ಸಿನಿಮಾ ರಂಗದಲ್ಲಿ ಥಳುಕು, ಬಳುಕು, ನೇಮ್, ಫೇಮ್ ಎಲ್ಲವೂ ಇದ್ದರೂ, ಯಶಸ್ಸಿನ ಪಕ್ಕದಲ್ಲೇ ಸೋಲು, ಖಿನ್ನತೆ, ಆತ್ಮಹತ್ಯೆಯಂತಹ ಸಂಗತಿಗಳು ಹೊಂಚು ಹಾಕುತ್ತಲೇ ಇರುತ್ತವೆ. ಹೀಗಾಗಿಯೇ ಅದೆಷ್ಟೋ ಸ್ಟಾರ್ ಗಳು ತಮಗೆ ಸಿಕ್ಕಿದ ಜನಪ್ರಿಯತೆ ಹಾಗೂ ಸೋಲನ್ನು ಸರಿತೂಗಿಸಲಾಗದೇ ಅಳಿದು ಹೋಗಿದ್ದಾರೆ. ಟಾಲಿವುಡ್ ನ ಸ್ಟಾರ್ ನಟ ಜ್ಯೂನಿಯರ್ ಎನ್ ಟಿ ಆರ್ ಗೂ (Junior NTR) ಹೀಗೆ ಖಿನ್ನತೆ ಕಾಡಿತ್ತಂತೆ.
ಹೌದು, ಬಾಲನಟನಾಗಿ ಟಾಲಿವುಡ್ ಇಂಡಸ್ಟ್ರಿಗೆ ಕಾಲಿಟ್ಟ ಜ್ಯೂ ಎನ್ ಟಿ ಆರ್ ನೋಡುಗರ ಕಣ್ಣಿಗೆ ಸ್ಟಾರ್ ನಟ. ಆದರೆ ಅವರು ಖಿನ್ನತೆಯಿಂದ ಬಳಲಿದ ಸಂಗತಿ ಹಲವರಿಗೆ ಗೊತ್ತಿಲ್ಲ. ಸ್ವತಃ ಜ್ಯೂನಿಯರ್ ಎನ್ ಟಿ ಆರ್ ಈ ವಿಚಾರವನ್ನು ಹೇಳಿಕೊಂಡಿದ್ದಾರೆ. ಪ್ರಸ್ತುತ ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸಿರುವ ಜ್ಯೂನಿಯರ್ ಸಿನಿಮಾದ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಜ್ಯೂನಿಯರ್ ಎನ್ ಟಿಆರ್ ತಾವು ಖಿನ್ನತೆ ಗೆ ಒಳಗಾಗಿದ್ದನ್ನು ಹೇಳಿದ್ದಾರೆ.
1991 ರಲ್ಲೇ ನಟನೆ ಆರಂಭಿಸಿದ ಜ್ಯೂನಿಯರ್ ಎನ್ ಟಿ ಆರ್ 2001 ರಲ್ಲಿ ಸ್ಟೂಡೆಂಟ್ ನಂ 1 ನಲ್ಲಿ ನಟಿಸಿ ಗೆದ್ದಿದ್ದರು. ಆಗ ಅವರಿಗೆ 18 ವರ್ಷ ವಯಸ್ಸಾಗಿತ್ತು. ಆದರೆ ಬಳಿಕ ಅವರ ಸಿನಿಮಾಗಳು ಸಾಲು ಸಾಲಾಗಿ ಸೋಲು ಕಂಡಿದ್ದವು. ಈ ವೇಳೆ ಅವರು ಖಿನ್ನತೆಗೆ ಒಳಗಾಗಿದ್ದರಂತೆ. ಸೋಲನ್ನು ನಾನು ಕಠಿಣವಾಗಿ ತೆಗೆದುಕೊಂಡೆ. ಹಲವು ಸಿನಿಮಾಗಳು ಬ್ಯಾಕ್ ಟೂ ಬ್ಯಾಕ್ ಸೋತವು. ಆಗ ನನಗೆ ಖಿನ್ನತೆ ಕಾಡಿತ್ತು. ಜಗತ್ತು ಶೂನ್ಯದಂತೆ ಅನ್ನಿಸಿತ್ತು.ಸಿನಿಮಾ ಸೋತಿದ್ದಕ್ಕೆ ಖಿನ್ನತೆಗೆ ಜಾರಿದ್ದಲ್ಲ. ಆದರೆ ಓರ್ವನಟನಾಗಿ ನನಗೆ ಗೊಂದಲ ಕಾಡ ತೊಡಗಿತು. ಹೀಗಾಗಿನಾನು ಖಿನ್ನತೆಗೆ ಒಳಗಾದೆ.
ಆದರೆ ನಾನು ಖಿನ್ನತೆಗೆ ಒಳಗಾದಾಗ ನನಗೆ ರಾಜಮೌಳಿ ಧೈರ್ಯ ತುಂಬಿದರು.ನನಗೆ ಬಲ ತುಂಬಿದರು. ನನ್ನನ್ನು ನಾನು ಆತ್ಮಾವಲೋಕನ ಮಾಡಿಕೊಳ್ಳಲು ಹೇಳಿದರು. ಅಲ್ಲದೇ ನಾನು ಖಿನ್ನತೆಯಿಂದ ಹೊರಬಂದು ಹೊಸದಾಗಿ ಬದುಕು ಕಟ್ಟಲು ನೆರವಾದರು ಎಂದು ರಾಜಮೌಳಿಯ ಸಹಾಯವನ್ನು ನಟ ಜ್ಯೂನಿಯರ್ ಎನ್ ಟಿಆರ್ ನೆನಪಿಸಿಕೊಂಡಿದ್ದಾರೆ. ಇತ್ತಿಚೆಗೆ ನಟಿ ದೀಪಿಕಾ ಪಡುಕೋಣೆ ಕೂಡ ತಮ್ಮಬ್ರೇಕ್ ಅಪ್ ಬಳಿಕ ಖಿನ್ನತೆ ಗೆ ಒಳಗಾಗಿದ್ದನ್ನು ಹೇಳಿಕೊಂಡಿದ್ದರು. ಇದಲ್ಲದೇ ಹಲವು ಸೆಲೆಬ್ರೇಟಿಗಳು ಕೂಡ ತಮ್ಮ ಖಿನ್ನತೆ ಕಹಾನಿಯನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ಬಾಯ್ ಪ್ರೆಂಡ್ ಜೊತೆ ಟ್ರಿಪ್, ಬಿಕನಿ ಪೋಸ್: ಸೋಷಿಯಲ್ ಮೀಡಿಯಾಗೆ ನಶೆ ಏರಿಸಿದ ದಿಶಾ ಪಟಾಣಿ
ಇದನ್ನೂ ಓದಿ : ಲ್ಯಾಂಬೋರ್ಗಿನಿ ಹತ್ತಿದ್ರು ರಚಿತಾರಾಮ್ : ಸಾಥ್ ಕೊಟ್ರು ಚಂದನ್ ನಿವೇದಿತಾ : ಜರ್ನಿ ಹೇಗಿದೆ ಗೊತ್ತಾ
(Junior NTR faced mental depression, Student Hero unleashed pain)