಲ್ಲಿ (Jacqueline Fernandez Sukesh ) ಇಂಟ್ರಸ್ಟಿಂಗ್ ಅನ್ನಿಸಿದ್ದು ಮಾದಕ ಚೆಲುವೆ, ಬಾಲಿವುಡ್ ಬೆಡಗಿ ಜಾಕ್ವಲಿನ್ ಫರ್ನಾಂಡಿಸ್ ಹೆಸರು. ಹೀಗಾಗಿ ಈ ಕತೆ ತೆರೆಮೇಲೆ ಸಿನಿಮಾ‌ ರೂಪದಲ್ಲಿ ಬಂದ್ರು ಅಚ್ಚರಿಯೇನಿಲ್ಲ.

ಇಡಿ ವಂಚಕ ಸುಕೇಶ್ ಗೆ ಬಲೆ ಬೀಸಿ ಹಿಡಿದುಹಾಕುತ್ತಿದ್ದಂತೆ ಒಂದೊಂದೆ ಬಾಲಿವುಡ್ ನಟಿಮಣಿಯರ ಅಸಲಿಯತ್ತು ಬಯಲಾಗತೊಡಗಿತು. ಅದರಲ್ಲಿ ಜಾಕ್ವಲಿನ್ ಫರ್ನಾಂಡಿಸ್ ಅಗ್ರಸ್ಥಾನದಲ್ಲಿದ್ದರು. ನಾನು ಮತ್ತು ಜಾಕ್ವಲಿನ್ ಪ್ರೀತಿಸುತ್ತಿದ್ದೇವು. ಅದಕ್ಕಾಗಿಯೇ ನಾನು ಆಕೆಗೆ ಬೆಲೆಬಾಳುವ ಗಿಫ್ಟ್ ನೀಡಿದ್ದೇ ಎಂದು ಸುಕೇಶ್ ಸತ್ಯ ಒಪ್ಪಿಕೊಂಡು ಬಿಟ್ಟ.

ಇದರ ಫಲವಾಗಿ ನಟಿ ಜಾಕ್ವಲಿನ್ ಫರ್ನಾಂಡಿಸ್ ಕೂಡ ಇಡಿ ಕಚೇರಿಗೆ ಅಲೆದಾಡುವಂತಾಗಿದೆ. ಇಡಿ ಜಾಕ್ವಲಿನ್ ಮೇಲೆ ಹದ್ದಿನ‌ ಕಣ್ಣಿಟ್ಟಿದ್ದು ದೇಶ ತೊರೆದು ಹೋಗುವುದಕ್ಕೆ‌ ನಿರ್ಬಂಧ ವಿಧಿಸಿದೆ. ಹೀಗಾಗಿ ನಟನೆ, ಮಾಡೆಲಿಂಗ್, ಐಟಂ ಸಾಂಗ್ ಎನ್ನುತ್ತ ಹಾರಾಡಿಕೊಂಡಿದ್ದ ಜಾಕ್ವಲಿನ್‌ಫರ್ನಾಂಡಿಸ್ ಈಗ ವಿಲ ವಿಲ ಒದ್ದಾಡುವಂತಾಗಿದೆ. ಆದರೆ ನಾನು ಸುಕೇಶ್ ಕೇವಲ ಸ್ನೇಹಿತರು. ಆತ ನನ್ನ ಸಹೋದರಿಗೆ ಸಹಾಯ ಮಾಡಿದ್ದ.‌ ನಮ್ಮ ನಡುವೆ ಮತ್ತೆನೂ ಇಲ್ಲ ಎನ್ನುತ್ತ ಇಡಿ ಹಿಡಿತದಿಂದ ಪಾರಾಗುವ ಸರ್ಕಸ್ ನಡೆಸಿದ್ದಾರೆ ಜಾಕ್ವಲಿನ್.

ಆದರೆ ಅಸಲಿ ಕಹಾನಿ ಇರೋದು ಇವರ ಲವ್ ಸ್ಟೋರಿ ಯಲ್ಲಿ.36 ವರ್ಷದ ಜಾಕ್ವಲಿನ್ ರನ್ನು 32 ವರ್ಷದ ಸುಕೇಶ್ ತನ್ನ ಅಕ್ರಮ ಆಸ್ತಿ ತೋರಿಸಿ ಪಟಾಯಿಸಿಕೊಂಡಿದ್ದ. ಮಾತ್ರವಲ್ಲ ಲವ್ವಿ ಡವ್ವಿ ಎಂದು ಊರೆಲ್ಲ ಓಡಾಡಿದ್ದಾರೆ. ವಾಚ್, ಬ್ರೆಸ್ಲೈಟ್, ದುಡ್ಡು ಕಾಸು ಎಲ್ಲವನ್ನು ಕೊಟ್ಟ ಸುಕೇಶ್ ಇನ್ನೇನು ಹಾಲಿನಂತ‌ ಬ್ಯೂಟಿ ನನ್ನದೇ ಎನ್ನುವಾಗ ಇಡಿ ಎಂಟ್ರಿ ಕೊಟ್ಟಿದ್ದು ಸುಕೇಶ್ ಜೈಲು ಸೇರಿದ್ದಾನೆ. ಈಗ ಯಾವ ಸಿನಿಮಾಗೂ ಕಡಿಮೆ ಇಲ್ಲದ ಈ ಸ್ಟೋರಿ ಮೇಲೆ ಬಾಲಿವುಡ್ ನಿರ್ದೇಶಕ, ನಿರ್ಮಾಪಕರ ಕಣ್ಣುಬಿದ್ದಿದ್ದು , ಈ ಸ್ಟೋರಿಯನ್ನು ಸಿನಿಮಾ‌ಮಾಡಲು ತೆರೆಮರೆಯಲ್ಲೇ ಸಿದ್ಧತೆಗಳು ನಡೆದಿವೆಯಂತೆ.

ಕೇವಲ ಜಾಕ್ವಲಿನ್ ಮಾತ್ರವಲ್ಲ ಬಾಲಿವುಡ್ ನ ನಂಬರ್ ಒನ್ ಐಟಂ ಸಾಂಗ್ ಡ್ಯಾನ್ಸರ್ ನೋರಾ ಪತೇಹಿ ಕೂಡ ಸುಕೇಶ್ ಜೊತೆ ನಂಟು‌ಹೊಂದಿದ್ದ ಕಾರಣಕ್ಕೆ ವಿಚಾರಣೆ ಎದುರಿಸಿದ್ದಾರೆ. ಬಾಲಿವುಡ್ ನಲ್ಲಿ ಕೆಲವರು ಸುಕೇಶ್ ಕತೆಯನ್ನು ವೆಬ್ ಸೀರಿಸ್ ಮಾಡಲು ಹೊರಟಿದ್ದರೇ ಇನ್ನು ಹಲವರು ಸಿನಿಮಾಗೆ ಈ ಕತೆ ಸೂಕ್ತ ಎನ್ನುತ್ತಿದ್ದಾರಂತೆ. ಒಟ್ಟಿನಲ್ಲಿ ಸುಕೇಶ್ ಮತ್ತು ಜಾಕ್ವಲಿನ್ ಕತ್ತಲು ಮತ್ತು ಬಣ್ಣದ ಲೋಕದ ನಂಟಿನ‌ಕತೆ ತೆರೆಗೆ ಬರೋದಂತು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಇದನ್ನೂ ಓದಿ : ಹೊಸವರ್ಷದಂದು ಶುಭಸುದ್ದಿ ಹಂಚಿಕೊಂಡ ಕಾಜಲ್​ ಅಗರ್ವಾಲ್​ ದಂಪತಿ

ಇದನ್ನೂ ಓದಿ : ಗಾಯ ಆರಲು ಏನೋ ಬೇಕೋ ಅದನ್ನು ಮಾಡೋಣ: ಹೊಸ ವರ್ಷಕ್ಕೆ ಸಮಂತಾ ಸಂದೇಶ

( Jacqueline Fernandez Sukesh relationship is new movie)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular