Local body election result : ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟ:ಕಾಂಗ್ರೆಸ್​ ರಾಕ್​, ಬಿಜೆಪಿಗೆ ಶಾಕ್​​

Local body election result : ಮೂರೂ ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಕಣವೆನಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಡಿಸೆಂಬರ್​ 27ರಂದು ಚಿಕ್ಕಮಗಳೂರು, ಗದಗ-ಬೆಟಗೇರಿ, ತುಮಕೂರು ಜಿಲ್ಲೆಯ ಶಿರಾ, ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿ ಹಾಗೂ ವಿಜಯಪುರ ಜಿಲ್ಲೆಯ ಹೊಸಪೇಟೆ ನಗರಸಭೆಯ ಫಲಿತಾಂಶ ಹೊರಬಿದ್ದಿದ್ದು ಯಾವ್ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಗೆಲುವಿನ ನಗೆ ಬೀರಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


19, ಪುರಸಭೆ ಹಾಗೂ 34 ಪಟ್ಟಣ ಪಂಚಾಯ್ತಿಗಳಿಗೆ ಒಟ್ಟು 1185 ವಾರ್ಡ್​ಗಳಲ್ಲಿ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಒಟ್ಟು 4,961 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. 34 ಪಟ್ಟಣ ಪಂಚಾಯ್ತಿ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್​ 16 ಕಡೆಗಳಲ್ಲಿ ಗೆಲುವಿನ ನಗೆ ಬೀರಿದೆ. ಆರು ಕಡೆಗಳಲ್ಲಿ ಕಮಲ ಅರಳಿದರೆ 14 ಕಡೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ದಿಗ್ವಿಜಯ ಸಾಧಿಸಿದ್ದಾರೆ. ಪಟ್ಟಣ ಪಂಚಾಯ್ತಿ ಚುನಾವಣೆಯ ಒಂದೇ ಒಂದು ಕಡೆಯಲ್ಲಿಯೂ ಗೆಲುವು ಸಾಧಿಸಿದ ಜೆಡಿಎಸ್​ ತೀವ್ರ ಮುಖಭಂಗ ಅನುಭವಿಸಿದೆ.


ಇನ್ನು ಇತ್ತ 19 ಪುರಸಭೆ ಚುನಾವಣಾ ಫಲಿತಾಂಶದಲ್ಲಿಯೂ ಕಾಂಗ್ರೆಸ್​ ಮೇಲುಗೈ ಸಾಧಿಸಿರೋದು ವಿಶೇಷ. ಹೌದು..! ಕಾಂಗ್ರೆಸ್​ 8 ಕಡೆಗಳಲ್ಲಿ ವಿಜಯದ ಮಾಲೆ ಹಾಕಿಸಿಕೊಂಡರೆ ಬಿಜೆಪಿ ಆರು , ಜೆಡಿಎಸ್​ 1 ಹಾಗೂ 4 ಕಡೆಗಳಲ್ಲಿ ಅತಂತ್ರ ಫಲಿತಾಶ ವರದಿಯಾಗಿದೆ.


ಇನ್ನು 5 ನಗರಸಭೆಗಳಿಗೂ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಮೂರು ಕಡೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ 2 ಕಡೆಗಳಲ್ಲಿ ಅಂದರೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆ, ತುಮಕೂರು ಜಿಲ್ಲೆಯ ಶಿರಾ ನಗರಸಭೆ ಫಲಿತಾಶ ಅತಂತ್ರವಾಗಿದೆ. ಇನ್ನುಳಿದಂತೆ ಬೆಂಗಳೂರಿನ ಹೆಬ್ಬಗೋಡಿ, ಚಿಕ್ಕಮಗಳೂರು ಹಾಗೂ ಗದಗ – ಬೆಟಗೇರಿ ನಗರಸಭೆಗಳಲ್ಲಿ ಕೇಸರಿ ಬಾವುಟ ಹಾರಿದೆ

.
34 ಪಟ್ಟಣ ಪಂಚಾಯ್ತಿಗಳ ಪೈಕಿ 8 ಪಟ್ಟಣ ಪಂಚಾಯ್ತಿಗಳ 19 ವಾರ್ಡ್​ಗಳಲ್ಲಿ ಅವಿರೋಧವಾಗಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.ಹುಬ್ಬಳ್ಳಿಯ ಅರಬಾವಿ ಪಟ್ಟಣದ 1 ವಾರ್ಡ್​, ನಲತವಾಡದ 2 ವಾರ್ಡ್​ಗಳಲ್ಲಿ ಇಬ್ಬರು ಹಾಗೂ ಹುಬ್ಬಳ್ಳಿ ಪಟ್ಟಣದಲ್ಲಿಯೇ 3 ವಾರ್ಡ್​ಗಳಲ್ಲಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಕೊಪ್ಪಳದ ತಾವರೆಗೇರಾದ 2ವಾರ್ಡ್, ಭಾಗ್ಯ ನಗರದ 2 ವಾರ್ಡ್​, ಜಾಲಿ, ಕಮತಗಿ ಹಾಗೂ ಬೆಳಗಲಿಯಲ್ಲಿ ಒಂದೊಂದು ವಾರ್ಡ್​ಗಳಲ್ಲಿ ಅವಿರೋಧ ಆಯ್ಕೆಯಾಗಿದೆ.

local body election result complete detail

ಇದನ್ನು ಓದಿ : Raghaveshwara Swamiji Big Relief : ರಾಘವೇಶ್ವರ ಸ್ವಾಮೀಜಿಗೆ ಬಿಗ್‌ ರಿಲೀಫ್‌ : ಆರೋಪ ಮುಕ್ತಗೊಳಿಸಿದ ಹೈಕೋರ್ಟ್‌

ಇದನ್ನೂ ಓದಿ : HDK VS DKS War : ತಾರಕಕ್ಕೇರಿದ ಡಿಕೆಶಿ, ಎಚ್ ಡಿಕೆ ವಾರ್ : ಡಿಕೆಯನ್ನು ಕಲ್ಲು ಬಂಡೆ ನುಂಗಿದ ರಾಕ್ಷಸ ಎಂದ ಕುಮಾರಸ್ವಾಮಿ

Comments are closed.