ಮಂಗಳವಾರ, ಏಪ್ರಿಲ್ 29, 2025
HomeCinemaJaggesh : ಪುನೀತ್ ವಿಶ್ ಮಾಡದ ಬರ್ತಡೇ ಆಚರಣೆಯೇ ಬೇಡ ಎಂದ ನವರಸ ನಾಯಕ ಜಗ್ಗೇಶ್

Jaggesh : ಪುನೀತ್ ವಿಶ್ ಮಾಡದ ಬರ್ತಡೇ ಆಚರಣೆಯೇ ಬೇಡ ಎಂದ ನವರಸ ನಾಯಕ ಜಗ್ಗೇಶ್

- Advertisement -

ಸ್ಯಾಂಡಲ್ ವುಡ್ ನಟ, ಪವರ್ ಸ್ಟಾರ್ , ಕರುನಾಡಿನ ಮನೆಮಗ ಪುನೀತ್ ರಾಜ್ ಕುಮಾರ್ ಅಜಾತ ಶತ್ರುವಿನಂತೆ ಬದುಕಿದ್ದರು.‌ ಸಿನಿಮಾ‌ರಂಗದ ಎಲ್ಲರಿಗೂ ಆತ್ಮೀಯರಾಗಿದ್ದ ಪುನೀತ್ ಅಗಲಿಕೆಯಿಂದ ಸ್ಯಾಂಡಲ್ ವುಡ್ ಬರಿದಾದ ಭಾವದಲ್ಲಿದೆ. ಈ ವರ್ಷ ಪುನೀತ್ (Puneet Rajkumar )ನಿಧನದ ಬಳಿಕ ಯಾವ ಸ್ಟಾರ್ ಗಳೂ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮನಸ್ಸು ಮಾಡಿಲ್ಲ. ಈಗ ಈ ಸಾಲಿಗೆ ನವರಸ ನಾಯಕ ಜಗ್ಗೇಶ್ (Jaggesh ) ಕೂಡ ಸೇರ್ಪಡೆಗೊಂಡಿದ್ದಾರೆ.

ಹುಟ್ಟುಹಬ್ಬಕ್ಕಿನ್ನು ಒಂದು ವಾರ ಇರುವಾಗಲೇ ನವರಸ ನಾಯಕ ಜಗ್ಗೇಶ್ (Jaggesh Birthday) ತಮ್ಮ 59 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳೋದಿಲ್ಲ ಎಂದು ಘೋಷಿಸಿದ್ದಾರೆ. ನೋವಿ ನಿಂದ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರೋ ಜಗ್ಗೇಶ್ ಯಾಕೆ ಹುಟ್ಟುಹಬ್ಬ ಆಚರಿಸಿಕೊಳ್ಳೋದಿಲ್ಲ ಎಂಬ ಸಂಗತಿಯನ್ನು ಬಹಿರಂಗಗೊಳಿಸಿದ್ದಾರೆ.

ಈ ಭಾರಿ ನಾನು ನನ್ನ 59 ನೇ ಹುಟ್ಟುಹಬ್ಬ ಆಚರಿಸುವುದಿಲ್ಲ. ಹಾಗೂ ಆಚರಿಸಲು ಮನಸ್ಸು ಇಲ್ಲ. ಕಾರಣ ಪ್ರತಿ ಮಾರ್ಚ್ 17 ಕ್ಕೆ ತಪ್ಪದೇ ಬರುತ್ತಿದ್ದ #ಪುನೀತ್ ಕರೆ ಅಣ್ಣ Happy birthday ಮತ್ತೆ ಎಂದು ಬರದಂತಾಯಿತು. ಇದು ಪುನೀತ್ ಜೊತೆ ಕೊನೆಯ ಚಿತ್ರ ಎಂದು ಟ್ವೀಟ್ ಮಾಡಿರೋ ಜಗ್ಗೇಶ್ ಪುನೀತ್ ಜೊತೆಗಿನ ತಮ್ಮ ಪೋಟೋವನ್ನು ಹಂಚಿ ಕೊಂಡಿದ್ದಾರೆ. ಜಗ್ಗೇಶ್ ಹಾಕಿರೋ ಪೋಸ್ಟ್ ಈಗ ಸಖತ್ ವೈರಲ್ ಆಗಿದ್ದು, ಹಲವರು ಟ್ವೀಟ್ ಶೇರ್ ಮಾಡಿಕೊಂಡು ಪುನೀತ್ ಅಗಲಿಕೆಗೆ ಕಣ್ಣೀರು ಮಿಡಿಯುತ್ತಿದ್ದಾರೆ.

ಇನ್ನೊಂದು‌ ಗಮನಿಸಬೇಕಾದ ಅಂಶವೆಂದರೇ ನವರಸ ನಾಯಕ‌ ಜಗ್ಗೇಶ್ ಹಾಗೂ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನಿಸಿದ್ದು ಒಂದೇ ದಿನದಂದು. ಮಾರ್ಚ್ 17 ರಂದೇ ಜಗ್ಗೇಶ್ ಹಾಗೂ ಪುನೀತ್ ಜನಿಸಿದ್ದಾರೆ. ಪ್ರತಿವರ್ಷವೂ ಪುನೀತ್ ರಾಜ್ ಕುಮಾರ್ ತಮ್ಮ ಹುಟ್ಟಿದ ಹಬ್ಬದಂದು ತಪ್ಪದೇ ಜಗ್ಗೇಶ್ ಗೂ ಪೋನ್ ಮಾಡಿ ಶುಭಾಶಯ ಹೇಳುತ್ತಿದ್ದರಂತೆ. ಆದರೆ ಈ ವರ್ಷ ಜಗ್ಗೇಶ್ ತಮ್ಮ ಹುಟ್ಟುಹಬ್ಬ ಕ್ಕೆ ಪುನೀತ್ ವಿಶ್ ಮಾಡೋದಿಲ್ಲ ಎಂಬ ಕಾರಣಕ್ಕೆ ಹುಟ್ಟುಹಬ್ಬ ಆಚರಿಸಿಕೊಳ್ಳೋದನ್ನೇ ಕೈಬಿಡುವ ನಿರ್ಧಾರ ಮಾಡಿದ್ದಾರಂತೆ.

ಇದೇ ಸಾಲಿಗೆ ಕನ್ನಡದ ಹಲವು ನಟರು ಸೇರಿದ್ದು, ನಟ ದರ್ಶನ್, ಸುದೀಪ್, ರಾಧಿಕಾ ಪಂಡಿತ್ ಸೇರಿದಂತೆ ಹಲವರು ಪುನೀತ್ ಅಗಲಿದ ಈ ವರ್ಷ ಅದ್ದೂರಿ ಹುಟ್ಟುಹಬ್ಬ ಅಚರಿಸಿ ಕೊಳ್ಳಲು ಮನಸ್ಸಾಗುತ್ತಿಲ್ಲ ಎಂದು ಹುಟ್ಟುಹಬ್ಬ ಕೈಬಿಟ್ಟಿದ್ದಾರೆ.

ಇದನ್ನೂ ಓದಿ : Box Office : 100 ಕೋಟಿ ಮೂಲಕ ದಾಖಲೆ ಬರೆದ ಗಂಗೂಬಾಯಿ ಕಾಠಿಯಾವಾಡಿ

ಇದನ್ನೂ ಓದಿ : Rakul Preet Singh : ನಟನೆ ಬಿಟ್ಟು ಕಾಂಡೋಮ್‌ ಟೆಸ್ಟ್ ಗೆ ಮುಂದಾದ ನಟಿ ರಕುಲ್ ಪ್ರೀತ್ ಸಿಂಗ್

(Jaggesh Not celebrate Birthday for Puneet Rajkumar death)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular