Uttar Pradesh Election 2022 Opinion Poll: ಉತ್ತರ ಪ್ರದೇಶದಲ್ಲಿ ಬಿಜೆಪಿಗೇ ಮತ್ತೆ ಅಧಿಕಾರ: ವಿಟೋ ಸಮೀಕ್ಷೆ

ದೆಹಲಿ: ಉತ್ತರ ಪ್ರದೇಶದಲ್ಲಿ ಮುಂದಿನ ಎರಡು ತಿಂಗಳಲ್ಲಿ ಚುನಾವಣೆ (Uttar Pradesh Election 2022) ನಡೆಯಲಿದ್ದು, ಈ ಚುನಾವಣೆಯಲ್ಲೂ ಬಿಜೆಪಿಯೇ (BJP) ಅಧಿಕಾರ ಹಿಡಿಯುವ ಮುನ್ಸೂಚನೆಯನ್ನು ಸಮೀಕ್ಷೆವೊಂದು ( Uttar Pradesh Election 2022 Opinion Poll) ನೀಡಿದೆ. ಇನ್ನೆರಡು ತಿಂಗಳಲ್ಲಿ ಚುನಾವಣೆ ಎದುರಿಸುವ ಪಂಚ ರಾಜ್ಯಗಳಲ್ಲಿ ಅತ್ಯಂತ ಮುಖ್ಯವಾದ ಮತ್ತು ದೇಶದ ರಾಜಕೀಯ ಸ್ಥಿತಿಯನ್ನು ಬದಲಿಸುವಷ್ಟು ಪ್ರಭಾವಶಾಲಿಯಾದ ಉತ್ತರ ಪ್ರದೇಶದಲ್ಲಿ ಏನಾಗಬಹುದು (CM Yogi Adityanath Government) ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಈ ಕುರಿತು ಈಗಾಗಲೇ ಸಮೀಕ್ಷೆಗಳೂ ಆರಂಭವಾಗಿವೆ. ವಿಟೋ ಎಂಬ ಸಂಸ್ಥೆ ಟೈಮ್ಸ್​ ನೌ​ ನವಭಾರತ್​ ಸುದ್ದಿ ಮಾಧ್ಯಮಕ್ಕಾಗಿ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಿದೆ. 403 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ 230-249 ಸ್ಥಾನಗಳಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 325 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಪ್ರಚಂಡ ಜಯ ಸಾಧಿಸಿತ್ತು. 1985ರಿಂದ ಈವರೆಗೆ ಉತ್ತರ ಪ್ರದೇಶದಲ್ಲಿ ಯಾವುದೇ ಪಕ್ಷ ಮರಳಿ ಅಧಿಕಾರ ಪಡೆದಿಲ್ಲ.

ಸಮಾಜವಾದಿ ಪಕ್ಷ (ಎಸ್​ಪಿ) ಮತ್ತು ಅದರ ಮಿತ್ರ ಪಕ್ಷಗಳು ಪ್ರಬಲ ಪೈಪೋಟಿ ನೀಡುವ ಸಂಭವಿದ್ದರೂ 137ರಿಂದ 152 ಕ್ಷೇತ್ರಗಳನ್ನು ಗಳಿಸಬಹುದು. 2017ರಲ್ಲಿ ಎಸ್​ಪಿ 48 ಸ್ಥಾನ ಗಳಿತ್ತು. ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಬಿಎಸ್​ಪಿ ಮತ್ತು ಕಾಂಗ್ರೆಸ್​ಗಳು ಪ್ರಾಬಲ್ಯ ಹೊಂದಿರುವ ಕಡೆಗಳಲ್ಲಿ ಬಿಎಸ್​ಪಿ 9ರಿಂದ 14 ಮತ್ತು ಕಾಂಗ್ರೆಸ್​ 4ರಿಂದ 7 ಸ್ಥಾನ ಗಳಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಬೆಟ್ಟು ಮಾಡಿದೆ.

ಎನ್​ಡಿಎಗೆ ಶೇ. 38.6, ಸಮಾಜವಾದಿ ಪಕ್ಷಕ್ಕೆ ಶೇ. 34.4 ಮತ್ತು ಬಿಎಸ್​ಪಿ ಶೇ. 14.1 ಮತ ಪ್ರಮಾಣ ದೊರೆಯವ ಸಾಧ್ಯತೆ ಇದೆ ಸಮೀಕ್ಷೆ ಹೇಳಿದೆ. ಈ ಸಮೀಕ್ಷೆಯನ್ನು ಡಿ. 16ರಿಂದ 30ರವರೆಗೆ ನಡೆಸಲಾಗಿದೆ. ಸುಮಾರು 21,500 ಮಂದಿ ಪ್ರತಿಕ್ರಿಯಿಸಿದ್ದಾರೆ. ಅನೇಕರು ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಶಿ ಮತ್ತು ಮಥುರಾ ಹೋರಾಟದ ವಿಚಾರಗಳನ್ನು ಬಿಜೆಪಿ ಈಗಾಗಲೇ ಚುನಾವಣೆಯ ಮುನ್ನಲೆಗೆ ತರುತ್ತಿದೆ. ಇವು ಬಿಜೆಪಿ ಧನಾತ್ಮಕವಾಗಬಹುದು. ಲಖಂಪುರ ಖೇರಿ ಹಿಂಸಾಚಾರ ಪ್ರಕರಣ ಮತ್ತು ಕೋವಿಡ್​ ಪರಿಸ್ಥಿತಿ ನಿರ್ವಹಣೆ ಬಗ್ಗೆ ಜನರಲ್ಲಿ ಅಸಮಾಧಾನ ಇರುವುದಿರಂದ, ಇದು ಬಿಜೆಪಿಗೆ ಹಿನ್ನೆಡೆಯಾಗಬಹುದು ಎಂದು ಸಮೀಕ್ಷೆ ಹೇಳಿದೆ.

ಇದನ್ನೂ ಓದಿ: Quit Smoking in 2022 : ಮೊಬೈಲ್ ಆ್ಯಪ್ ಬಳಸಿಯೂ ಸ್ಮೋಕಿಂಗ್ ಬಿಡಬಹುದು: ಇಲ್ಲಿವೆ ಸ್ಮೋಕಿಂಗ್ ಬಿಡಲು ಟಾಪ್ 5 ಆ್ಯಪ್‌ಗಳು

ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು

(Uttar Pradesh Election 2022 BJP Yogi Adityanath remains powers says Veto Survey)

Comments are closed.