Abhishek Ambarish : ರಾಜಕೀಯಕ್ಕೆ ಬರ್ತಾರಾ ಜ್ಯೂನಿಯರ್ ರೆಬೆಲ್ ಅಭಿಷೇಕ್‌ ಅಂಬರೀಷ್‌ : ಏನಂದ್ರು ಗೊತ್ತಾ ಸುಮಲತಾ

ಬೆಂಗಳೂರು : ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಒಂದುವರ್ಷ ಬಾಕಿ ಇದ್ದರೂ ಆಗಲೇ ಮತಬೇಟೆಯ ಸಿದ್ಧತೆ ಜೋರಾಗಿದೆ. ರಾಜಕಾರಣಿಗಳ ಮಕ್ಕಳು, ಸಿನಿಮಾ ನಟರು ಚುನಾವಣಾ ಕಣಕ್ಕಿಳಿತಾರೇ ಅನ್ನೋ ಸುದ್ದಿಗಳು ಜೋರಾಗಿವೆ. ಈ ಮಧ್ಯೆ ಮಂಡ್ಯದ ಗಂಡು ದಿ. ನಟ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ (Abhishek Ambarish) ಚುನಾವಣೆಯ ಕಣಕ್ಕಿಳಿತಾರೇ ಅನ್ನೋ‌ ಸಂಗತಿ ಈಗ ಚರ್ಚೆಗೆ ಗ್ರಾಸವಾಗಿದೆ.

ಮಾಜಿ ಸಚಿವ ಹಾಗೂ ಹಿರಿಯ ನಟ ಅಂಬರೀಶ್ ರಂಗೀನ್ ರಾಜಕಾರಣಿಯಾಗಿ‌ ಮಿಂಚಿದವರು. ರಾಜಕೀಯದಲ್ಲೂ ಸಿನಿಮಾದಷ್ಟೇ ಹಿಡಿತ ಹೊಂದಿದ್ದ ಅಂಬರೀಶ್, ಈಗ ನೆನಪು ಮಾತ್ರ. ಆದರೆ ಅವರ ಹೆಸರನ್ನು ಚಿರಸ್ಥಾಯಿಯಾಗಿಸುವಂತೆ ಅವರ ಪತ್ನಿ ಸುಮಲತಾ ಸಂಸದೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ಮುಂಬರುವ ವಿಧಾನಸಭಾ ಚುನಾವಣೆ ಯಲ್ಲಿ ಅಂಬರೀಶ್ ಪುತ್ರ ಅಭಿಷೇಕ್ (Abhishek Ambarish) ಕೂಡ ತಂದೆಯಂತೆಯೇ ಚುನಾವಣೆಗೆ ಸ್ಪರ್ಧಿಸಿ ರಾಜಕೀಯಕ್ಕೆ ಬರುತ್ತಾರೆ ಎನ್ನಲಾಗ್ತಿದೆ. ಅಂಬರೀಶ್ ನಿಧನರಾದಾಗ ಅಭಿಷೇಕ್ ರಾಜಕೀಯಕ್ಕೆ ಬರ್ತಾರೆ ಎನ್ನಲಾಗಿತ್ತು. ಆದರೆ ಆಗ ರಾಜಕೀಯ ಕಣಕ್ಕಿಳಿದ ಸುಮಲತಾ ಪಕ್ಷೇತರವಾಗಿ ನಿಂತು ಸಂಸದ ಸ್ಥಾನ ಗೆದ್ದು ಬಂದರು.

ಈಗ ವಿಧಾನಸಭಾ ಚುನಾವಣೆಯಲ್ಲಿ ಅಭಿಷೇಕ್ ಸ್ಪರ್ಧೆ ಮುನ್ನಲೆಗೆ ಬಂದಿದೆ. ಮಂಡ್ಯ ಅಥವಾ ಮದ್ದೂರು ಕ್ಷೇತ್ರದಲ್ಲಿ ಅಭಿಷೇಕ್ ಸ್ಪರ್ಧಿಸಲಿದ್ದಾರೆ ಎನ್ನಲಾಗ್ತಿದೆ. ಹಾಗೇ ನೋಡಿದ್ರೇ ಅಭಿಷೇಕ್ ಗೆ ರಾಜಕೀಯ ಹೊಸದಲ್ಲ. ಲೋಕಸಭಾ ಚುನಾವಣೆಗೆ ನಿಂತಿದ್ದ ತಾಯಿ ಸುಮಲತಾರನ್ನು ಗೆಲ್ಲಿಸೋಕೆ ಅಭಿಷೇಕ್ ಹಗಲು ಇರುಳೆನ್ನದೇ ತಾಯಿ ಜೊತೆ ಶ್ರಮಿಸಿದ್ದರು. ಹೀಗಾಗಿ ಈಗ ಮಗನನ್ನು ಶಾಸಕರನ್ನಾಗಿಸಲು ಸುಮಲತಾ ಸರ್ಕಸ್ ಆರಂಭಿಸಿದ್ದಾರಂತೆ.

ಇದನ್ನೂ ಓದಿ : Goa election : ಗೋವಾದಲ್ಲಿ ಅಧಿಕಾರಕ್ಕೆ ಕೈ ಸರ್ಕಸ್ : ಸಹಾಯಕ್ಕೆ ಧಾವಿಸಿದ ಡಿ.ಕೆ.ಶಿವಕುಮಾರ್‌

ಮಂಡ್ಯದ ಹಲವು ನಾಯಕರು ಕೂಡ ಸುಮಲತಾ ಅವರಿಗೆ ಬೆಂಬಲ ನೀಡಿದ್ದು, ಅಭಿಷೇಕ್ ರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಳ್ಳುವ ಜವಾಬ್ದಾರಿ ನಮ್ಮದು ಎಂದಿದ್ದಾರಂತೆ. ಆದರೆ ಈ ಬಗ್ಗೆ ಸುಮಲತಾ (Sumalatha)ಹೇಳೋದೆ ಬೇರೆ, ಮಗನ ಕುರಿತು ನಾನು ಯಾವ ನಿರ್ಧಾರವನ್ನೂ ತೆಗೆದುಕೊಂಡಿಲ್ಲ. ಸಿನಿಮಾಗೆ ಬರುವ ನಿರ್ಧಾರವೂ ಆತನದ್ದೇ ಆಗಿತ್ತು. ಸ್ವತಂತ್ರ ವಾಗಿಯೇ ನಿರ್ಧಾರ ಕೈಗೊಂಡು ಬಂದ. ನಾವು ಅವನನ್ನು ಸಿನಿಮಾಗೆ ಕರೆದಿಲ್ಲ.‌ಈಗ ರಾಜಕೀಯಕ್ಕೂ ನಾವು ಕರೆಯೋದಿಲ್ಲ. ಅವನು ರಾಜಕೀಯಕ್ಕೆ ಬರ್ತಾನೋ ಇಲ್ವೋ ಅವನನ್ನೇ ಕೇಳಿ ಎಂದು ಸುಮಲತಾ ಸ್ಪಷ್ಟನೆ ನೀಡಿದ್ದಾರೆ.

ಆದರೆ ಈ ಮಾತನ್ನು‌ ಗಂಭೀರವಾಗಿ ಪರಿಗಣಿಸುವಂತಿಲ್ಲ. ಯಾಕಂದ್ರೇ ಸುಮಲತಾ ಕೂಡ ರಾಜಕೀಯಕ್ಕೆ ಬರೋದರ ಬಗ್ಗೆ ಗಂಭೀರವಾಗಿ ಎಂದೂ ಮಾತನಾಡಿರಲಿಲ್ಲ. ಬಳಿಕ ನೇರವಾಗಿ ರಾಜಕೀಯಕ್ಕೆ ಧುಮುಕಿ ಸಂಸದರಾಗಿದ್ದರು. ಹೀಗಾಗಿ ಈಗ ಅಭಿಷೇಕ್ ಸ್ಪರ್ಧೆ ಕೂಡ ಕುತೂಹಲ ಮೂಡಿಸಿದೆ.

ಇದನ್ನೂ ಓದಿ : BJP : ಕಾಮಗಾರಿಗೆ 40% ಕಮಿಷನ್‌ : ಈಶ್ವರಪ್ಪ ಭ್ರಷ್ಟಾಚಾರ, ಹೈಕಮಾಂಡ್‌ಗೆ ದೂರು

(Abhishek Ambarish entry for Politics, what says Sumalatha )

Comments are closed.