Upendra In Lady Getup : ಉಪೇಂದ್ರ ಲೇಡಿ ಗೆಟಪ್ ನಲ್ಲಿ ಕಾಣಿಸಿಕೊಂಡದ್ದು ಏಕೆ ಗೊತ್ತಾ? ದಿಢೀರನೆ ತೆರೆಗೆ ಬರುತ್ತಿದೆ ಹೋಮ್ ಮಿನಿಸ್ಟರ್ !

ಬೆಂಗಳೂರು : ನಟ ಉಪೇಂದ್ರ ಅಭಿನಯದ ಹೋಮ್ ಮಿನಿಸ್ಟರ್(Upendra In Lady Getup) ಸಿನಿಮಾ ನಾಳೆ ದಿಢೀರನೆ ತೆರೆಗೆ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಉಪೇಂದ್ರ ಹೆಂಡತಿ ಪ್ರಿಯಾಂಕ ಅವರನ್ನು ಕೂಡ್ರಿಸಿ, ಮನೆಗೆಲಸ ಮಾಡುವ ವೀಡಿಯೋ ಸಖತ್ ವೈರಲ್ ಆಗಿತ್ತು. ಅದುವೇ, ಚಿತ್ರದ ಪ್ರಮೋಷನ್ ಭಾಗವೂ ಆಗಿತ್ತು. ಈ ರೀತಿ ಭಿನ್ನವಿಭಿನ್ನ ತುಣುಕಗಳನ್ನು ತೋರಿಸುತ್ತಲೇ ತೆರೆಗೆ ಬರಲು ಸಿದ್ಧವಾಗಿರುವ ಹೋಮ್ ಮಿನಿಸ್ಟರ್ ನಲ್ಲಿ ಉಪೇಂದ್ರ ಪಾತ್ರ ಅಡುಗೆ ಮಾಡುವುದೇ ಆಗಿದೆ.

ಸಾಮಾನ್ಯವಾಗಿ ಅಡುಗೆಯವರ ಪಾತ್ರ ಸಿನಿಮಾದಲ್ಲಿ ಪೋಷಕ ಪಾತ್ರ ಮಾತ್ರ ಆಗಿರುತ್ತದೆ. ದರ್ಶನ ಅವರ ರಾಬರ್ಟ್ ಚಿತ್ರದಲ್ಲೂ ನಾಯಕನಿಗೆ ಅಡುಗೆ ಮಾಡುವುದು ವೃತ್ತಿ. ಈಗ ಉಪೇಂದ್ರ ಅವರ ಹೋಮ್ ಮಿನಿಸ್ಟರ್ ನಲ್ಲಿ ಅಂತದೇ ಅಡುಗೆಯವನನ್ನೇ ಹೀರೋ ರೀತಿ ಬಿಂಬಿಸಲಾಗುತ್ತಿದೆ.
ಉಪೇಂದ್ರ ಪ್ರಕಾರ ಇದು ಭಿನ್ನವಾದ ಸಿನಿಮಾ ಅಂತೆ. ‘ಅಡುಗೆ ಮಾಡುತ್ತಲೇ ಹೆಣ್ಣು ಮಕ್ಕಳು ಏನೆಲ್ಲಾ ಮಾಡ್ತಾರೆ. ಅದೇರೀತಿ ನಮ್ಮ ಸಿನಿಮಾದಲ್ಲಿ ಅಡುಗೆ ಮಾಡುವವನೇ ಹೀರೋ, ಅದರ ಜೊತೆಗೆ ಇನ್ನು ಏನೇನೆಲ್ಲಾ ಮಾಡ್ತಾನೆ ಅನ್ನೋದೇ ಸಿನಿಮಾದ ಹೂರಣ’ ಅಂತಾರೆ.

ಇದನ್ನೂ ಓದಿ: Rajamouli Next Film Hero : ರಾಜಮೌಳಿ ಮುಂದಿನ ಚಿತ್ರದ ನಾಯಕ ಇವರೇನಾ…?ಕುತೂಹಲ ಮೂಡಿಸಿದ ಮುಂದಿನ ಚಿತ್ರ

ಉಪೇಂದ್ರ ಹೋಮ್ ಮಿನಿಸ್ಟರ್‌ ಸಿನಿಮಾದಲ್ಲಿ ಹೆಣ್ಣಿನ ಗೆಟಪ್ (Upendra In Lady Getup ) ನಲ್ಲಿ ಕಾಣಿಸಿಕೊಂಡಿದ್ದಾರೆ:
ಇದು ಬಹಳ ಕುತೂಹಲಕಾರಿಯಾದ ವಿಷಯವೂ ಆಗಿದೆ. ಹೀರೋ, ಇದ್ದಕ್ಕಿದ್ದಂತೆ ಏಕೆ ಹಣ್ಣುಮಗಳ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋದಕ್ಕೆ ಉಪೇಂದ್ರ ಹೇಳಿದ್ದು ಇಷ್ಟು. ‘ನೀವು ನೋಡಿದ್ದೀರಲ್ಲ ಹೆಣ್ಣಿನ ಗೆಟಪ್ ನ ಫೋಟೋ. ಅದರಿಂದಲೇ ಕತೆಗೆ ತಿರುವು. ಕೆಲವೇ ನಿಮಿಷಗಳ ಪಾತ್ರವದು. ಅದರಿಂದಲೇ ಇಡೀ ಚಿತ್ರಕ್ಕೆ ತಿರುವುಸಿಗುವುದು. ಹಾಗಾಗಿ, ಆ ವೇಷಭೂಷಣದಲ್ಲಿ ನಾನು ಕಾಣಿಸಿಕೊಂಡಿದ್ದೀನಿ’ ಎನ್ನುತ್ತಾರೆ.

ಉಪೇಂದ್ರ ಈ ಸಿನಿಮಾದ ಮೂಲಕ, ಪ್ರತಿ ಮನೆಯಲ್ಲಿ ಹೆಂಡತಿಗೆ ದೊರಕಿರುವ ಹೋಮ್ ಮಿನಿಸ್ಟರ್ ಪಟ್ಟವನ್ನು ಏನಾದರು ಬದಲಿಸಲು ಹೊರಟಿದ್ದಾರಾ? ಹಾಗಾದರೆ ಈ ಸಿನಿಮಾದಲ್ಲಿ ನಿಜವಾದ ಹೋಮ್ ಮಿನಿಸ್ಟರ್ ಯಾರು ಅಂದಾಗ- ‘ನಿಜವಾದ ಹೋಮ್ ಮಿನಿಸ್ಟರ್ ಹೆಣ್ಣು ಮಕ್ಕಳೇ. ನಾನು ಅವರಿಗೆ ರೀಪ್ಲೇಸ್ ಮೆಂಟ್ ಅಂತೇನು ಮಾಡ್ತಿಲ್ಲ. ಅಡುಗೆಮನೆ ಆಚೆಗೂ ಅವರ ಸಾಧನೆ ದೊಡ್ಡದು. ಗಂಡ ತನ್ನ ಪತ್ನಿಗೆ ಹೆಗಲುಕೊಟ್ಟುಕೊಂಡೇ ಏನೇನೆಲ್ಲ ಮಾಡುತ್ತಾನೆ ಅನ್ನೋದನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ’ ಎಂದು ವಿವರಣೆ ಕೊಡುತ್ತಾರೆ ಉಪೇಂದ್ರ.

ಕೋವಿಡ್ ಹಾಗೂ ಪ್ರಜಾಕೀಯ ಪಕ್ಷಕ್ಕೆ ತೊಡಗಿಸಿಕೊಂಡಿದ್ದರಿಂದ ಉಪೇಂದ್ರ ನಟನೆಯಿಂದ ಸ್ವಲ್ಪಕಾಲ ದೂರವಿದ್ದರು. ಆ ನಂತರ ಯೂ ಚಿತ್ರವನ್ನು ನಿರ್ದೇಶಿಸುವ ಬಗ್ಗೆ ಘೋಷಣೆ ಮಾಡಿದರು. ಈ ಮಧ್ಯೆ, ಹೋಮ್ ಮಿನಿಸ್ಟರ್ ತೆರೆಕಾಣುತ್ತಿದೆ.

ಇದನ್ನೂ ಓದಿ: Real Star Upendra ಬರ್ತಡೇಗೆ ಗಿಫ್ಟ್: ರಿಲೀಸ್ ಆಗ್ತಿದೆ ಕಬ್ಜ ಮೋಷನ್ ಪೋಸ್ಟರ್

(Upendra In Lady Getup Why Actor Upendra has worn a lady getup in the Homeminister film)

Comments are closed.