ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಹಾಗೂ ಬಹುಭಾಷಾ ನಟ ಸುದೀಪ್ ನಟನೆ, ಹೋಸ್ಟಿಂಗ್,ವಾಯ್ಸ್ ಓವರ್ ಜೊತೆ ಕ್ರೀಡಾಪ್ರಿಯರು ಕೂಡ ಹೌದು. ಅಪ್ಪಟ ಕ್ರಿಕೇಟ್ ಪ್ರೇಮಿಯಾಗಿರೋ ಸುದೀಪ್ ಗೆ ಈಗ ಸಂಭ್ರಮಿಸುವಂತಹ ಸುಂದರ ಗಿಫ್ಟ್ ವೊಂದು ಸಿಕ್ಕಿದೆ. ಸ್ವತಃ ಸುದೀಪ್ (Sudeep bat gift) ಆ ಕೊಡುಗೆಯಿಂದ ಖುಷಿಯಾಗಿದ್ದು ಪೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಹೌದು ಸ್ವತಃ ಕ್ರಿಕೇಟ್ ಆಟಗಾರರಾಗಿರೋ ನಟ ಸುದೀಪ್ ಗೆ ಇಂಗ್ಲೆಂಡ್ ತಂಡದ ಕ್ರಿಕೆಟಿಗ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಸ್ಪೋಟಕ ಬ್ಯಾಟ್ಸಮನ್ ಜೋಸ್ ಬಟ್ಲರ್ ತಮ್ಮ ಬ್ಯಾಟ್ ನ್ನು ಗಿಫ್ಟ್ ನ್ನಾಗಿ ನೀಡಿದ್ದಾರೆ. 2022 ನೇ ಐಪಿಎಲ್ ಆವೃತ್ತಿಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ಬ್ಯಾಟ್ಸಮನ್ ಜೋಸ್ ಬಟ್ಲರ್. ಹೀಗೆ ತಾವು ಟೂರ್ನಿಯಲ್ಲಿ ಆಡಲು ಬಳಸಿದ್ದ ಬ್ಯಾಟ್ ಮೇಲೆ ಸಹಿ ಮಾಡಿ ಅದನ್ನು ಕಿಚ್ಚ ಸುದೀಪ್ ಗೆ ಕೊಡುಗೆಯಾಗಿ ನೀಡಿದ್ದಾರೆ.
ಇದರ ಜೊತೆಗೆ ರಾಜಸ್ಥಾನ್ ರಾಯಲ್ಸ್ ತಂಡವು ಸುದೀಪ್ ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಆಟವಾಡಿದ ಪೋಟೋವೊಂದನ್ನು ಶೇರ್ ಮಾಡಿಕೊಂಡಿದೆ. ಇನ್ನೂ ತಮಗೆ ಸಿಕ್ಕಿರೋ ಈ ಪ್ರೀತಿಯ ಕೊಡುಗೆ ಬಗ್ಗೆ ಅಷ್ಟೇ ಉತ್ಸಾಹ ಹಾಗೂ ಸಂಭ್ರಮದಿಂದಲೇ ಪ್ರತಿಕ್ರಿಯೆ ನೀಡಿರೋ ಸುದೀಪ್, ವಿಡಿಯೋ ಮೂಲಕ ಜೋಶ್ ಬಟ್ಲರ್ ಗೆ ಧನ್ಯವಾದ ಹೇಳಿದ್ದಾರೆ. ಮಾತ್ರವಲ್ಲ ಜೋಶ್ ಬಟ್ಲರ್ ಬ್ಯಾಟ್ ತಮಗೆ ಸಿಗಲು ಕಾರಣವಾದ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ, ಕನ್ನಡಿಗ ಕೆ.ಸಿ.ಕಾರ್ಯಪ್ಪಗೂ ಧನ್ಯವಾದ ಹೇಳಿದ್ದಾರೆ.
A big hug to this sweet surprise and a sweetest gesture.
— Kichcha Sudeepa (@KicchaSudeep) June 9, 2022
Thank you @josbuttler@rajasthanroyals @cariappa14
🥂🥳❤️ pic.twitter.com/EyXOqyJQY0
ಈ ಬಗ್ಗೆ ಮಾತನಾಡಿರೋ ಸುದೀಪ್, ನಾನು ನೀರಿಕ್ಷೆ ಮಾಡಿದಂತಹ ಗಿಫ್ಟ್ ಇಂದು ನನ್ನ ಕೈಸೇರಿದೆ. ಇದನ್ನು ಸಾಧ್ಯವಾಗಿಸಿದ್ದಕ್ಕೆ ಸ್ನೇಹಿತ ಕೆ.ಸಿ.ಕಾರ್ಯಪ್ಪ ಗೆ ಥ್ಯಾಂಕ್ಸ್ ಹೇಳಲು ಬಯಸುತ್ತೇನೆ. ಜೋಶ್ ಬಟ್ಲರ್ ಸಲುವಾಗಿ ನಾನು ಈ ವಿಡಿಯೋ ಮಾಡಿದ್ದೇನೆ. ವೈಯಕ್ತಿಕವಾಗಿ ತಾವು ಸಹಿ ಮಾಡಿದ ಬ್ಯಾಟ್ ನನಗೆ ನೀಡಿದ್ದಕ್ಕೆ ಧನ್ಯವಾದ. ಇದನ್ನು ನಾನು ತುಂಬ ಪ್ರೀತಿಯಿಂದ ಸ್ವೀಕರಿಸಿದ್ದೇನೆ. ನಿಮಗೆ ಧನ್ಯವಾದ ಹೇಳಲು ಈ ವಿಡಿಯೋ ಮಾಡಿದ್ದೇನೆ ಎಂದು ಸುದೀಪ್ ಹೇಳಿದ್ದಾರೆ.
ಅಲ್ಲದೇ ಈ ಅಪರೂಪದ ಕೊಡುಗೆಯನ್ನು ನಾನು ಅತ್ಯಂತ ಜೋಪಾನವಾಗಿ ಕಾಪಾಡಿಕೊಳ್ಳುತ್ತೇನೆ ಎಂದು ಸುದೀಪ್ ಹೇಳಿದ್ದಾರೆ. ಈ ಭಾರಿ ಐಪಿಎಲ್ ಪಂದ್ಯಾವಳಿಯಲ್ಲಿ ಜೋಸ್ ಬಟ್ಲರ್ ಸ್ವ ಪ್ರಯತ್ನದಿಂದ ತಂಡವನ್ನು ಪೈನಲ್ ಪಂದ್ಯದವರೆಗೂ ಮುನ್ನಡೆಸಿದ್ದರು ಎಂದು ಕ್ರಿಕೆಟ್ ಪ್ರಿಯರು ಜೋಸ್ ಬಟ್ಲರ್ ಕೊಂಡಾಡಿದ್ದಾರೆ.
Hoping to get these gloves in return, legend. @KicchaSudeep 💗 https://t.co/3mwGvVPMcO pic.twitter.com/1QmPuL4fJO
— Rajasthan Royals (@rajasthanroyals) June 9, 2022
ಇದನ್ನೂ ಓದಿ : KL Rahul : ಟೀಮ್ ಇಂಡಿಯಾದಿಂದ ಹೊರ ಬಿದ್ದ ಕೆ.ಎಲ್.ರಾಹುಲ್ ಬಾವುಕ ಸಂದೇಶ
ಇದನ್ನೂ ಓದಿ : Virat Kohli New Record : 10 ವರ್ಷಗಳಲ್ಲಿ 20 ಸಾವಿರ ರನ್ ; ಶತಕ “ಬರ”ದೇ ಇದ್ರೂ ಕೊಹ್ಲಿಯೇ ಕಿಂಗ್
Jos Buttler Rajasthan Royals player who gave Sudeep bat gift