ಮಂಗಳವಾರ, ಏಪ್ರಿಲ್ 29, 2025
HomeCinemaKabja : ಸೆಪ್ಟೆಂಬರ್ ಗೆ ಬಂದೇ ಬರ್ತದೇ ಸುದೀಪ್, ಉಪೇಂದ್ರ ಅಭಿನಯದ ಕಬ್ಜ!

Kabja : ಸೆಪ್ಟೆಂಬರ್ ಗೆ ಬಂದೇ ಬರ್ತದೇ ಸುದೀಪ್, ಉಪೇಂದ್ರ ಅಭಿನಯದ ಕಬ್ಜ!

- Advertisement -

ಬೆಂಗಳೂರು: ನಟ ಉಪೇಂದ್ರ, ಕಿಚ್ಚಾ ಸುದೀಪ್‌ ಅವರ ಬಹುತಾರಾಗಣದ ಸಿನಿಮಾ, ನಿರ್ದೇಶಕ ಆರ್. ಚಂದ್ರು ನಿರ್ದೇಶನ, ನಿರ್ಮಾಣದ ಕಬ್ಜ(Kabja) ಸಿನಿಮಾ ಯಾವಾಗ ತೆರೆಗೆ ಬರುತ್ತದೆ ಅನ್ನೋದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಸುಮಾರು ವರ್ಷಗಳ ಹಿಂದೆಯೇ ಕಬ್ಜ ಸಿನಿಮಾ ಘೋಷಣೆಯಾಗಿತ್ತು. ಉಪೇಂದ್ರ, ಸುದೀಪ್ ತಾರಾಗಣ ಎಂದು ತಿಳಿಯುತ್ತಲೇ ಅಭಿಮಾನಿಗಳು ಸಿನಿಮಾ ಬಿಡುಗಡೆಗಾಗಿ ಕ್ಯಾಲೆಂಡರ್ ಕಡೆ ನೋಡಲು ಶುರುಮಾಡಿದರು. ಆದರೆ, ಈ ತನಕ ಕಬ್ಜ ಬಿಡುಗಡೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಹಾಗಂತ, ಶೂಟಿಂಗ್ ನಿಂತಿಲ್ಲ. ಚಂದ್ರು ಅವರ ಪ್ರಕಾರ, ಸುಮಾರು 80ರಷ್ಟು ಚಿತ್ರೀಕರಣ ಪೂರ್ತಿಯಾಗಿದೆಯಂತೆ. ಕೊರೋನ ಕಾರಣದಿಂದಾಗಿ ಮಧ್ಯೆ ಶೂಟಿಂಗ್ ನಿಂತು ಹೋಗಿತ್ತು ಎನ್ನುತ್ತಾರೆ.

ಇಷ್ಟಾದರೂ, ಕಬ್ಜಾ ಸಿನಿಮಾ ಯಾವಾಗ ಪೂರ್ಣಗೊಳ್ಳುತ್ತದೆ, ಬಿಡುಗಡೆಯಾಗುತ್ತದೆ ಅನ್ನೋದನ್ನು ನಿರ್ದೇಶಕ ಚಂದ್ರು ಒಳಗೊಂಡಂತೆ ಚಿತ್ರ ತಂಡ ಮಾತ್ರ ಬಾಯಿಬಿಡುತ್ತಿಲ್ಲ. ಎಲ್ಲಾ ಸ್ಟಾರ್ ನಟರ ಹುಟ್ಟುಹಬ್ಬಕ್ಕೆ ಕಬ್ಜ ಚಿತ್ರ ತಂಡ ಶುಭಕೋರಿದಾಗ ಮತ್ತೆ ಕಬ್ಜಾ ಬಿಡುಗಡೆ ಯಾವಾಗ ಅನ್ನೋ ಪ್ರಶ್ನೆ ಎದ್ದೇಳುತ್ತದೆ.

ಸಲಗ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ನಟ ಶಿವರಾಜ್ ಕುಮಾರ್ ಅವರೇ, ದಯಮಾಡಿ ಕಬ್ಜ ಸಿನಿಮಾವನ್ನು ಬೇಗ ಮಾಡಿ, ಕಾಯಿಸಬೇಡಿ. ನಾವೆಲ್ಲ ಅದಕ್ಕೋಸ್ಕರ ಎದುರು ನೋಡುತ್ತಿದ್ದೇವೆ ಎಂದು ಚಂದ್ರೂಗೆ ಕಿವಿಮಾತು ಹೇಳಿದ್ದಾಯಿತು.

ಡಿಸೆಂಬರ್ 15, 2021ರಂದು ಸುದೀಪ್ ಕಬ್ಜದ ಬಾಕಿ ಉಳಿದ ಚಿತ್ರೀಕರಣದಲ್ಲಿ ಭಾಗಿಯಾಗುವುದಾಗಿ ಘೋಷಣೆ ಮಾಡಿದ್ದರು. ಗಾಂಧಿನಗರದ ಮೂಲದ ಪ್ರಕಾರ, ಕಬ್ಜಾ ಈಗಾಗಲೇ ಬಿಡುಗಡೆಯಾಗಬೇಕಿತ್ತು, ಆರ್ ಆರ್ ಆರ್, ಕೆಜಿಎಫ್ -2ನಂಥ ದೊಡ್ಡ ಸಿನಿಮಾಗಳು ಲೈನ್ ನಲ್ಲಿ ಇರುವುದರಿಂದ ಸಹಜವಾಗಿ ಸಿನಿಮಾ ನಿಧಾನವಾಗುತ್ತಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : Sudeep Vikrant Rona : ಯುಗಾದಿ ಹಬ್ಬದ ಸಿಹಿ ಹೆಚ್ಚಿಸಿದ ಸುದೀಪ್ : ತೆರೆಗೆ ಬರಲಿದೆ ವಿಕ್ರಾಂತ್ ರೋಣ ಟೀಸರ್

ಇನ್ನು, ಕಬ್ಜ ಸಿನಿಮಾಕ್ಕೆ ಇಬ್ಬರು ನಾಯಕಿಯರು. ಶೂಟಿಂಗ್ ಅರ್ಧ ಮುಗಿದರೂ ನಾಯಕಿ ಯಾರು ಅನ್ನೋದನ್ನು ಬಹಿರಂಗಪಡಿಸಿರಲಿಲ್ಲ. ಆದರೆ, ಎರಡು ತಿಂಗಳ ಹಿಂದಷ್ಟೇ ಚಂದ್ರು, ಶ್ರೀಯಾ ಶರಣ್ ಮೊದಲ ಹೀರೋಯಿನ್ ಅಂತ ಘೋಷಣೆ ಮಾಡಿ, ಕಂಠೀರವ ಸ್ಟುಡಿಯೋದಲ್ಲಿ ಫೋಟೋ ಶೂಟ್ ಮಾಡಿಸುವ ಮೂಲಕ ಹೀರೋಯಿನ್ ಅನ್ನು ಖಚಿತಪಡಿಸಿದರು. ಆನಂತರ ಏನಾಯ್ತು ಅನ್ನೋ ಸುದ್ದಿ ಇಲ್ಲ. ಶ್ರೀಯಾ ಉಪೇಂದ್ರ ಜೋಡಿಯಾಗಿ ನಟಿಸಲಿದ್ದಾರೆ ಅಂತ ಗಾಂಧೀನಗರ ಮಾತನಾಡಿಕೊಳ್ಳುವ ಹೊತ್ತಿಗೆ, ಸುದೀಪ್ ಜೋಡಿ ಯಾರು ಅನ್ನೋ ಕುತೂಹಲ ಚಂದ್ರು ತಣಿಸಿಲ್ಲ.

ಕಬ್ಜ ಬಗ್ಗೆ ಲೇಟೆಸ್ಟ್ ಸುದ್ದಿ ಏನೆಂದರೆ, ಸೆಪ್ಟೆಂಬರ್ ತಿಂಗಳಲ್ಲಿ ಖಂಡಿತವಾಗಿಯೂ ಬಿಡುಗಡೆಯಾಗಲಿದೆ ಅನ್ನೋದು. ಚಿತ್ರದ ನಾಯಕ ಉಪೇಂದ್ರ ಈ ಬಗ್ಗೆ ಸುಳಿವು ನೀಡಿದ್ದಾರೆ. ಕಬ್ಜ ಕೊನೆ ಕಂತಿನ ಶೂಟಿಂಗ್ ಮುಂದಿನ ತಿಂಗಳು ಮುಗಿಯುತ್ತೆ. ಬಹುಶಃ ಸೆಪ್ಟೆಂಬರ್ ನಲ್ಲಿ ಸಿನಿಮಾ ತೆರೆಕಾಣಬಹುದು ಅಂತ ಹೇಳಿದ್ದಾರೆ.

ಅಂದರೆ, ಶೂಟಿಂಗ್ ಪೂರೈಸಿ ಐದು ತಿಂಗಳ ನಂತರ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾ 7 ಭಾಷೆಯಲ್ಲಿ ಬಿಡುಗಡೆಗೊಳ್ಳುತ್ತಿದೆ. ಇದರಲ್ಲಿ ಬೆಂಗಾಲಿ ಕೂಡ ಸೇರಿದೆ. ಹೀಗಾಗಿ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಹೆಚ್ಚಿಗೆ ಇರಬಹುದು ಅಂದುಕೊಂಡು ಅಭಿಮಾನಿಗಳು ಸಮಾಧಾನ ಮಾಡಿಕೊಳ್ಳಬಹುದು.

ಹೀಗೆ, ಕಬ್ಜ ಸಿನಿಮಾ ನಿರ್ಮಾಣ, ಬಿಡುಗಡೆ ಹಾಗೂ ಕಲಾವಿದರ ಆಯ್ಕೆ ವಿಚಾರದಲ್ಲಿ ಸೀಕ್ರೇಟೋ, ನಿಧಾನವೋ ಗೊತ್ತಿಲ್ಲ, ಒಟ್ಟಾರೆ ವಿಳಂಬವೇ ಪ್ರಚಾರದ ತಂತ್ರವಾಗಿದೆ.

ಇದನ್ನೂ ಓದಿ: Upendra In Lady Getup : ಉಪೇಂದ್ರ ಲೇಡಿ ಗೆಟಪ್ ನಲ್ಲಿ ಕಾಣಿಸಿಕೊಂಡದ್ದು ಏಕೆ ಗೊತ್ತಾ? ದಿಢೀರನೆ ತೆರೆಗೆ ಬರುತ್ತಿದೆ ಹೋಮ್ ಮಿನಿಸ್ಟರ್ !

(Kabja film going to be released in September 2022)

RELATED ARTICLES

Most Popular