GST Scam : ನಕಲಿ ದಾಖಲೆ ಸೃಷ್ಟಿಸಿ ಜಿಎಸ್‌ಟಿ ವಂಚನೆ : ಉಡುಪಿಯಲ್ಲಿ 8 ಮಂದಿಯ ವಿರುದ್ದ ಪ್ರಕರಣ ದಾಖಲು

ಉಡುಪಿ : ನಕಲಿ ದಾಖಲೆ ಸೃಷ್ಟಿಸಿ ಸರಕುಗಳು ಮತ್ತು ಸೇವಾ ತೆರಿಗೆ ( GST ) ವಂಚನೆ ನಡೆಸಿರುವ ಪ್ರಕರಣಕ್ಕೆ (GST Scam) ಸಂಬಂಧಿಸಿದಂತೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ನೀಡಿದ ದೂರಿನ ಆಧಾರದ ಹಿನ್ನೆಲೆಯಲ್ಲಿ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಇದೀಗ ಎಂಟು ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ.

ಅಜಿತ್‌ ಜಯನ್‌, ಅಬ್ದುಲ್ಲಾ ನೌಮಾನ್ ಎ.ಆರ್‌., ಸಂತೋಷ್‌ ಮಲಿಕ್‌, ಜೀತು ಮುಂಬೈ, ಹಾರಿಫ್‌ ಯಾನೆ ಆರೀಫ್‌, ಬಿ.ರಘುನಾಥ ಪೈ ಯಾನೆ ಗುರು, ದಸ್ತಗಿರ್‌, ಕಾಂಚಿವರದ ರಾಜು ಹಾಗೂ ಸುಹೇಲ್‌ ಖಾದರ್‌ ಎಂಬವರೇ ಜಿಎಸ್‌ಟಿ ವಂಚನೆ ನಡೆಸಿರುವ ಆರೋಪಿಗಳಾಗಿದ್ದಾರೆ.

ಎಲ್ಲಾ ಆರೋಪಿಗಳು ಸೇರಿಕೊಂಡು ಜಿಎಸ್‌ಟಿ ವಂಚನೆ ನಡೆಸುವ ಸಲುವಾಗಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ, ಅವುಗಳನ್ನು ಜಿಎಸ್‌ಟಿ ಪ್ರಾಧಿಕಾರಕ್ಕೆ ನೀಡಿದ್ದಾರೆ. ಮಾತ್ರವಲ್ಲದೇ ನಕಲಿ ಜಿಪಿಎ ತಯಾರಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸುವ ಬಳಲಿ, ವಾಣಿಜ್ಯ ತೆರಿಗೆ ಇಲಾಖೆ ಮೋಸ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಆರೋಪಿಗಳ ಪೈಕಿ ಸುಹೇಲ್‌ ಖಾದರ್‌ ಎಂಬಾತ, ನಕಲಿ ಜಿಪಿಎ ಹಾಗೂ ದಾಖಲೆಗಳನ್ನು ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿಗೆ ಕಳುಹಿಸಿಕೊಟ್ಟಿರುವ ಕುರಿತು ಉಡುಪಿಯ ಅಜ್ಜರಕಾಡುವಿನಲ್ಲಿ ಇರುವ ವಾಣಿಜ್ಯ ತೆರಿಗೆ ನಿರೀಕ್ಷಕರಾದ ನಾಗರತ್ನ ಎನ್.‌ ಕಾಮತ್‌ ಅವರು ಉಡುಪಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ನಗರ ಠಾಣಾ ಪೊಲೀಸರು ಎಂಟು ಮಂದಿ ಆರೋಪಿಗಳ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಗ್ರಾಹಕರ ಗಮನಕ್ಕೆ, ಮೇನಲ್ಲಿ 14 ದಿನ ಬ್ಯಾಂಕ್‌ ರಜೆ

ಇದನ್ನೂ ಓದಿ : ಎಲಾನ್​ ಮಸ್ಕ್​ ತೆಕ್ಕೆಗೆ ಟ್ವಿಟರ್​ : 3.36 ಲಕ್ಷ ಕೋಟಿ ರೂ.ಗಳಿಗೆ ಖರೀದಿ

GST scam Udupi police lodge fir Against 8 people

Comments are closed.