Bottle guard Halva: ಬಾಯಲ್ಲಿ ನೀರೂರಿಸುವ ಸೋರೆಕಾಯಿ ಹಲ್ವಾ..! ಒಮ್ಮೆ ಹೀಗೆ ಮಾಡಿ ನೋಡಿ

(Bottle guard Halva) ಸೋರೆಕಾಯಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಸೋರೆಕಾಯಿಯಿಂದ ನಾವು ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಜೊತೆಗೆ ಹಲವು ರೀತಿಯಲ್ಲಿ ಸೋರೆಕಾಯಿಯನ್ನು ಅಡುಗೆಯಲ್ಲಿ ಬಳಸಿಕೊಂಡು ರುಚಿ ರುಚಿಯಾದ ಖಾದ್ಯಗಳನ್ನು ತಯಾರಿಸಿಕೊಳ್ಳಬಹುದು. ಸೋರೆಕಾಯಿಯಲ್ಲಿ ಅನೇಕ ಪೋಷಕಾಂಶಗಳಿದ್ದು,ಇದು ಕಡಿಮೆ ಕ್ಯಾಲೋರಿಗಳು, ಕೊಬ್ಬು, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದೆ. ಕ್ಯಾರೇಟ್‌ ಹಲ್ವಾ, ಕಾಶಿ ಹಲ್ವಾ ಈ ರೀತಿಯ ಹಲ್ವಾಗಳನ್ನು ಎಲ್ಲರೂ ತಿಂದೇ ಇರುತ್ತಾರೆ. ಅದರೆ ಪೋಷಕಾಂಶಗಳುಳ್ಳ ಸೋರೆಕಾಯಿಯಿಂದ ತಯಾರಿಸಿದ ರುಚಿಯಾದ ಹಲ್ವಾವನ್ನು ಎಂದಾದರೂ ತಿಂದಿದ್ದೀರಾ? ತಿಂದಿಲ್ಲವಾದರೇ ನೀವೊಮ್ಮೆ ಮನೆಯಲ್ಲೇ ಟ್ರೈ ಮಾಡಿ.

ಕಡಿಮೆ ಪದಾರ್ಥಗಳನ್ನು ಬಳಸಿಕೊಂಡು ಅತೀ ಕಡಿಮೆ ಸಮಯದಲ್ಲಿ ಸೋರೆಕಾಯಿ ಹಲ್ವಾ(Bottle guard Halva)ವನ್ನು ತಯಾರಿಸಬಹುದು. ಹಾಗಿದ್ದರೆ ಸೋರೆಕಾಯಿ ಹಲ್ವಾ ತಯಾರಿಸುವ ವಿಧಾನವನ್ನು ತಿಳಿಯೋಣ;

ಸೋರೆಕಾಯಿ ಹಲ್ವಾ (Bottle guard Halva) ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
2 ಕಪ್‌ ಸೋರೆಕಾಯಿ ತುರಿ
ಒಂದು ಕಪ್‌ ಹಾಲು
ಅರ್ದ ಕಪ್‌ ಸಕ್ಕರೆ
ಎರಡು ಟೀ ಸ್ಪೂನ್‌ ತುಪ್ಪ
ಗೋಡಂಬಿ
ಏಲಕ್ಕಿ ಪುಡಿ

ರುಚಿಯಾದ ಸೋರೆಕಾಯಿ ಹಲ್ವಾ (Bottle guard Halva) ಮಾಡುವ ವಿಧಾನ:
ಮೊದಲು ಸೋರೆಕಾಯಿಯನ್ನು ತೊಳೆದು ಸಿಪ್ಪೆ ತೆಗೆದು ತುರಿದುಕೊಳ್ಳಿ( ಬೀಜ ಬೆಳೆದಿದ್ದರೆ ತೆಗೆದುಕೊಳ್ಳಿ). ನಂತರ ಒಂದು ಬಾಣಲೆಯಲ್ಲಿ ಒಂದು ಟೇಬಲ್‌ ಸ್ಪೂನ್‌ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ. ತುಪ್ಪ ಬಿಸಿಯಾದ ಮೇಲೆ ಅದಕ್ಕೆ ಸೋರೆಕಾಯಿ ತುರಿ ಹಾಕಿ ಮೆತ್ತಗಾಗುವವರೆಗೂ ಐದು ನಿಮಿಷಗಳ ಕಾಲ ಹುರಿಯಿರಿ. ನಂತರ ಇದಕ್ಕೆ ಹಾಲು ಸೇರಿಸಿ ಮಧ್ಯಮ ಉರಿಯಲ್ಲಿ ಮಗುಚುತ್ತಾ ಬೇಯಿಸಿ. ಹಾಲು ಒಣಗಿದ ನಂತರ ಇದಕ್ಕೆ ಅರ್ದ ಕಪ್‌ ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ. ಹಲ್ವಾ ಗಟಟಿಯಾಗುತ್ತಾ ಬರುತ್ತಿದ್ದಂತೆ ಗೋಡಂಬಿ ಹಾಗೂ ಏಲಕ್ಕಿ ಪುಡಿ ಸೇರಿಸಿ ಮಗುಚಿ. ಕೊನೆಯಲ್ಲಿ ಒಂದು ಟೇಬಲ್‌ ಚಮಚ ತುಪ್ಪ ಹಾಕಿ ಒಮ್ಮೆ ಮಗುಚಿಕೊಳ್ಳಿ. ರುಚಿಯಾದ ಸೋರೆಕಾಯಿ ಹಲ್ವಾ ಸವಿಯಲು ಸಿದ್ದ.

ಇದನ್ನೂ ಓದಿ : Peanut-Til Barfi: ಸಂಕ್ರಾಂತಿಗೆ ಮನೆಯಲ್ಲಿಯೇ ತಯಾರಿಸಿ ಶೇಂಗಾ–ಎಳ್ಳು ಬರ್ಫಿ

ಇದನ್ನೂ ಓದಿ : Aam Papad Recipe:ಬಾಯಲ್ಲಿ ನೀರೂರಿಸುವ ಮಾವಿನ ತಿನಿಸು ಆಮ್‌ ಪಾಪಡ್‌ ಮನೆಯಲ್ಲಿಯೇ ಮಾಡಿ

ಇದನ್ನೂ ಓದಿ : Okra Kebab Recipe : ಊಟಕ್ಕೆ ಬೆಂಡೆಕಾಯಿ ಸಾರು ಪಲ್ಯ ಅಂದರೆ ಬೇಸರವೇ ಹಾಗಿದ್ದರೆ ಟ್ರೈ ಮಾಡಿ ಬೆಂಡೆಕಾಯಿ ಕಬಾಬ್‌

ಸೋರೆಕಾಯಿ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಸೋರೆಕಾಯಿಯನ್ನು ದಿನನಿತ್ಯ ಬಳಸುವುದರಿಂದ ಜೀರ್ಣಕ್ರೀಯೆ, ಹೃದಯ ಸಂಬಂಧಿತ ಸಮಸ್ಯೆ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅಲ್ಲದೇ ಉರಿಯೂತದಂತಹ ಸಮಸ್ಯೆಯನ್ನು ಕೂಡ ಇದು ಕಡಿಮೆ ಮಾಡುತ್ತದೆ. ಸೋರೆಕಾಯಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಯ ಉತ್ತಮ ಮೂಲವಾಗಿದ್ದು, ಚರ್ಮದ ಮೇಲಿನ ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ.

Bottle guard Halva: Mouth watering gourd halwa..! Try this once

Comments are closed.