ತಮಿಳಿನ ಖ್ಯಾತ ನಟ ರಜನಿಕಾಂತ್ ಇಂದು (ಜನವರಿ 29) ಕಡಲನಗರಿಗೆ ಮಂಗಳೂರಿಗೆ ಬಂದಿದ್ದಾರೆ. ಅವರ ಅಭಿನಯದ ಜೈಲರ್ ಸಿನಿಮಾದ (Jailer Movie) ಎರಡು ದಿನದ ಚಿತ್ರೀಕರಣ ಮಂಗಳೂರಿನಲ್ಲಿ ನಡೆಯಲಿದ್ದು, ಆ ಭಾಗದ ಶೂಟಿಂಗ್‌ಗಾಗಿ ಅವರು ತಮ್ಮ ಸಿನಿತಂಡದೊಂದಿಗೆ ಕರಾವಳಿಗೆ ಬಂದಿದ್ದಾರೆ. ಕರಾವಳಿಯ ಹಲವು ಭಾಗಗಳಲ್ಲಿ “ಜೈಲರ್” ಸಿನಮಾದ ಕೆಲ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಸನ್ನಿವೇಶದಲ್ಲಿ ನಟ ಶಿವರಾಜ್‌ಕುಮಾರ್ ಕೂಡ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೈಲರ್ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಶಿವರಾಜ್‌ಕುಮಾರ್ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದು, ಮಂಗಳೂರಿನಲ್ಲಿ ನಡೆಯುವ ಶೂಟಿಂಗ್‌ನಲ್ಲಿ ಈ ಜೋಡಿ ಜೊತೆಯಾಗಿ ಕ್ಯಾಮೆರಾ ಎದುರಿಸಲಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತದ್ದಂತೆಯೇ ಹೆಚ್ಚಿನ ಅಭಿಮಾನಿಗಳು ನಟ ರಜನಿಕಾಂತ್‌ನ್ನು ಸುತ್ತುವರೆದಿದೆ. ಹೀಗಾಗಿ ಚಿತ್ರೀಕರಣ ನಡೆಯು ಸ್ಥಳಗಳಲ್ಲಿ ಭಾರೀ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.
ಈ ಸಿನಿಮಾ ನಟ ರಜನಿಕಾಂತ್ ಅಭಿನಯದ 169ನೇ ಸಿನಿಮಾವಾಗಿದ್ದು, ಇದೇ ಮೊದಲ ಬಾರಿಗೆ ನಟ ರಜನಿ ಮತ್ತು ಶಿವರಾಜ್‌ಕುಮಾರ್ ಜೊತೆಯಾಗಿ ಅಭಿನಯಿಸಿದ್ದಾರೆ. ಹೀಗಾಗಿ ಈ ಸಿನಿಮಾದ ಬಗ್ಗೆ ಈಗಿನಿಂದಲೇ ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಿದೆ. ಸಾಕಷ್ಟು ಅಚ್ಚರಿಗಳನ್ನು ಈ ಸಿನಿಮಾ ಹೊತ್ತು ತರಲಿದ್ದು, ಹೆಸರಾಂತ ತಾರಾಬಳಗವನ್ನು ಕೂಡ ಒಳಗೊಂಡಿದೆ.
ಇದನ್ನೂ ಓದಿ : ಡಾ. ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ : ಇದರ ಒಳಗೆ ಏನೇನೂ ಇದೆ ಗೊತ್ತಾ ?
ಇದನ್ನೂ ಓದಿ : “ಸಾಹಸಸಿಂಹ” ಬಿರುದು ಸಿಗಲು ಬರೀ ಆ ಸಿನಿಮಾ ಕಾರಣ ಅಲ್ಲ : ಸ್ವತಃ ನಟ ವಿಷ್ಣುವರ್ಧನ್ ಈ ಬಗ್ಗೆ ಹೇಳಿದೇನು ?
ಇದನ್ನೂ ಓದಿ : 3 ದಿನಗಳಲ್ಲಿ ಕ್ರಾಂತಿ ಪಡೆದುಕೊಂಡ ಬುಕ್ ಮೈ ಶೋ, ಐಎಂಡಿಬಿ, ಗೂಗಲ್ ರೇಟಿಂಗ್ ಎಷ್ಟು ಗೊತ್ತಾ ?
ಈ ಸಿನಿಮಾದಲ್ಲಿ ಬಾಲಿವುಡ್ ಖ್ಯಾತಿಯ ನಟಿ ಐಶ್ವರ್ಯ ರೈ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಈ ಸಿನಿಮಾದಲ್ಲಿ ರಮ್ಯಾ ಕೃಷ್ಣಾ, ತಮನ್ನಾ ಸೇರಿದಂತೆ ನಾಲ್ವರು ನಾಯಕಿಯರು ಅಭಿನಯಿಸಲಿದ್ದಾರೆ. ಈ ಸಿನಿಮಾವನ್ನು ನೆಲ್ಸನ್ ನಿರ್ದೇಶನದಲ್ಲಿ ಮೂಡಿಬರಲಿದೆ. ಮಾಸ್ಟರ್ ಅನಿರುದ್ಧ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬರಲಿದೆ. ಇನ್ನು ಈ ಸಿನಿಮಾ ಹೆಸರಾಂತ ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಸಿನಿಮಾ ತಯಾರಾಗುತ್ತಿದೆ.
ಇದನ್ನೂ ಓದಿ : ಕಷ್ಟಗಳನ್ನೇ ಎದುರಿಸಿ ಬೆಳೆದು ನಿಂತ ನಟ ಡಾ. ವಿಷ್ಣುವರ್ಧನ್ ಬಗ್ಗೆ ನಿಮಗೆಷ್ಟು ಗೊತ್ತು ?
ಇದನ್ನೂ ಓದಿ : ವಿಷ್ಣು ಸ್ಮಾರಕ ಉದ್ಘಾಟನೆ : ಕಟ್ಟಾ ಅಭಿಮಾನಿ ಕಿಚ್ಚ ಸುದೀಪ್‌ನಿಂದ ವಿಶೇಷ ಟ್ವೀಟ್
Jailer Movie : Thalaiva Rajinikanth lands in the coastal city : Shooting of “Jailer” in Mangalore