ಸೋಮವಾರ, ಏಪ್ರಿಲ್ 28, 2025
HomeCinemaBayalu seeme : ಜವಾರಿ ಭಾಷೆಯ ಕನ್ನಡ ಸಿನಿಮಾ ‘ಬಯಲುಸೀಮೆ’ ಆಡಿಯೋ ಲಾಂಚ್‌

Bayalu seeme : ಜವಾರಿ ಭಾಷೆಯ ಕನ್ನಡ ಸಿನಿಮಾ ‘ಬಯಲುಸೀಮೆ’ ಆಡಿಯೋ ಲಾಂಚ್‌

- Advertisement -

ಉತ್ತರ ಕರ್ನಾಟಕ ಶೈಲಿಯ ರಗಡ್ ಕಥೆಗಳ ಬಗ್ಗೆ ಕನ್ನಡದ ಪ್ರೇಕ್ಷಕರರಲ್ಲಿ ಒಂದು ವಿಶೇಷ ಪ್ರೀತಿ. ಇದೀಗ ಅದೇ ಸೊಗಡಿನ ಪಕ್ಕಾ ರಗಡ್ ಕಥಾನಕ ಹೊಂದಿರೋ ಬಯಲು ಸೀಮೆ (Bayalu seeme) ಸಿನಿಮಾ ಶೂಟಿಂಗ್ ಮುಗಿಸಿಕೊಂಡು, ನಿನ್ನೆ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಆಡಿಯೋ ಬಿಡುಗಡೆಗೆ ಮಾಡಿದೆ. ಇಡೀ ಸಿನಿಮಾ ತಂಡ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಅನುಭವ ಹಂಚಿಕೊಂಡಿದೆ.

Javari language Kannada cinema Bayalu seeme audio launch 1

ನಿರ್ದೇಶಕರು ಏನೇ ವಿಷ್ಯುವಲೈಸೇಷನ್ ಮಾಡಿದರೇ ಅದಕ್ಕೆ ನಿರ್ಮಾಪಕರ ಸಪೋರ್ಟ್ ಬಹಳ‌ ಮುಖ್ಯ. ಪ್ರತಿಯೊಬ್ಬರೂ ಈ ಸಿನಿಮಾಗೆ ಬಹಳಷ್ಟು ಶ್ರಮಿಸಿದ್ದಾರೆ. ನಾಗಾಭರಣ ಅವರ ಜೊತೆ ಆಕ್ಟ್ ಮಾಡಿರೋದು ಖುಷಿ ಕೊಟ್ಟಿದೆ ಎಂದು ಆರ್ಮುಗಂ ರವಿಶಂಕರ್ ತಮ್ಮ ಅನುಭವ ಹಂಚಿಕೊಂಡರು. ಪೊಲಿಟಿಕಲ್ ಕ್ರೈಂ ಥ್ರಿಲ್ಲರ್ ‘ಬಯಲುಸೀಮೆ’ ಸಿನಿಮಾ ನಾನಾ ಮಜಲುಗಳ, ಮೈನವಿರೇಳಿಸೋ ತಿರುವುಗಳ ಮೂಲಕ ಪ್ರೇಕ್ಷಕರನ್ನು ಬೇರೆಯದ್ದೇ ಜಗತ್ತಿಗೆ ಕೊಂಡೊಯ್ಯುವಂತೆ ಸಿನಿಮಾ ಮೂಡಿ‌ಬಂದಿದೆ.

Javari language Kannada cinema Bayalu seeme audio launch 3

ಲಕ್ಷ್ಮಣ್ ಸಾ ಶಿಂಗ್ರಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಬಯಲುಸೀಮೆಯನ್ನು ವರುಣ್ ಕಟ್ಟೀಮನಿ ನಿರ್ದೇಶನ ಮಾಡಿದ್ದಾರೆ. ಎಂಬತ್ತರ ದಶಕ ಮತ್ತು ಇಂದಿನ ಕಾಲಮಾನ ದೊಂದಿಗೆ ಜುಗಲ್ಬಂದಿ ಹೊಂದಿರೋ ಈ ಕಥೆ, ಆ ಎರಡು ಕಾಲಘಟ್ಟಗಳನ್ನೂ ಉತ್ತರ ಕರ್ನಾಟಕದ ಜವಾರಿ ಶೈಲಿಯಲ್ಲಿ ಕಟ್ಟಿಕೊಟ್ಟಿದೆ. ಸಾಹೂರಾವ್ ಶಿಂಧೆ ಎಂಬ ಶ್ರೀಮಂತ ವ್ಯಕ್ತಿಯ ಸುತ್ತ ಬಯಲು ಸೀಮೆಯ ಕಥೆ ಚಲಿಸುತ್ತೆ. ಆತನ ಸುತ್ತ ಹಬ್ಬಿಕೊಳ್ಳುವ ಅಕ್ರಮ ಸಂಬಂಧ, ಅದರ ಹಿನ್ನೆಲೆಯಲ್ಲೊಂದು ಲವ್ ಸ್ಟೋರಿ ಹಾಗೂ ಅದರ ಗರ್ಭದಲ್ಲಿಯೇ ಹುಟ್ಟಿಕೊಳ್ಳೋ ರಣ ದ್ವೇಷ. ಕ್ಷಣ ಕ್ಷಣವೂ ಪ್ರೇಕ್ಷಕರನ್ನು ತುದೀ ಸೀಟಿಗೆ ತಂದು ಕೂರಿಸುವಂಥಾ ಗಟ್ಟಿ ಕಥೆಯೊಂದಿಗೆ ಚಿತ್ರತಂಡ ಪ್ರೇಕ್ಷಕರನ್ನು ಮುಖಾಮುಖಿಯಾಗೋ ಉತ್ಸಾಹದಲ್ಲಿದೆ.

Javari language Kannada cinema Bayalu seeme audio launch 2

ಈ ಸಿನಿಮಾದಲ್ಲಿ ಭಯ ಹುಟ್ಟಿಸೋ ಪಾತ್ರಗಳಿವೆ. ಅದಕ್ಕೆ ಮಹಾರಥ ಕಲಾವಿದರುಗಳು ಜೀವ ತುಂಬಿದ್ದಾರೆ. ಬೃಹತ್ ತಾರಾಗಣ ಹೊಂದಿರೋ ಬಯಲು ಸೀಮಿಯಲ್ಲಿ ಬಿಸಿಲ ನಾಡ ಪ್ರತಿಭೆಗಳೂ ಮಿಂಚಲು ಅಣಿಯಾಗಿದ್ದಾರೆ. ಟಿ.ಎಸ್ ನಾಗಾಭರಣ, ರವಿಶಂಕರ್, ಸಂಯುಕ್ತ ಹೊರನಾಡು, ಯಶ್ ಶೆಟ್ಟಿ, ಭವಾನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ವರುಣ್ ಕಟ್ಟೀಮನಿ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ ಭಟ್, ಮಹೇಶ್ ದೊಡ್ಡಕೈನವರ್, ಪ್ರದೀಪ್ ರಾಜ್ ಮುಂತಾದವರ ತಾರಾಗಣ ಈ ಸಿನಿಮಾದಲ್ಲಿದೆ. ಸುಜಯ್ ಕುಮಾರ್ ಬಾವಿಕಟ್ಟಿ ಛಾಯಾಗ್ರಹಣ, ಮಾನಸಾ ಹೊಳ್ಳ ಸಂಗೀತ ನಿರ್ದೇಶನ, ಕಿರಣ್ ಕುಮಾರ್ ಸಂಕಲನ ಮತ್ತು ರಾಮು ಅವರ ನೃತ್ಯ ಸಂಯೋಜನೆಯಿಂದ ಬಯಲುಸೀಮೆ ಸಿಂಗರಿಸಿಕೊಂಡಿದೆ.

ಇದನ್ನೂ ಓದಿ : ಕೆಜಿಎಫ್, ಪುಷ್ಪಾ, ಆರ್ ಆರ್ ಆರ್ ಚೆನ್ನಾಗಿ ಓಡ್ತಾ ಇದೆ ಅಂತ, ಬಾಲಿವುಡ್ ನಲ್ಲಿ ಕಂಟೆಂಟ್ ಇಲ್ಲ ಅಂತಲ್ಲ: ಅಭಿಷೇಕ್ ಬಚ್ಚನ್

ಇದನ್ನೂ ಓದಿ : ಸುಳ್ಳು ಮಾಹಿತಿ ಹರಡುತ್ತಿದ್ದ 16 ಯುಟ್ಯೂಬ್​ ಚಾನೆಲ್​ಗಳು ಬ್ಯಾನ್​​

Javari language Kannada cinema Bayalu seeme audio launch

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular